ಎಫ್.ಎಸ್.ಎಲ್ ವರದಿ ಎಫೆಕ್ಟ್: ದೇವರ ಮೊರೆ ಹೋದ ರಾಗಿಣಿ,ಆಸ್ಪತ್ರೆ ಸೇರಿದ ಸಂಜನಾ

ಸ್ಯಾಂಡಲ್ ವುಡ್ ಡ್ರಗ್ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಳ್ಳುತ್ತಿದ್ದಂತೆ ನಟಿಮಣಿಯರು ಆಂತಕಕ್ಕೊಳಗಾಗಿದ್ದು  ನಟಿ ರಾಗಿಣಿ ದೇವರ ಮೊರೆ ಹೋದ್ರೇ ಸಂಜನಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಎಫ್.ಎಸ್.ಎಲ್ ವರದಿಯಲ್ಲಿ ನಟಿಯರಾದ ಸಂಜನಾ ಹಾಗೂ ರಾಗಿಣಿ ಡ್ರಗ್ಸ್ ಸೇವಿಸಿರುವುದು ಧೃಡಪಟ್ಟಿದೆ. ಈ ಹಿನ್ನೆಲೆಯಲ್ಲಿ ನಟಿಯರಾದ ರಾಗಿಣಿ ಹಾಗೂ ಸಂಜನಾ ಅಧಿಕೃತವಾಗಿ ಸಿಕ್ಕಿಬಿದ್ದಂತಾಗಿದೆ.

ಎಫ್‌ಎಸ್.ಎಲ್ ವರದಿಯಲ್ಲಿ ಡ್ರಗ್ಸ್ ಸೇವನೆ ಸಂಗತಿ ಬಯಲಾಗುತ್ತಿದ್ದಂತೆ ಜಾಮೀನು ಪಡೆದು ಹಾಯಾಗಿದ್ದ ನಟಿಮಣಿಯರ ಎದೆಯಲ್ಲಿ ನಡುಕ ಆರಂಭವಾಗಿದೆ‌. ನ್ಯಾಯಾಲಯದಲ್ಲಿ ಎಫ್.ಎಸ್‌ಎಲ್ ರಿಪೋರ್ಟ್ ಸಾಕ್ಷಿಯಾಗಿ ಕೇಸ್ ಗೆ ಬಲ ತುಂಬಲಿರೋದರಿಂದ ಇಬ್ಬರೂ ನಟಿಯರಿಗೂ ಶಿಕ್ಷೆ ಯಾಗುವ ಸಾಧ್ಯತೆ ಇದೆ.

ಹೀಗಾಗಿ ನಟಿಯರು ಆತಂಕದಲ್ಲಿದ್ದು ತಮ್ಮ ಎಡ್ವಕೇಟ್ ಜೊತೆ ಸತತ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಇನ್ನು ನಟಿ ರಾಗಿಣಿ  ನೀವು ಅಂದುಕೊಂಡಂತೆ ದೇವರು ನಡೆಸಲಿಲ್ಲ ಎಂಬ ಬೇಸರ ಬೇಡ. ದೇವರಿಗೆ ನಿಮಗಿಂತ ಒಳ್ಳೆಯ ಪ್ಲ್ಯಾನ್ ಇರಬಹುದು ಎಂದು ಸ್ಟೇಟಸ್ ಹಾಕಿದ್ದಾರೆ.

ಇತ್ತ ಸಂಜನಾ ಈಗಾಗಲೇ ಸರ್ಜರಿಗೊಳಗಾಗಿದ್ದು, ಎಫ್ ಎಸ್ ಎಲ್ ವರದಿ ಸುದ್ದಿ ಕೇಳುತ್ತಿದ್ದಂತೆ ಅವರಿಗೆ ಮಾನಸಿಕವಾಗಿ ಶಾಕ್ ತಗುಲಿದ್ದು ಸಂಜನಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: Ananth nag: ಅಬ್ರಕಡಾಬ್ರ ಎಂದು ಹಿರಿಯ ನಟ ಅನಂತ್ ನಾಗ್: ಏನಿದು ಸ್ಟೋರಿ ಇಲ್ಲಿದೆ ಡಿಟೇಲ್ಸ್

ನನ್ನ ಮಗಳು ನಿರಪರಾಧಿ. ಅದರೆ ಈ ಕೇಸ್ ನಿಂದಾಗಿ ಮಾನಸಿಕವಾಗಿ ನೊಂದು ಹೋಗಿದ್ದಾಳೆ. ಪದೇ ಪದೇ ಅಟ್ಯಾಕ್ಸ್ ಬರುತ್ತಿದೆ ಎಂದು ಸಂಜನಾ ತಾಯಿ ಮಾಧ್ಯಮಗಳ ಎದುರು ಕಣ್ಣಿರಿಟ್ಟಿದ್ದಾರೆ‌ .

Comments are closed.