Samantha Ruth Prabhu : ಕಿಕ್ ಏರಿಸಲು ಹೊರಟ ಸಮಂತಾಗೆ ಅಭಿಮಾನಿಗಳ ಕಿರಿಕ್

ಕಳೆದ ಆರು ತಿಂಗಳಿನಿಂದ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗ್ತಿರೋ ಸೌತ್ ಬೆಡಗಿ ಸಮಂತಾ (Samantha Ruth Prabhu) ವೈಯಕ್ತಿಕ ಬದುಕಿನ ಜೊತೆಗೆ ಪ್ರೊಫೆಶನಲ್ ವಿಚಾರಕ್ಕೂ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಟಿ ಸಮಂತಾ ಅಕ್ಕಿನೇನಿ (samantha akkineni) ಕುಟುಂಬದಿಂದ ಹೊರಬಂದರು.‌ ಮಾತ್ರವಲ್ಲ ನಾಗಚೈತನ್ಯ ಜೊತೆಗೆ ಸಂಬಂಧವನ್ನು ಕಡಿದು ಕೊಂಡರು. ಇದಾದ ಬಳಿಕವೂ ತಿಂಗಳುಗಳ ಕಾಲ ಸಮಂತಾ ವಿಚ್ಛೇಧನ ಸುದ್ದಿಯಾಗುತ್ತಲೇ ಇತ್ತು.

ಇಂತಿಪ್ಪ ಸಮಂತಾ ವಿಚ್ಛೇಧನದ ಬಳಿಕ ನಟನೆಯಲ್ಲಿ ಉತ್ತುಂಗಕ್ಕೇರಿದ್ದಾರೆ. ಸಾಕಷ್ಟು ಬೋಲ್ಡ್ ಪಾತ್ರಗಳಲ್ಲಿ ನಟಿಸಿದ ಸಮಂತಾ ಈಗ ಜಾಹೀರಾತಿನಲ್ಲೂ ಮಿಂಚುತ್ತಿದ್ದಾರೆ. ಆದರೆ ಅಭಿಮಾನಿಗಳ ಅಚ್ಚುಮೆಚ್ಚಾಗಿರೋ ನಟಿ ಸಮಂತಾ ರುತ್ ಪ್ರಭು ಈಗ ತಮ್ಮ ನಿರ್ಧಾರವೊಂದರಲ್ಲಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರಂತೆ. ಹೌದು, ಸಮಂತಾ ಇತ್ತೀಚಿಗೆ ಅಲ್ಕೋಹಾಲ್ ವೊಂದರ ಜಾಹೀರಾತಿನಲ್ಲಿ ನಟಿಸಿದ್ದಾರೆ.

ಈ ಜಾಹೀರಾತಿಗಾಗಿ ಸಮಂತಾ ಸಖತ್ ಹಾಟ್ ಹಾಟ್ ಡ್ರೆಸ್ ಗಳಲ್ಲಿ ತಮ್ಮ ಮಾದಕ ಮೈಮಾಟ ಪ್ರದರ್ಶಿಸಿದ್ದಾರೆ. ಈ ಜಾಹೀರಾತನ್ನು ಸ್ವತಃ ಸಮಂತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಜಾಹೀರಾತನ್ನು‌ ನೋಡಿದ ಸಮಂತಾ ಫ್ಯಾನ್ಸ್ ಗಳು ಸಖತ್ ಸಿಟ್ಟಾಗಿದ್ದು ನೆಗೆಟಿವ್ ಕಮೆಂಟ್ ಮೂಲಕ ತಮ್ಮ ಅಭಿಪ್ರಾಯವನ್ನು ದಾಖಲಿಸುತ್ತಿದ್ದಾರೆ.

ನೀವು ಹೀಗೆಲ್ಲ ಕಾಣಿಸಿಕೊಳ್ಳೋದು ನಮಗೆ ಇಷ್ಟವಾಗುತ್ತಿಲ್ಲ. ಇಷ್ಟೆಲ್ಲಾ ಮಾಡರ್ನ್ ಬಟ್ಟೆಗಳು ಬೇಕಾ? ನಿಮ್ಮ ಮೇಲೆ ಅಭಿಮಾನವಿದೆ. ನೀವು ಹೀಗೆಲ್ಲಾ ಆಡಬೇಡಿ ಎಂದೆಲ್ಲ ಅಭಿಮಾನಿಗಳು ಸಮಂತಾಗೆ ಕಮೆಂಟ್ ಮೂಲಕ ಎಚ್ಚರಿಕೆ ನೀಡುತ್ತಿದ್ದಾರಂತೆ. ಇಷ್ಟಕ್ಕೂ ಸಮಂತಾ ಹಾಟ್ ಹಾಟ್ ರೂಪದಲ್ಲಿ ಕಾಣಿಸಿಕೊಳ್ತಿರೋದು ಇದೇ ಮೊದಲಲ್ಲ. ಹಲವು ಸಿನಿಮಾದಲ್ಲೂ ಹಾಟ್ ಹಾಟ್ ಆಗಿ‌ ಮಿಂಚಿರೋ ಸಮಂತಾ (Samantha Ruth Prabhu) , ಪುಷ್ಪ ಸಿನಿಮಾದಲ್ಲಂತೂ ಊ ಅಂಟಾವಾ ಅಂತ ಮೈ ಚಳಿ ಬಿಟ್ಟು, ಮತ್ತೇರಿಸುವಂತೆ ಕುಣಿದಿದ್ದಾರೆ.

ಆಗಲೂ ಲೋಕವೇ ಮೆಚ್ಚಿಕೊಂಡ ಹಾಡಿಗೆ ಸಮಂತಾ ಫ್ಯಾನ್ಸ್ ಆಕ್ಷೇಪ ವ್ಯಕ್ತಪಡಿಸಿದ್ದು, ಎಕ್ಸಪೋಸ್ ಮಾಡಬೇಡಿ ಎಂದೆಲ್ಲ ಸಲಹೆ ನೀಡಿದ್ದರಂತೆ. ಈಗಲೂ ಸಮಂತಾ ಹಾಟ್ ಅವತಾರ ಅಭಿಮಾನಿಗಳ ಕಣ್ಣು ಕೆಂಪಾಗಿಸಿದೆ. ಪುಷ್ಪದ ಬಳಿಕ ಹಲವು ಸಿನಿಮಾ ಆಫರ್ ಗಳು ಸಮಂತಾ ಕೈಯಲ್ಲಿದ್ದು, ಸಾಕಷ್ಟು ಎಚ್ಚರಿಕೆಯಿಂದ ಸಮಂತಾ ಸಿನಿಮಾ ಆಯ್ಕೆ‌ ಮಾಡಿಕೊಳ್ತಿದ್ದಾರಂತೆ. ಕೆಲದಿನಗಳ ಹಿಂದೆಯಷ್ಟೇ ಸಮಂತಾ ಅಕ್ಕಿನೇನಿ‌ ಕುಟುಂಬಕ್ಕೆ ತಮ್ಮ ಮದುವೆ ಸೀರೆಯನ್ನು ವಾಪಸ್ ಮಾಡೋ ಮೂಲಕ ಶಾಕ್ ನೀಡಿದ್ದರು. ಇದರ ಬೆನ್ನಲ್ಲೇ ಈಗ ಸಮಂತಾ ಅಲ್ಕೋಹಾಲ್ ಜಾಹೀರಾತಿನ ಅವತಾರಕ್ಕೆ ಮತ್ತೆ ಸೋಷಿಯಲ್ ಮೀಡಿಯಾದ ಹಾಟ್ ಸಬ್ಜೆಕ್ಟ್ ಆಗಿದ್ದಾರೆ.

ಇದನ್ನೂ ಓದಿ :  ರಿಲೀಸ್ ಗೆ ರೆಡಿಯಾಯ್ತು ರಶ್ಮಿಕಾ ಬಾಲಿವುಡ್ ಮೂವಿ ಮಿಶನ್ ಮಜ್ನು

ಇದನ್ನೂ ಓದಿ : ಸ್ಟಾರ್ ಪುತ್ರಿಯನ್ನೂ ಕಾಡಿದ ಕಾಸ್ಟಿಂಗ್ ಕೌಚ್ : ನಟಿ ಹಂಚಿಕೊಂಡ್ರು ಕಹಿನೆನಪು

( fans warning for Samantha ruth prabhu)

Comments are closed.