ಇನ್ನಷ್ಟು ದೊಡ್ಡದಾಗ್ತಿದೆ ದುನಿಯಾ ವಿಜಯ್‌ ದುನಿಯಾ; ವಿಜಯ್‌ ಸೇತುಪತಿ, ಪುರಿ ಜಗನ್‌ನಾಥ್‌ ಬಳಗ ಸೇರಿದ ವಿಜಿ

Duniya Vijay Vijay Sethupathi New Film: ಸದಾ ವಿಭಿನ್ನ ಹಾಗೂ ಮಾಸ್ ಸಿನಿಮಾಗಳನ್ನು ನೀಡುವ ‘ಡ್ಯಾಷಿಂಗ್ ಡೈರೆಕ್ಟರ್’ ಪುರಿ ಜಗನ್ನಾಥ್ ಹಾಗೂ ಬಹುಮುಖ ಪ್ರತಿಭೆ ವಿಜಯ್ ಸೇತುಪತಿ ಒಂದಾಗುತ್ತಿರುವುದು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕುತೂಹಲ ಮೂಡಿಸಿತ್ತು. ಇದೀಗ ಈ ಚಿತ್ರಕ್ಕೆ ‘ಸ್ಲಂಡಾಗ್-33 ಟೆಂಪಲ್ ರೋಡ್’ (Slumdog-33 Temple Road) ಎಂದು ನಾಮಕರಣ ಮಾಡಲಾಗಿದೆ. ಕನ್ನಡದ ಖ್ಯಾತ ನಟ ದುನಿಯಾ ವಿಜಯ್ ಸಹ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ರಕ್ತಸಿಕ್ತ ಅವತಾರದಲ್ಲಿ ಸೇತುಪತಿ

ಟೈಟಲ್ ಅನೌನ್ಸ್ ಮಾಡುವ ಜೊತೆಗೆ ಚಿತ್ರತಂಡ ವಿಜಯ್ ಸೇತುಪತಿ ಅವರ ಖಡಕ್ ಲುಕ್ ಬಿಡುಗಡೆ ಮಾಡಿದೆ. ಪೋಸ್ಟರ್‌ನಲ್ಲಿ ವಿಜಯ್ ಸೇತುಪತಿ ಅವರು ರಕ್ತಸಿಕ್ತ ಕತ್ತಿಯನ್ನು ಹಿಡಿದು, ಹರಿದ ಬಟ್ಟೆ ಧರಿಸಿ ಅತ್ಯಂತ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ನೋಡಿದರೆ ಪುರಿ ಜಗನ್ನಾಥ್ ಅವರು ವಿಜಯ್ ಸೇತುಪತಿಗಾಗಿ ಒಂದು ಪಕ್ಕಾ ಮಾಸ್ ಆಕ್ಷನ್ ಕಥೆಯನ್ನು ಸಿದ್ಧಪಡಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

ತಾರಾಬಳಗದಲ್ಲಿ ಯಾರೆಲ್ಲಿದ್ದಾರೆ?

ಈ ಸಿನಿಮಾದಲ್ಲಿ ದೊಡ್ಡ ತಾರಾಬಳಗವೇ ಕಾಣಿಸಿಕೊಳ್ಳುತ್ತಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದೆ:

ನಾಯಕಿ: ಸಂಯುಕ್ತ ಮೆನನ್

ಪ್ರಮುಖ ಪಾತ್ರಗಳು: ಕನ್ನಡದ ಖ್ಯಾತ ನಟ ದುನಿಯಾ ವಿಜಯ್, ಬಾಲಿವುಡ್ ನಟಿ ಟಬು, ಬ್ರಹ್ಮಾನಂದಂ ಮತ್ತು ವಿಟಿವಿ ಗಣೇಶ್.

ಸಂಗೀತ: ‘ಅರ್ಜುನ್ ರೆಡ್ಡಿ’ ಮತ್ತು ‘ಅನಿಮಲ್’ ಖ್ಯಾತಿಯ ಹರ್ಷವರ್ಧನ್ ರಾಮೇಶ್ವರ್ ಈ ಚಿತ್ರಕ್ಕೆ ಸಂಗೀತ ಒದಗಿಸುತ್ತಿದ್ದಾರೆ.

ಶಿಕ್ಷೆ ಪವರ್‌ ಟಿವಿ ಎಂಡಿ ರಾಕೇಶ್ ಶೆಟ್ಟಿಗೆ, ಖರ್ಚು ರವಿಕಾಂತೇಗೌಡರಿಗೆ! ನ್ಯಾಯಾಲಯದ ಆದೇಶಕ್ಕೆ ಕಾರಣವೇನು?

ನಿರ್ಮಾಣ ಮತ್ತು ಬಿಡುಗಡೆ

ಪುರಿ ಜಗನ್ನಾಥ್ ಅವರ ‘ಪುರಿ ಕನೆಕ್ಟ್ಸ್’ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಜೆಬಿ ನಾರಾಯಣ್ ರಾವ್ ಅವರ ‘ಜೆಬಿ ಮೋಷನ್ ಪಿಕ್ಚರ್ಸ್’ ಸಹಯೋಗದೊಂದಿಗೆ ಚಾರ್ಮಿ ಕೌರ್ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಈ ಚಿತ್ರವು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories