Gajarama : ‘ಗಜರಾಮ’ ನಾದ ರಾಜವರ್ಧನ್ ಗೆ ನಾಯಕಿಯಾದ ಕೊಡಗಿನ ಕುವರಿ ತಪಸ್ವಿನಿ ಪೂಣಚ್ಚ

‘ಮ್ಯಾಸಿವ್ ಸ್ಟಾರ್’ ನಟ ರಾಜವರ್ಧನ್(Rajvardhan)ರವರು ‘ಗಜರಾಮ’ (Gajarama)ನಾಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಬಿಚ್ಚುಗತ್ತಿಯ ಮೂಲಕ ಸ್ಯಾಂಡಲ್ ವುಡ್‌ನ್ನು ಪ್ರವೇಶಿಸಿದರು. ಹಾಗೆ ಸಿನಿರಸಿಕರ ಮನಗೆದ್ದಿರುವ ಹ್ಯಾಂಡ್ಸಮ್ ನಟ ಇವರಾಗಿದ್ದಾರೆ. ಯುವ ನಿರ್ದೇಶಕ ಸುನೀಲ್ ಕುಮಾರ್ ವಿ.ಎ ಅವರಿಂದ ಕಥೆ ಕೇಳಿ ಇಂಪ್ರೆಸ್ ಆಗಿರುವ ರಾಜವರ್ಧನ್‌(Rajvardhan)ರವರು “ಗಜರಾಮ” ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಮೂಲಕ ಕಿಕ್ ಕೊಡ್ತಿರೋ ‘ಗಜರಾಮ’ನಿಗೆ ಈಗ ನಾಯಕಿಯೂ ಸಿಕ್ಕಿದ್ದಾರೆ.

ರಾಜವರ್ಧನ್ (Rajvardhan)ಜೊತೆ ನಾಯಕಿಯಾಗಿ ಕೊಡಗಿನ ಬೆಡಗಿ ತಪಸ್ವಿನಿ ಪೂಣಚ್ಚ(Tapaswini Poonacha) ತೆರೆ ಹಂಚಿಕೊಳ್ಳುತ್ತಿದ್ದಾರೆ. ಹರಿಕಥೆ ಅಲ್ಲ ಗಿರಿಕಥೆ ಚಿತ್ರದಲ್ಲಿ ನಾಯಕಿಯಾಗಿ ಗಮನ ಸೆಳೆದಿದ್ದ ತಪಸ್ವಿನಿ ಪೂಣಚ್ಚ(Tapaswini Poonacha) ಈಗ ‘ಗಜರಾಮ'(Gajarama)ನ ಜೋಡಿಯಾಗಿದ್ದಾರೆ. ನಾಯಕಿ ತಪಸ್ವಿನಿರವರಿಗೆ ಇದು ಎರಡನೇ ಸಿನಿಮಾವಾಗಿದೆ.

ಹರಿಕಥೆ ಅಲ್ಲ ಗಿರಿಕಥೆ ಚಿತ್ರಕ್ಕೆ ನಾನು ಸೆಲೆಕ್ಟ್ ಆಗಿದ್ದೇ ಆಕಸ್ಮಿಕವಾಗಿ. ಸಿನಿಮಾ ಇಂಡಸ್ಟ್ರಿಗೆ ಬರಬೇಕು ಅನ್ನೋದು ನನ್ನ ಉದ್ದೇಶ ಆಗಿರಲಿಲ್ಲ. ಆದ್ರೆ ಇನ್ ಸ್ಟಾಗ್ರಾಮ್ ನಲ್ಲಿ ಒಂದು ಫೋಟೋ ನೋಡಿ ಚಿತ್ರತಂಡ ನನ್ನ ಸಂಪರ್ಕ ಮಾಡಿದ್ರು. ಕಥೆ ಕೇಳಿ ಇಷ್ಟ ಆಯ್ತು ಒಪ್ಪಿಕೊಂಡೆ ಇದೀಗ ‘ಗಜರಾಮ’ ಸಿನಿಮಾ ಅವಕಾಶ ಸಿಕ್ಕಿದೆ. ಹರಿಕಥೆ ಅಲ್ಲ ಗಿರಿಕಥೆ ಚಿತ್ರದ ನಂತರ ಸಾಕಷ್ಟು ಸಿನಿಮಾ ಆಫರ್ ಬರ್ತಿದೆ ಆದರೆ ಗಜರಾಮ ಸಿನಿಮಾ ಪಾತ್ರ ಇಷ್ಟ ಆಯ್ತು. ಹಳ್ಳಿ ಹುಡುಗಿ ಪಾತ್ರದಲ್ಲಿ ಈ ಸಿನಿಮಾದಲ್ಲಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ ಎನ್ನುತ್ತಾರೆ ನಟಿ (Tapaswini Poonacha)ತಪಸ್ವಿನಿ ಪೂಣಚ್ಚ.

ಇದನ್ನೂ ಓದಿ : ಸಂಗೀತ ಮಾಂತ್ರಿಕ ಎಸ್​​.ಪಿ ಬಾಲಸುಬ್ರಹ್ಮಣ್ಯಂ ಮದುವೆಯ ಹಿಂದಿದೆ ರೋಚಕ ಕಹಾನಿ

ಇದನ್ನೂ ಓದಿ : ‘ಜೊತೆಯಲಿ ಜೊತೆ ಜೊತೆ ಜೊತೆಯಲಿ’ ಹಾಡು ಹೇಳಲು ಎಸ್​ಬಿಪಿ ತೆಗೆದುಕೊಂಡಿದ್ದರು ಬರೋಬ್ಬರಿ 9 ದಿನ

ಇದನ್ನೂ ಓದಿ : ”ಏಕ್‌ ಲವ್‌ ಯಾ” ಸಿನಿಮಾ ನಂತರ ನಟಿ ರಕ್ಷಿತಾ ಸಹೋದರ ರಾಣಾರವರ ಮುಂದಿನ ಸಿನಿಮಾದ ಅಪ್ಡೇಟ್

ನಿರ್ದೇಶನ ವಿಭಾಗದಲ್ಲಿ ದುಡಿದ ಅನುಭವ ಇರುವ ಸುನೀಲ್ ಕುಮಾರ್ ‘ಗಜರಾಮ’ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ಆಕ್ಷನ್ ಮಾಸ್ ಎಂಟಟೈನರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ್ಕಕೆ ಮನೋಮೂರ್ತಿ ಸಂಗೀತ ನೀಡಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಕೆ.ಎಸ್.ಚಂದ್ರಶೇಖರ್‌ರವರು ಛಾಯಾಗ್ರಾಹಣ ಮಾಡಲಿದ್ದಾರೆ. ಹಾಗೂ ಜ್ಞಾನೇಶ್ ಬಿ ಮಠದ್ ಸಂಕಲನವನ್ನು ಮಾಡಿದ್ದಾರೆ. ಈ ಸಿನಿಮಾದ ನೃತ್ಯಕ್ಕೆ ಧನಂಜಯ್‌ರವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಮೂಡಿರುವ ಹಾಡುಗಳಿಗೆ ಚಿನ್ಮಯ್ ಭಾವಿಕೆರೆ ಮತ್ತು ಜಯಂತ್ ಕಾಯ್ಕಿಣಿಯವರ ಸಾಹಿತ್ಯವಿದೆ. ಲೈಫ್ ಲೈನ್ ಫಿಲ್ಮಂ ಪ್ರೊಡಕ್ಷನ್ ನಡಿಯಲ್ಲಿ ನರಸಿಂಹ ಮೂರ್ತಿರವರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಾಗೆ ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಫರ್ನಾಂಡಿಸ್ ಕೂಡ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಇದೇ ತಿಂಗಳಾಂತ್ಯಕ್ಕೆ ಸಿನಿಮಾ ಸೆಟ್ಟೇರಲಿದೆ.

Tapaswini Poonachcha a Kodagin girl the heroine of Rajavardhan of Gajarama

Comments are closed.