Former MP Ramya : ಚನ್ನಪಟ್ಟಣದಿಂದ ಮಾಜಿ ಸಂಸದೆ ರಮ್ಯಾ ಸ್ಪರ್ಧೆ ಮಾಡಲ್ಲ” ಎಂದ ಸಂಸದ ಡಿ.ಕೆ.ಸುರೇಶ್

ರಾಜ್ಯದಲ್ಲಿ ಈಗಾಗಲೇ ಚುನಾವಣಾ ಕಾವು ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ರಾಜ್ಯ ರಾಜಕೀಯದಲ್ಲಿ ಯಾರು ಎಲ್ಲಿಂದ ಸ್ಪರ್ಧೆ ಮಾಡಬೇಕು ಅಂತ ಲೆಕ್ಕಾಚಾರ ಹಾಕಲಾಗುತ್ತಿದೆ. ಈ ಬೆನ್ನಲ್ಲೇ ಕೆಲವು ದಿನಗಳಿಂದ ರಮ್ಯಾ (Former MP Ramya) ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಅನ್ನೋ ಸುದ್ದಿ ಓಡಾಡುತ್ತಿತ್ತು. ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ವಿರುದ್ಧವಾಗಿ ರಮ್ಯಾರನ್ನು ಕಣಕ್ಕೆ ಇಳಿಸಲು ಕಾಂಗ್ರೆಸ್ ಚಿಂತಿಸುತ್ತಿದೆ. ಹೆಚ್‌ಡಿಕೆಯನ್ನು ಸೋಲಿಸಲು ಡಿಕೆ ಶಿವಕುಮಾರ್ ರಣತಂತ್ರ ರೂಪಿಸಿದ್ದಾರೆಂದು ರಾಜಕೀಯ ವಲಯ ಹಾಗೂ ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು. ಈ ಬಗ್ಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ರಮ್ಯಾ ಸ್ಪರ್ಧೆ ಮಾಡುವ ವಿಚಾರ ಮಾಧ್ಯಮ ಸೃಷ್ಟಿದ್ದು, ಮಂಡ್ಯದ ಮಾಜಿ ಸಂಸದೆ ಹಾಗೂ ಸ್ಯಾಂಡಲ್‌ವುಡ್ ನಟಿ ರಮ್ಯಾ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಅನ್ನೋ ಸುದ್ದಿಯನ್ನು ಡಿಕೆ ಸುರೇಶ್ ಅಲ್ಲಗೆಳೆದಿದ್ದಾರೆ. ಬೊಂಬೆ ನಾಡಿನಿಂದ ರಮ್ಯಾ ಸ್ಪರ್ಧೆ ಮಾಡುವುದು ಸುಳ್ಳು ಎಂದು ಈಗಾಗಲೇ ಹರಡುತ್ತಿರುವ ಸುದ್ದಿಯನ್ನು ಸಂಸದ ಡಿ.ಕೆ.ಸುರೇಶ್ ಅಲ್ಲಗಳೆದಿದ್ದಾರೆ. ಜಿಲ್ಲೆಯ ಮಾಗಡಿ ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. ಈ ವೇಳೆ “ಮಾಜಿ ಸಂಸದೆ ರಮ್ಯ ಅವರು ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬುದು ಕೇವಲ ಮಾಧ್ಯಮಗಳ ಸೃಷ್ಟಿ” ಎಂದು ಡಿಕೆ ಸುರೇಶ್ ಹೇಳಿದ್ದಾರೆ.

ಇದನ್ನೂ ಓದಿ : Divine Star Rishabh Shetty : ದಾದಾ ಸಾಹೇಬ ಪಾಲ್ಕೆ ಪ್ರಶಸ್ತಿಗೆ ಭಾಜನರಾದ ನಟ ರಿಷಬ್‌ ಶೆಟ್ಟಿ

ಇದನ್ನೂ ಓದಿ : Love Again Movie Trailer : ಗ್ಲೋಬಲ್‌ ಸ್ಟಾರ್‌ ಆದ ನಟಿ ಪ್ರಿಯಾಂಕ ಚೋಪ್ರಾ : “ಲವ್‌ ಅಗೇನ್‌” ಟ್ರೈಲರ್‌ ರಿಲೀಸ್‌

ಇದನ್ನೂ ಓದಿ : Actress Anushka Shetty : ನಟಿ ಅನುಷ್ಕಾ ಶೆಟ್ಟಿಗೆ ವಿಚಿತ್ರ ಸಮಸ್ಯೆ : ಆ ಬಗ್ಗೆ ಸ್ವೀಟಿ ಹೇಳಿದ್ದಿಷ್ಟು

ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಸಂಸದೆ ರಮ್ಯಾ ಚನ್ನಪಟ್ಟಣ ಕ್ಷೇತ್ರದದಿಂದ ಸ್ಪರ್ಧೆ ಮಾಡುವ ಬಗ್ಗೆ ಚರ್ಚೆ ಆಗಿಲ್ಲ. ಚನ್ನಪಟ್ಟಣದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ತಂತ್ರಗಳನ್ನು ಮಾಡುತ್ತಿದ್ದೇವೆ. ಹೀಗಾಗಿ ರಮ್ಯಾ ಚನ್ನಪಟ್ಟಣ ಕ್ಷೇತ್ರಕ್ಕೆ ಬರುತ್ತಾರೆನ್ನುವುದು ಸುಳ್ಳು. ಅದು ಕೇವಲ ಮಾಧ್ಯಮಗಳ ಊಹೆ” ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ. ಈ ಮೂಲಕ ರಮ್ಯಾ ಹಾಗೂ ಹೆಚ್‌ಡಿಕೆ ನಡುವಿನ ಚನ್ನಪಟ್ಟಣ್ಣದಲ್ಲಿ ಮೆಗಾ ಎಲೆಕ್ಷನ್‌ ಫೈಟ್‌ಗೆ ತೆರೆಬಿದ್ದಂತಾಗಿದೆ. ಆದರೆ, ಚನ್ನಪಟ್ಟಣ್ಣ ಅಲ್ಲದೆ ಹೋದಲ್ಲಿ ರಮ್ಯಾ ಮತ್ತೆ ಎಲ್ಲಿಂದ ಕಣಕ್ಕೆ ಇಳಿಯುತ್ತಾರೆ ಅನ್ನೋದು ಅವರ ಬೆಂಬಲಿಗರಲ್ಲಿ ಹುಟ್ಟಿಕೊಂಡಿದೆ.

Former MP Ramya from Channapatnam will not contest,” said MP DK Suresh.

Comments are closed.