ಕಾಶ್ಮೀರದಲ್ಲಿ ಭಾರತೀಯ ಸೇನೆಯ ಹೆಲಿಕಾಫ್ಟರ್‌ ಪತನ

ನವದೆಹಲಿ : ಅನಾರೋಗ್ಯದಿಂದ ಬಳಲುತ್ತಿದ್ದ ಬಿಎಸ್‌ಎಫ್‌ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಭಾರತೀಯ ಸೇನೆಯ ಹೆಲಿಕಾಪ್ಟರ್‌ ಪತನವಾಗಿದೆ (Indian Army chopper crashes) ಎಂದು ರಾಷ್ಟ್ರೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ.

ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಪತನಗೊಂಡಿದೆ. ಉತ್ತರ ಕಾಶ್ಮೀರದ ಇಲ್ಲಿಂದ 200 ಕಿಮೀ ದೂರದಲ್ಲಿರುವ ತುಲೈಲ್‌ನ ಗುಜ್ರಾನ್ ನಲ್ಲಾಹ್ ಪ್ರದೇಶದ ಬಳಿ ಅಪಘಾತ ಸಂಭವಿಸಿದೆ. ಟೇಕ್‌ ಆಫ್‌ ಆದ ತಕ್ಷಣ ಅಪಘಾತ ಸಂಭವಿಸಿದೆ. ಈ ಪ್ರದೇಶವು ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯ ಬಳಿ ಇದೆ. ಬಿಎಸ್‌ಎಫ್‌ ಯೋಧರನ್ನು ಕರೆದೊಯ್ಯುತ್ತಿದ್ದ ವೇಳೆಯಲ್ಲಿ ಈ ಘಟನೆ ಸಂಭವಿಸಿದ್ದು, ಸಾವು ನೋವಿನ ಕುರಿತು ವರದಿಯಾಗಿಲ್ಲ.

ಗುರೆಜ್ ಕಣಿವೆಯ ಗುಜ್ರಾನ್ ನಲ್ಲಾ ಪ್ರದೇಶದಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು, ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಆದರೆ ಪೈಲಟ್ ಮತ್ತು ಸಹ-ಪೈಲಟ್ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೂ ಪೈಲಟ್ ಮತ್ತು ಸಹ-ಪೈಲಟ್ ಸುರಕ್ಷಿತವಾಗಿ ಎಜೆಕ್ಟ್ ಆಗಿದ್ದಾರೆ ಎಂದು ನಂಬಲಾಗಿದೆ. ಗುರೆಜ್‌ನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಇಂಡಿಯಾ ಟುಡೇ ಟಿವಿಗೆ ಆರ್ಮಿ ಹೆಲಿಕಾಪ್ಟರ್‌ನೊಂದಿಗೆ ಸಂವಹನ ಕಳೆದುಕೊಂಡಿದೆ ಎಂದು ಹೇಳಿದರು. ನಾವು ವಿವರಗಳನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ ಎಂದು ಅಧಿಕಾರಿತಗಳು ತಿಳಿಸಿರುವ ಮಾಧ್ಯಮಗಳು ವರದಿ ಮಾಡಿವೆ.

(More details awaited )

https://kannada.newsnext.live/army-chopper-crashes-in-tamil-nadu-cds-gen-bipin-rawat-was-on-board/

ಇದನ್ನೂ ಓದಿ : ಭಾರತೀಯ ಸೇನೆಯಿಂದ ಎರಡು ಬಾರಿ ತಿರಸ್ಕಾರ : ಉಕ್ರೇನ್‌ ಸೈನ್ಯ ಸೇರಿದ ತಮಿಳುನಾಡಿನ ಸಾಯಿನಿಕೇಶ್ ರವಿಚಂದ್ರನ್

ಇದನ್ನೂ ಓದಿ : ಉತ್ತರ ಪ್ರದೇಶದಲ್ಲಿ ದಾಖಲೆ ಬರೆದ ಬಿಜೆಪಿ : 2ನೇ ಬಾರಿಗೆ ಯೋಗಿ ಸರ್ಕಾರ

( BREAKING: Indian Army chopper crashes in Bandipora)

Comments are closed.