Harsha Family : ಮಗನನ್ನು ಕಳೆದುಕೊಂಡ ನೋವಲ್ಲೂ ಗಾಯಾಳುಗಳಿಗೆ ಆರ್ಥಿಕ ನೆರವು ನೀಡಿದ ಹರ್ಷ ಕುಟುಂಬ

ಶಿವಮೊಗ್ಗ : ಹಿಂದೂ ಪರ ಸಂಘಟನೆಯ ಕಾರ್ಯಕರ್ತ ಹರ್ಷ ಕೊಲೆಯ ಬಳಿಕ ಕಂಗಾಲಾಗಿದ್ದ ಹರ್ಷನ ಕುಟುಂಬ (Harsha Family ) ಪ್ರತಿನಿತ್ಯ ಕಣ್ಣೀರಿನಲ್ಲಿ ಕೈತೊಳೆಯುತ್ತಿದೆ. ಇದ್ದೊಬ್ಬ ದುಡಿಯುವ ಮಗನನ್ನು ಕಳೆದುಕೊಂಡ ಕುಟುಂಬಸ್ಥರು ನೋವಿನಲ್ಲೇ ಕಾಲಕಳೆಯುತ್ತಿದ್ದಾರೆ. ಆದರೆ ಈ ನೋವಿನ ನಡುವಲ್ಲೂ ಹರ್ಷ ಕುಟುಂಬಸ್ಥರು ಇತರರ ನೋವಿಗೆ ಸ್ಪಂದಿಸಿದ್ದಾರೆ.‌ ಮೆಗ್ಗಾನ ಆಸ್ಪತ್ರೆಗೆ ಆಗಮಿಸಿದ ಕುಟುಂಬಸ್ಥರು ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಧನ ಸಹಾಯ ಮಾಡಿದ್ದಾರೆ.

ಹರ್ಷ ತಂದೆ ನಾಗರಾಜ್, ತಾಯಿ ಪದ್ಮಾ ಸಹೋದರಿಯರಾದ ಅಶ್ವಿನಿ ಹಾಗೂ ರಜನಿ ಮೆಗ್ಗಾನ ಜಿಲ್ಲಾಸ್ಪತ್ರೆಗೆ ಆಗಮಿಸಿದರು.ಈ ವೇಳೆ ಹರ್ಷ ಶವಯಾತ್ರೆ ವೇಳೆ ನಡೆದ ಗಲಾಟೆ ಯಲ್ಲಿ ಗಾಯಗೊಂಡ ಹಲವರನ್ನು ಹರ್ಷಾ ಕುಟುಂಬಸ್ಥರು ಮಾತನಾಡಿಸಿ ಸಾಂತ್ವನ ಹೇಳಿದರು. ಪ್ರತಿಯೊಬ್ಬ ಗಾಯಾಳು ಬೆಡ್ ಬಳಿ ತೆರಳಿದ ಹರ್ಷ ತಾಯಿ ಪ್ರತಿಯೊಬ್ಬರನ್ನು ಮಾತನಾಡಿಸಿ ಸಂತೈಸಿದರು. ಹಲವು ಗಾಯಾಳುಗಳ ಪೋಷಕರ ಜೊತೆ ಮಾತನಾಡಿದ ಹರ್ಷ ತಾಯಿ ಪದ್ಮಾ, ಕ್ಷಮಿಸಿ ನಮ್ಮ ಮಗನಿಂದಾಗಿ, ನಮ್ಮ ಮಗನ ಸಾವಿನಿಂದಾಗಿ ನಿಮ್ಮ ಮಗನಿಗೆ ಗಾಯವಾಯ್ತು. ಅವನು ಆಸ್ಪತ್ರೆ ಸೇರುವಂತಾಯಿತು ಕ್ಷಮಿಸಿ ಎಂದು ಕ್ಷಮೆಯಾಚಿಸಿದರು.

ಅಷ್ಟೇ ಅಲ್ಲ ಎಲ್ಲ ಗಾಯಾಳುಗಳಿಗೂ ಸೂಕ್ತ ಚಿಕಿತ್ಸೆ ಪಡೆದುಕೊಂಡು ಬಳಿಕ ಸೂಕ್ತ ವಿಶ್ರಾಂತಿಯನ್ನು ಪಡೆದು ಕೊಳ್ಳುವಂತೆ ಹರ್ಷ ಕುಟುಂಬಸ್ಥರು ಮನವಿ ಮಾಡಿದರು.
ಈ ವೇಳೆ ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ಕಂಡು ಭಾವುಕರಾದ ಹರ್ಷ ತಾಯಿ, ನನ್ನ ಮಗನಂತೂ ಬದುಕಲಿಲ್ಲ. ಈ ಮಕ್ಕಳು ನನ್ನ ಮಕ್ಕಳಂತೆ. ಇವರು ಬೇಗ ಚೇತರಿಸಿಕೊಳ್ಳುವಂತೆ ಚಿಕಿತ್ಸೆ ನೀಡಿ ಎಂದು ಮನವಿ ಮಾಡಿದರು.

ಹರ್ಷ ತಾಯಿಯನ್ನು ತಬ್ಬಿಕೊಂಡು ಮಹಿಳಾ ವೈದ್ಯೇ ಸಮಾಧಾನ ಪಡಿಸಿದರು. ಇದಕ್ಕೂ ಮುನ್ನ ಹರ್ಷ ಕುಟುಂಬ ಶಿವಮೊಗ್ಗದಲ್ಲಿ ಸುದ್ದಿಗೋಷ್ಟಿ ನಡೆಸಿತು. ಈ ವೇಳೆ ಮಾತನಾಡಿದ ಹರ್ಷ ತಾಯಿ ಪದ್ಮಾ ಇಡೀ ದೇಶಕ್ಕೆ ನಮಸ್ಕಾರ ಎಂದು ಮಾತು ಆರಂಭಿಸಿದರು. ಅಲ್ಲದೇ ನಾನು ಪ್ರತಿಯೊಬ್ಬರಲ್ಲೂ ಹರ್ಷ ನ ಕಾಣುತ್ತಿದ್ದೇನೆ. ಪ್ರತಿ ಮನೆಯಲ್ಲೂ ನನ್ನ ಮಗ ಹರ್ಷ ನನ್ನು ಕಾಣುತ್ತಿದ್ದೇವೆ.ಎಲ್ಲರೂ ಧೈರ್ಯ ತುಂಬುತ್ತಿದ್ದಾರೆಕಾಂತೇಶ್, ಸಚಿನ್, ಪುರಷೋತಮ್ ಸಾಕಷ್ಟು ಸಾಹಯ ಮಾಡಿದ್ರು ಅವರಿಗೆಲ್ಲ ನನ್ನ ಧನ್ಯವಾದ ಎಂದರು.

ಇನ್ನು ಬಳಿಕ ಮಾತನಾಡಿದ ಸಹೋದರಿ ರಜನಿ, ಹರ್ಷನ ನಿಧನದ ಬಳಿಕ ಸಾಕಷ್ಟು ಅಣ್ಣತಮ್ಮಂದಿರು ನಮ್ಮನ್ನು ಸಮಾಧಾನ ಪಡಿಸಿ ಬೆಂಬಲಕ್ಕೆ ನಿಂತಿದ್ದಾರೆ. ಇದಕ್ಕಾಗಿ ನಾವು ಋಣಿಯಾಗಿರುತ್ತೇವೆ ಎಂದರು. ಇದಕ್ಕೂ ಮೊದಲು ಹರ್ಷ ಸಹೋದರಿ ಜೈಶ್ರೀರಾಮ ಎಂಬ ಘೋಷಣೆಯೊಂದಿಗೆ ತಮ್ಮ ಮಾತು ಆರಂಭಿಸಿದರು.

ಇದನ್ನೂ ಓದಿ : ಹರ್ಷನ ಕತೆ‌ ಮುಗೀತು, ನೆಕ್ಸ್ಟ್ ನಿನ್ನ ಸರದಿ : ಹಿಂದೂಪರ ಕಾರ್ಯಕರ್ತನಿಗೆ ಬೆದರಿಕೆ ಕರೆ

ಇದನ್ನೂ ಓದಿ : ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ : ಪೊಲೀಸರ ವಿರುದ್ಧವೂ ತನಿಖೆಗೆ ಆದೇಶಿಸಿದ ಗೃಹಸಚಿವ

(Shivamogga Harsha Family Members Visit to Meggan Hospital)

Comments are closed.