ಬಿಗ್ ಬಾಸ್ ಗೆದ್ದ ಸಂಭ್ರಮದಲ್ಲಿದ್ದ ‘ಗಿಲ್ಲಿ’ಗೆ ಬಿಗ್ ಶಾಕ್: ಫಿಲಂ ಚೇಂಬರ್ ಮೆಟ್ಟಿಲೇರಿದ ಸಿನಿಮಾ ನಿರ್ಮಾಪಕ!

Complaint against Gilli Nata: ಸದ್ಯ ಚೇಂಬರ್ ಈ ದೂರನ್ನು ಸ್ವೀಕರಿಸಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ನಟ ಗಿಲ್ಲಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ. ಬಿಗ್ ಬಾಸ್ ವಿನ್ನರ್ ಆದ ಮೇಲೆ ಸಖತ್ ಬಿಜಿಯಾಗಿರುವ ಗಿಲ್ಲಿ, ಈ ವಿವಾದದ ಬಗ್ಗೆ ಏನು ಹೇಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

film producer filled complaint against Bigg Boss Kannada 12 winner Gilli Nata to Film Chamber

Complaint against Gilli Nata: ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12ರ ಟ್ರೋಫಿ ಗೆದ್ದು ಮನೆಮಾತಾಗಿರುವ ನಟ ‘ಗಿಲ್ಲಿ’ಗೆ (Gilli Nata) ಈಗ ಕಾನೂನು ಸಂಕಷ್ಟ ಎದುರಾಗಿದೆ. ಅಭಿಮಾನಿಗಳ ಪ್ರೀತಿ ಮತ್ತು ಹೊಸ ಅವಕಾಶಗಳ ನಡುವೆ ತೇಲುತ್ತಿದ್ದ ಗಿಲ್ಲಿ ವಿರುದ್ಧ ಸಿನಿಮಾ ನಿರ್ಮಾಪಕರೊಬ್ಬರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (Film Chamber) ದೂರು ನೀಡಿದ್ದಾರೆ.

ದೂರಿನ ಹಿನ್ನೆಲೆ ಏನು?
ಗಿಲ್ಲಿ ಬಿಗ್ ಬಾಸ್ ಮನೆಗೆ ಪ್ರವೇಶಿಸುವ ಮುನ್ನ ‘ಸರ್ಕಾರಿ ಶಾಲೆ ಎಚ್​​8’ ಎಂಬ ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದರು. ಈ ಚಿತ್ರವು ಇಂದು (ಫೆಬ್ರವರಿ 6) ರಾಜ್ಯಾದ್ಯಂತ ತೆರೆಕಂಡಿದೆ. ಆದರೆ, ಚಿತ್ರದ ಬಿಡುಗಡೆ ಹಾಗೂ ಪ್ರಚಾರದ ಸಮಯದಲ್ಲಿ ನಟ ಗಿಲ್ಲಿ ಅವರು ಸಹಕರಿಸುತ್ತಿಲ್ಲ ಎಂಬುದು ನಿರ್ಮಾಪಕ ತೇಜಸ್ವಿ ಎಸ್. ಅವರ ಗಂಭೀರ ಆರೋಪವಾಗಿದೆ.

ನಿರ್ಮಾಪಕರ ಅಸಮಾಧಾನ:
“ಸಿನಿಮಾ ಆರಂಭದಲ್ಲಿ ಗಿಲ್ಲಿ ಕೇಳಿದಷ್ಟು ಸಂಭಾವನೆಯನ್ನು ನಾವು ನೀಡಿದ್ದೇವೆ. ಆದರೆ ಈಗ ಸಿನಿಮಾ ಬಿಡುಗಡೆಯಾಗುವ ಸಂದರ್ಭದಲ್ಲಿ ಅವರು ಪ್ರಚಾರಕ್ಕೆ ಬರುತ್ತಿಲ್ಲ. ಫೋನ್ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ, ಹೋಗಲಿ ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಚಿತ್ರದ ಬಗ್ಗೆ ಒಂದು ಪೋಸ್ಟ್ ಅನ್ನೂ ಹಾಕಿಲ್ಲ. ಇದು ನಮಗೆ ದೊಡ್ಡ ನಷ್ಟ ಉಂಟುಮಾಡುತ್ತಿದೆ,” ಎಂದು ನಿರ್ಮಾಪಕರು ತಮ್ಮ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.

‘ಮಹಾತ್ಮ ಗಾಂಧೀಜಿಯವರನ್ನು ದುರ್ಬಳಕೆ ಮಾಡಿಕೊಂಡಿದ್ದೇ ಕಾಂಗ್ರೆಸ್​’’ : ವಿಪಕ್ಷ ನಾಯಕ ಆರ್​.ಅಶೋಕ್​ ಕಿಡಿ

ವಿಚಾರಣೆಗೆ ಗಿಲ್ಲಿ ಹಾಜರಾಗುವ ಸಾಧ್ಯತೆ:
ಸದ್ಯ ಚೇಂಬರ್ ಈ ದೂರನ್ನು ಸ್ವೀಕರಿಸಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ನಟ ಗಿಲ್ಲಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ. ಬಿಗ್ ಬಾಸ್ ವಿನ್ನರ್ ಆದ ಮೇಲೆ ಸಖತ್ ಬಿಜಿಯಾಗಿರುವ ಗಿಲ್ಲಿ, ಈ ವಿವಾದದ ಬಗ್ಗೆ ಏನು ಹೇಳುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಸಿನಿಮಾದ ವಿಶೇಷತೆ: ಗುಣ ಹರಿಯಬ್ಬೆ ನಿರ್ದೇಶನದ ‘ಸರ್ಕಾರಿ ಶಾಲೆ ಎಚ್​​8’ ಒಂದು ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದ್ದು, ಇದರಲ್ಲಿ ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಸಿನಿಮಾ ಇಂದು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.

Scroll to Top