Virat Kohli and Sourav Ganguly : ವಿರಾಟ್ ಕೊಹ್ಲಿ ನಾಯಕತ್ವ ಕಳೆದುಕೊಳ್ಳಲು ಕಾರಣ ಸೌರವ್ ಗಂಗೂಲಿ, ತೆರೆಯ ಹಿಂದಿನ ಸತ್ಯ ಬಿಚ್ಚಿಟ್ಟ ಚೀಫ್ ಸೆಲೆಕ್ಟರ್

ಮುಂಬೈ: ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಕಳೆದ ವರ್ಷ ಟೀಮ್ ಇಂಡಿಯಾ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದು ದೊಡ್ಡ ಸುದ್ದಿಯಾಗಿತ್ತು. 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ನಂತರ ಟಿ20 ತಂಡದ ನಾಯಕತ್ವ ತ್ಯಜಿಸಿದ್ದ ವಿರಾಟ್ ಕೊಹ್ಲಿ, ಅವರನ್ನು 2022ರಲ್ಲಿ ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ನಂತರ ವಿರಾಟ್ ಕೊಹ್ಲಿ ಟೆಸ್ಟ್ (Virat Kohli and Sourav Ganguly) ತಂಡದ ನಾಯಕತ್ವಕ್ಕೂ ಗುಡ್ ಬೈ ಹೇಳಿದ್ದರು.

ವಿರಾಟ್ ಕೊಹ್ಲಿ ಅವರಿಂದ ಹಾಲಿ ನಾಯಕ ರೋಹಿತ್ ಶರ್ಮಾ ನಾಯಕತ್ವ ಕಸಿದುಕೊಂಡಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ವಿರಾಟ್ ಕೊಹ್ಲಿ ನಾಯಕತ್ವ ಕಳೆದುಕೊಳ್ಳಲು ಕಾರಣ ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly) ಅಂತೆ. ಇದನ್ನು ಹೇಳಿರುವುದು ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ (BCCI selection committee chairman Chetan Sharma).ಖಾಸಗಿ ಸುದ್ದಿವಾಹಿನಿ ನಡೆದ ರಹಸ್ಯ ಕಾರ್ಯಾಚರಣೆಯಲ್ಲಿ ಚೇತನ್ ಶರ್ಮಾ (Chetan Sharma sting operation) ಈ ಬಗ್ಗೆ ಬಾಯ್ಬಿಟ್ಟಿದ್ದಾರೆ.

“ವಿರಾಟ್ ಕೊಹ್ಲಿ ಮತ್ತು ಸೌರವ್ ಗಂಗೂಲಿ ನಡುವಿನ “ಅಹಂ” ಕಾರಣದಿಂದ ಇಬ್ಬರ ಬಾಂಧವ್ಯ ಹಾಳಾಗಿತ್ತು. ಒಬ್ಬ ಆಟಗಾರ ದಿಗ್ಗಜನಾಗಿ ಬೆಳೆದು ನಿಂತಾಗ ಆತ ನಾನೇ ಎಲ್ಲರಿಗಿಂತ ದೊಡ್ಡವ, ನಾನೇನು ಮಾಡಿದರೂ ನಡೆಯುತ್ತದೆ ಎಂದು ಭಾವಿಸುತ್ತಾನೆ. ಹೀಗಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗಿಂತಲೂ ನಾನೇ ದೊಡ್ಡವ ಎಂದು ವಿರಾಟ್ ಕೊಹ್ಲಿ ಭಾವಿಸಿದರು. ಇದು ಸಂಪೂರ್ಣ ಅಹಂಗೆ ಸಂಬಂಧ ಪಟ್ಟ ವಿಚಾರ. ಟಿ20 ತಂಡದ ನಾಯಕತ್ವ ತ್ಯಜಿಸದಂತೆ ವಿರಾಟ್ ಕೊಹ್ಲಿಗೆ ಸೌರವ್ ಗಂಗೂಲಿ ವೀಡಿಯೊ ಕಾಲ್ ಮೂಲಕ ಹೇಳಿದ್ದರು.

ಆದರೆ ದಕ್ಷಿಣ ಆಫ್ರಿಕಾದಲ್ಲಿ ನಡೆದ ಪ್ರೆಸ್ ಕಾನ್ಫರೆನ್ಸ್’ನಲ್ಲಿ ವಿರಾಟ್ ಕೊಹ್ಲಿ ಸುಳ್ಳು ಹೇಳಿದರು. ಟಿ20 ನಾಯಕತ್ವ ತ್ಯಜಿಸದಂತೆ ಬಿಸಿಸಿಐನಿಂದ ನನಗೆ ಯಾರೂ ಹೇಳಿಲ್ಲ ಎಂಬುದಾಗಿ ಕೊಹ್ಲಿ ಹೇಳಿದ್ದರು. ಇದಾದ ನಂತರ ಏಕದಿನ ತಂಡದ ನಾಯಕತ್ವದಿಂದ ಕೊಹ್ಲಿ ಅವರನ್ನು ಕೆಳಗಿಳಿಸಿ ರೋಹಿತ್ ಶರ್ಮಾಗೆ ಪಟ್ಟ ಕಟ್ಟಲಾಯಿತು. ಇದರ ಹಿಂದೆ ಸೌರವ್ ಗಂಗೂಲಿ ಅವರ ಕೈವಾಡವಿದೆ ಎಂದು ಕೊಹ್ಲಿ ಭಾವಿಸಿದ್ದರು. ಹೀಗಾಗಿ ಸೌರವ್ ಗಂಗೂಲಿ ಅವರನ್ನು ಗುರಿ ಮಾಡಿ ಮಾತನಾಡಿದ್ದರು. ಇದಾದ ನಂತರ ಕೊಹ್ಲಿ ಮೇಲೆ ಗಂಗೂಲಿ ವಿಶ್ವಾಸ ಕಳೆದುಕೊಂಡರು. ಪರಿಣಾಮ ಏಕದಿನ ತಂಡದ ನಾಯಕತ್ವವನ್ನೂ ಕಳೆದುಕೊಳ್ಳಬೇಕಾಯಿತು” ಎಂದು ಖಾಸಗಿ ವಾಹಿನಿಯ ರಹಸ್ಯ ಕಾರ್ಯಾಚರಣೆಯಲ್ಲಿ ಚೇತನ್ ಶರ್ಮಾ ಹೇಳಿದ್ದಾರೆ.

ಫಿಟ್’ನೆಸ್’ಗಾಗಿ ಇಂಜೆಕ್ಷನ್ :
ಭಾರತ ಕ್ರಿಕೆಟ್ ತಂಡದ ಕೆಲ ಸ್ಟಾರ್ ಆಟಗಾರರು ಫಿಟ್’ನೆಸ್ ಸಾಬೀತು ಪಡಿಸಲು ಇಂಜೆಕ್ಷನ್ ತೆಗೆದುಕೊಳ್ಳುತ್ತಾರೆ ಎಂಬ ಶಾಕಿಂಗ್ ಸತ್ಯವನ್ನೂ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾ ಸ್ಟಿಂಗ್ ಆಪರೇಷನ್’ನಲ್ಲಿ ಬಿಚ್ಚಿಟ್ಟಿದ್ದಾರೆ. ಡೋಪಿಂಗ್ ಟೆಸ್ಟ್’ನಲ್ಲಿ ಸಿಕ್ಕಿಬೀಳದಂತಹ ಡ್ರಗ್ಸ್ ಅನ್ನು ಇಂಜೆಕ್ಷನ್ ಮೂಲಕ ಆಟಗಾರರು ಫಿಟ್’ನೆಸ್ ಪರೀಕ್ಷೆಗೂ ಮುನ್ನ ತೆಗೆದುಕೊಳ್ಳುತ್ತಾರೆ. ಇದರಿಂದಾಗಿ ಅವರು ಫಿಟ್’ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ.

ಇದನ್ನೂ ಓದಿ : Chetan Sharma sting operation : ಫಿಟ್’ನೆಸ್‌ಗಾಗಿ ಇಂಜೆಕ್ಷನ್ ತೆಗೆದುಕೊಳ್ತಾರಂತೆ ಟೀಮ್ ಇಂಡಿಯಾ ಆಟಗಾರರು; ಶಾಕಿಂಗ್ ರಹಸ್ಯ ಬಿಚ್ಚಿಟ್ಟ ಆಯ್ಕೆ ಸಮಿತಿಯ ಮುಖ್ಯಸ್ಥ

ಇದನ್ನೂ ಓದಿ : Sania Mirza : RCB ಮೆಂಟರ್ ಆಗಿ ಸಾನಿಯಾ ಮಿರ್ಜಾ ನೇಮಕ

ಇದನ್ನೂ ಓದಿ : CCL 2023: ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2023 ಫೆ. 18ರಿಂದ ಆರಂಭ : ಹೊಸ ಮಾದರಿಯಲ್ಲಿ ಪಂದ್ಯಾವಳಿ

ಶೇ. 80ರಿಂದ 85ರಷ್ಟು ಅಷ್ಟೇ ಫಿಟ್ ಆಗಿರುವ ಆಟಗಾರ ಕೂಡ ಈ ಇಂಜೆಕ್ಷನ್ ಪರಿಣಾಮ ಫಿಟ್’ನೆಸ್ ಪರೀಕ್ಷೆಯಲ್ಲಿ ಪಾಸ್ ಆಗುತ್ತಾರೆ ಎಂದು ಸ್ಟಿಂಗ್ ಆಪರೇಷನ್’ನಲ್ಲಿ ಚೇತನ್ ಶರ್ಮಾ ಹೇಳಿದ್ದಾರೆ. “ಭಾರತ ತಂಡದ ಆಟಗಾರರು ಶೇ.80ರಷ್ಟು ಫಿಟ್ ಇದ್ದರೂ ಇಂಜೆಕ್ಷನ್ ತೆಗೆದುಕೊಂಡು ಶೇ. 100ರಷ್ಟು ಫಿಟ್ ಆಗುತ್ತಾರೆ. ಆ ಇಂಜೆಕ್ಷನ್’ಗಳು ನೋವು ನಿವಾರಕಗಳಲ್ಲ. ಆ ಇಂಜೆಕ್ಷನ್’ಗಳಲ್ಲಿ ಅಡಕವಾಗಿರುವ ಡ್ರಗ್ಸ್ ಡೋಪ್ ಟೆಸ್ಟ್’ನಲ್ಲೂ ಗಮನಕ್ಕೆ ಬರುವುದಿಲ್ಲ” ಎಂದು ಚೇತನ್ ಶರ್ಮಾ ಬಾಯ್ಬಿಟ್ಟಿದ್ದಾರೆ.

Virat Kohli and Sourav Ganguly: Virat Kohli’s loss of captaincy is due to Sourav Ganguly, the chief selector revealed the behind-the-scenes truth

Comments are closed.