The Omicron Variant : ಒಮಿಕ್ರಾನ್​ ರೂಪಾಂತರಿ ಹೆಸರಿನಲ್ಲಿ ಸಿನಿಮಾ ತೆರೆಕಂಡಿತ್ತೇ..? ಫ್ಯಾಕ್ಟ್​ಚೆಕ್​​ನಲ್ಲಿ ಬಯಲಾಯ್ತು ಅಸಲಿಯತ್ತು

( Fact check ) ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿಯೇ ಕೋವಿಡ್​ 19ನ ಹೊಸ ರೂಪಾಂತರಿ ಓಮಿಕ್ರಾನ್​ (The Omicron Variant)ಕಾಣಿಸಿಕೊಂಡಿದೆ. ಸಂಭವನೀಯ ಕೋವಿಡ್​ ಮೂರನೆ ಅಲೆಯು ಈ ರೂಪಾಂತರಿಯಿಂದಲೇ ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಸರ್ಕಾರ ಈಗಾಗಲೇ ಸಾಕಷ್ಟು ಮುಂಜಾಗ್ರತಾ ಕ್ರಮಗಳು ಹಾಗೂ ಮೂರನೆ ಅಲೆಯನ್ನು ನಿರ್ವಹಿಸಲು ಸಕಲ ತಯಾರಿಯನ್ನು ಕೈಗೊಳ್ಳುತ್ತಿದೆ. ಈ ಎಲ್ಲದರ ನಡುವೆಯೇ ಸೋಶಿಯಲ್​ ಮೀಡಿಯಾದಲ್ಲಿ ಮಾತ್ರ ಓಮಿಕ್ರಾನ್​ ರೂಪಾಂತರಿ ( The Omicron Variant )ಎಂಬ ಹೆಸರಿನ ಸಿನಿಮಾದ ಪೋಸ್ಟರ್ ( Viral poster )​ ಒಂದು ವ್ಯಾಪಕವಾಗಿ ವೈರಲ್​ ಆಗುತ್ತಿದೆ. ಕೊರೊನಾದ ಈ ರೂಪಾಂತರಿ ಜನ್ಮ ತಾಳುವುದಕ್ಕೂ ಮುನ್ನವೇ ಈ ಹೆಸರಿನ ಸಿನಿಮಾವೊಂದು ತೆರೆ ಕಂಡಿತ್ತು ಎಂದು ನೆಟ್ಟಿಗರು ಮಾತನಾಡಿಕೊಳ್ಳಲು ಆರಂಭಿಸಿದ್ದಾರೆ.

ಈ ಸಿನಿಮಾದ ಪೋಸ್ಟರ್​ ನೋಡಿದ ತಕ್ಷಣವೇ ಇದೊಂದು ಹಾರರ್​ ಮೂವಿ ಇರಬಹುದು ಎಂದು ಅಂದಾಜಿಸುವಂತಿದೆ. ಪೋಸ್ಟರ್​ನಲ್ಲಿ ಯುವಕ ಹಾಗೂ ಯುವತಿ ಆಕಾಶದಲ್ಲಿರುವ ನಕ್ಷತ್ರವನ್ನು ನೋಡುತ್ತಿದ್ದರೆ ಹಿಂದೆ ಬ್ಯಾಕ್​​ಗ್ರೌಂಡ್​ನಲ್ಲಿ ರಕ್ತ ಸಿಕ್ತವಾದ ಕೈಯೊಂದನ್ನು ಕಾಣಬಹುದಾಗಿದೆ.

ಇಡೀ ಭೂಮಿಯೇ ಸ್ಮಶಾನವಾಗಿ ಪರಿವರ್ತನೆಯಾದ ದಿನ ಎಂದು ಈ ಸಿನಿಮಾದ ಪೋಸ್ಟರ್​ನಲ್ಲಿ ಟ್ಯಾಗ್​ಲೈನ್​ ಕೂಡ ಇರೋದನ್ನು ನೀವು ಕಾಣಬಹುದಾಗಿದೆ.
ಈ ಸಿನಿಮಾದ ಪೋಸ್ಟರ್​ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದ್ದಂತೆಯೇ ನೆಟ್ಟಿಗರು ಬಹಳ ಹಿಂದೆಯೇ ಈ ಸಾಂಕ್ರಾಮಿಕದ ಬಗ್ಗೆ ಉಲ್ಲೇಖಿಸಲಾಗಿತ್ತು ಎಂದು ಅಭಿಪ್ರಾಯ ಹೊರಹಾಕಲು ಆರಂಭಿಸಿದ್ದಾರೆ.

ಅಂದಹಾಗೆ ಈ ಪೋಸ್ಟರ್​ನ್ನು ಈ ರೀತಿ ಎಡಿಟರ್​ ಮಾಡಿದ್ದು ಐರಿಷ್​​ ನಿರ್ದೇಶಕಿ ಬೆಕ್ಕಿ ಚೀಟಲ್​. 1974ರಲ್ಲಿ ತೆರೆಕಂಡ ಸ್ಪ್ಯಾನಿಶ್​ ಭಾಷೆಯ ಸುಸೆಸೋಸ್​​ ಎನ್​ ಲಾ ಕ್ವೇರ್ತಾ ಫಾಸೆ ಎಂಬ ಹೆಸರಿನ ಸಿನಿಮಾ ಪೋಸ್ಟರ್​ನ್ನು ಬಳಸಿ ಈ ರೀತಿ ಒಮಿಕ್ರಾನ್​ ರೂಪಾಂತರಿ ಎಂಬ ನಕಲಿ ಪೋಸ್ಟರ್​ ಹರಿಬಿಟ್ಟಿದ್ದಾರೆ. ಈ ಮೂಲಕ ಓಮಿಕ್ರಾನ್​ ಹೆಸರಿನ ಸಿನಿಮಾ ತೆರೆಕಂಡಿತ್ತೇ ಎಂಬ ವಂದತಿಗೆ ತೆರೆ ಎಳೆದಂತಾಗಿದೆ.

ಇದನ್ನು ಓದಿ :GOAT : ಇದು ಕೋತಿಚೇಷ್ಟೆಯಲ್ಲ ಮೇಕೆಚೇಷ್ಟೆ..! ಉದ್ಯೋಗಿಯೊಬ್ಬನ ಆಫೀಸ್​ ಫೈಲು ಹಿಡಿದು ಅಡ್ಡಾಡಿಸಿದ ಮೇಕೆ

Fact check: Is there a movie called ‘The Omicron Variant’? Viral poster is fake

Comments are closed.