Bigg Boss kannada Season 9 : ಬಿಗ್‌ಬಾಸ್‌ ಕನ್ನಡದ ಸೀಸನ್‌ 9 : 18 ಬಿಗ್‌ಬಾಸ್ ಸ್ಪರ್ಧಿಗಳ ಲಿಸ್ಟ್‌

(Bigg Boss kannada Season 9)ಕನ್ನಡ ಕಿರುತೆರೆಯಲ್ಲೇ ಸಂಚಲನ ಮೂಡಿಸಿದೆ ಬಿಗ್‌ಬಾಸ್ ರಿಯಾಲಿಟಿ ಶೋ. ಇತ್ತೀಚೆಗಷ್ಷೇ ಬಿಗ್‌ಬಾಸ್‌ ಓಟಿಟಿ ಸೀಸನ್‌ ಮುಕ್ತಾಯಗೊಂಡಿದ್ದು ಅದರ ಬೆನ್ನಲ್ಲೇ ಟಿವಿ ಸೀಸನ್‌ ಪ್ರಾರಂಭವಾಗಲಿದೆ. ಇಂದು (ಸೆಪ್ಟೆಂಬರ್‌ 24) ಸಂಜೆ 6ಗಂಟೆಗೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ “ಬಿಗ್‌ಬಾಸ್‌ ಕನ್ನಡದ ಸೀಸನ್‌ 9″ರ ಸಂಚಿಕೆ ಪ್ರಸಾರವಾಗಲಿದೆ. ಬಿಗ್‌ಬಾಸ್‌ ಕನ್ನಡದ ಸೀಸನ್‌ 9 ರಲ್ಲಿ ಪ್ರವೀಣರ ಜೊತೆ ನವೀನರು ಎನ್ನುವಂತೆ ಹಳೆ ಸ್ಪರ್ಧಿಗಳ ಜೊತೆ ಹೊಸ ಸ್ಪರ್ಧಿಗಳು ಭಾಗವಹಿಸಲಿದ್ದಾರೆ.

ಬಿಗ್‌ಬಾಸ್ ಹೊಸ ಸೀಸನ್‌ ಅಭಿಮಾನಿಗಳಿಗೆ ಬಹಳಷ್ಟು ಕುತೂಹಲವನ್ನು ಮೂಡಿಸಿದೆ. ಇದೇ ಮೊದಲ ಬಾರಿಗೆ ಹಳೆಯ ಸ್ಪರ್ಧಿಗಳ ಜೊತೆ ಹೊಸ ಸ್ಪರ್ಧಿಗಳು ಕೂಡ ಹಣಾಹಣಿ ನಡೆಸಲಿದ್ದಾರೆ. ಒಂದಿಷ್ಟು ಬಿಗ್‌ಬಾಸ್‌ ಸ್ಪರ್ಧಿಗಳ ಹೆಸರು ಸಾಮಾಜಿ ಜಾಲತಾಣದಲ್ಲಿ ಹರಿದಾಡುತ್ತಿದೆ. ಬಿಗ್‌ ಬಾಸ್‌ ಕನ್ನಡದ ಓಟಿಟಿ ಸೀಸನ್‌ 1″ರಲ್ಲಿ ಟಾಪರ್‌ ರೂಪೇಶ್‌ ಶೆಟ್ಟಿ ಜೊತೆ ಸಾನ್ಯಾ ಅಯ್ಯರ್‌, ರಾಕೇಶ್‌ ಅಡಿಗ ಮತ್ತು ಆರ್ಯವರ್ಧನ್‌ ಗುರೂಜಿ ಸೀಸನ್‌ 9 ರಲ್ಲಿ ಭಾಗವಹಿಸುತ್ತಿದ್ದಾರೆ. ಹಾಗೆ ಕಳೆದ ಸೀಸನ್‌ ಸ್ಪರ್ಧಿಗಳಾದ ಅನುಪಮಾ ಗೌಡ, ದೀಪಿಕಾ ದಾಸ್‌, ಪ್ರಶಾಂತ್‌ ಸಂಬರಗಿ, ದಿವ್ಯಾ ಉರುಡುಗ ಹಾಗೂ ಅರುಣ್‌ ಸಾಗರ್‌ ಭಾಗವಹಿಸಲಿದ್ದಾರೆ.

ಇನ್ನೂ (Bigg Boss kannada Season 9) ಬಿಗ್‌ಬಾಸ್‌ ಕನ್ನಡ ಸೀಸನ್‌ 9ರಲ್ಲಿ ಹೊಸ ಸ್ಪರ್ಧಿಗಳಾಗಿ ಒಂಭತ್ತು ಜನ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಆ ಒಂಭತ್ತು ಜನ ಸ್ಪರ್ಧಿಗಳು ಯಾರೆಂದರೆ ಆಫ್‌ರೋಡ್‌ ಬೈಕ್‌ ರೇಸರ್‌ ಐಶ್ವರ್ಯಾ, ಮಂಗಳಗೌರಿ ಸೀರಿಯಲ್‌ ಖ್ಯಾತಿಯ ಕಿರುತೆರೆ ನಟಿ ಕಾವ್ಯಶ್ರೀ, ಅಶ್ವಿನಿ ನಕ್ಷತ್ರ ಖ್ಯಾತಿಯ ಕಿರುತೆರೆ ಹಾಗೂ ಬೆಳ್ಳಿತೆರೆ ನಟಿ ಮಯೂರಿ, ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಬಗ್ಗೆ ವಿಮರ್ಶೆ ಮಾಡಿ ಸೆನ್ಸೇಷನ್‌ನ್ನು ಹುಟ್ಟು ಹಾಕಿದ ನವಾಜ್‌, ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಗೊಂಬೆ (ಶ್ರುತಿ) ಖ್ಯಾತಿಯ ನಟಿ ನೇಹಾ ಗೌಡ, ಕಮಲಿ ಧಾರಾವಾಹಿ ಖ್ಯಾತಿಯ ನಟಿ ಅಮೂಲ್ಯ ಗೌಡ, ನಟ ಹಾಗೂ ಮಾಡೆಲ್‌ ದರ್ಶ್‌ ಚಂದ್ರಪ್ಪ, ಬೈಕ್‌ ರೇಸರ್‌ ಸಂದೇಶ್‌ ಪ್ರಸನ್ನ ಕುಮಾರ್‌ ಹಾಗೂ ಕನ್ನಡತಿ ಸೀರಿಯಲ್‌ ಸಾನಿಯಾ ಖ್ಯಾತಿಯ ನಟಿ ರಮೋಲರವರು ಭಾಗವಹಿಸಲಿದ್ದಾರೆ ಎನ್ನುವ ಸುದ್ದಿ ಇದೆ. ಆದರೆ ಇನ್ನೂ ಇದರ ಬಗ್ಗೆ ನಿಖರವಾದ ಮಾಹಿತಿಯನ್ನು ತಂಡ ಹಂಚಿಕೊಂಡಿಲ್ಲ. ಹಾಗಾಗಿ ನಿಖರವಾಗಿ ತಿಳಿದುಕೊಳ್ಳಲು ಇಂದು ಸಂಜೆ 6ಕ್ಕೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್‌ಬಾಸ್‌ ಕನ್ನಡದ ಸೀಸನ್‌ 9ರ ಸಂಚಿಕೆಯನ್ನು ತಪ್ಪದೇ ವೀಕ್ಷಿಸಿ.

ಈ ಸಲದ ಬಿಗ್‌ಬಾಸ್‌ ಶೋ ಪ್ರತಿ ಸೋಮವಾರದಿಂದ ಶನಿವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಪ್ರತಿಸಲದಂತೆ ಈ ಬಾರಿ ಕೂಡ ವಾರದ ಕೊನೆಯಲ್ಲಿ ನಿರೂಪಕರಾಗಿ ಸುದೀಪ್‌ರವರು ಬಿಗ್‌ಬಾಸ್ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಾರದಲ್ಲಿ ನಡೆದ ಸಂಚಿಕೆಗಳ ಬಗ್ಗೆ ಸ್ಪರ್ಧಿಗಳೊಂದಿಗೆ ನಟ ಸುದೀಪ್‌ರವರು ಮಾತುಕತೆ ನಡೆಸಲಿದ್ದಾರೆ.

ಇದನ್ನೂ ಓದಿ : ‘ಗಜರಾಮ’ ನಾದ ರಾಜವರ್ಧನ್ ಗೆ ನಾಯಕಿಯಾದ ಕೊಡಗಿನ ಕುವರಿ ತಪಸ್ವಿನಿ ಪೂಣಚ್ಚ

ಇದನ್ನೂ ಓದಿ : ಸಂಗೀತ ಮಾಂತ್ರಿಕ ಎಸ್​​.ಪಿ ಬಾಲಸುಬ್ರಹ್ಮಣ್ಯಂ ಮದುವೆಯ ಹಿಂದಿದೆ ರೋಚಕ ಕಹಾನಿ

ಇದನ್ನೂ ಓದಿ : ”ಏಕ್‌ ಲವ್‌ ಯಾ” ಸಿನಿಮಾ ನಂತರ ನಟಿ ರಕ್ಷಿತಾ ಸಹೋದರ ರಾಣಾರವರ ಮುಂದಿನ ಸಿನಿಮಾದ ಅಪ್ಡೇಟ್

Bigg Boss Kannada Season 9 : 18 Bigg Boss Contestants List

Comments are closed.