HP Envy x360 15 Laptops : ನೀವು ಕಂಟೆಂಟ್‌ ಕ್ರಿಯೇಟರ್‍ರಾ? ಹಾಗಾದರೆ HP, ಈ ಲ್ಯಾಪ್‌ಟಾಪ್‌ ಅನ್ನು ನಿಮಗಾಗಿ ಪರಿಚಯಿಸಿದೆ

ಲ್ಯಾಪ್‌ಟಾಪ್‌ (Laptops) ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ HP ಈಗ ಹೊಸದೊಂದು ಲ್ಯಾಪ್‌ಟಾಪ್‌ (HP Envy x360 15 Laptops) ಬಿಡುಗಡೆ ಮಾಡಿದೆ. ಅದನ್ನು ಕಂಟೆಂಟ್‌ ಕ್ರಿಯೇಟರ್‌ಗಳನ್ನು (Content Creators) ಗಮನದಲ್ಲಿರಿಸಿಕೊಂಡು ತಯಾರಿಸಿದೆ. ವಿಷಯಗಳನ್ನು ಬರೆಯಲು, ನೋಡಲು ಹಾಗೂ ಪ್ಲೇ ಮಾಡಲು ಸಹಾಯವಾಗುವಂತೆ 15.6 ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದೆ. ಉತ್ತಮ ಕಾರ್ಯನಿರ್ವಹಿಸುವ ಸಲುವಾಗಿ 12ನೇ ಜನರೇಷನ್‌ ಇಂಟೆಲ್‌ ಕೋರ್‌ EVO i7 ಪ್ರೊಸೆಸ್ಸರ್‌ ಅನ್ನು ಮತ್ತು ಡಿಸೈನ್‌ಗಾಗಿ ಇಂಟೆಲ್‌ ಐರಿಸ್‌ Xe ಗ್ರಾಫಿಕ್ಸ್‌ ಅನ್ನು ಹೊಂದಿದೆ.

‘HP ಯ ಪೋರ್ಟ್‌ಫೋಲಿಯೊದಲ್ಲಿರುವ ಹೊಸ Envy x360 15 ಕಂಟೆಂಟ್ ರಚನೆಕಾರರಿಗೆ ಸ್ಮಾರ್ಟ್ ಮತ್ತು ಉತ್ತಮ-ದರ್ಜೆಯ ಡಿಸ್ಪ್ಲೇ, ಉನ್ನತ-ಕಾರ್ಯಕ್ಷಮತೆಯ ಉತ್ಪಾದಕತೆಯ ವೈಶಿಷ್ಟ್ಯಗಳ ಮೂಲಕ ಸೃಜನಶೀಲತೆ ಮತ್ತು ಅಭಿವ್ಯಕ್ತಿಯನ್ನು ಮುಕ್ತವಾಗಿ ಹೇಳಿಕೊಳ್ಳುವ ಮೂಲಕ ತಮ್ಮನ್ನು ತಾವು ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ’ ಎಂದು HP ಇಂಡಿಯಾದ ಹಿರಿಯ ನಿರ್ದೇಶಕ-ಪರ್ಸನಲ್ ಸಿಸ್ಟಮ್ಸ್ ವಿಕ್ರಮ್ ಬೇಡಿ ಹೇಳಿದ್ದಾರೆ.

ಕಂಪನಿಯ ಪ್ರಕಾರ ಈ ಲ್ಯಾಪ್‌ಟಾಪ್‌ ಫ್ಲಿಕರ್‌–ಫ್ರೀ ಮತ್ತು ಆಂಟಿ ರಿಫ್ಲೆಕ್ಷನ್‌ ಸ್ಕ್ರೀನ್‌ ಹೊಂದಿದೆ. ಇದರಿಂದ ಬಣ್ಣಗಳಲ್ಲಿ ನಿಖರತೆ ಮತ್ತು ಬಹಳ ಸಮಯದ ವರೆಗೆ ಕೆಲಸ ಮಾಡಲು ಹಾಗೂ ಐಸೇಫ್‌ ಡಿಸ್ಪಲೇ ಇರುವುದರಿಂದ ಕಣ್ಣಿಗೆ ತೊಂದರೆಯೂ ಆಗುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ : Dhiren Krishna Shastri : ಈತ ಹೊಸ ದೇವಮಾನವ! ಧೀರೇಂದ್ರ ಕೃಷ್ಣ ಶಾಸ್ತ್ರಿಯ ಲೀಲೆಗಳೇ ಈಗ ಟ್ರೆಂಡ್!

ಈ ಲ್ಯಾಪ್‌ಟಾಪ್‌ನಲ್ಲಿ ವೇಗದ ಸಂವಹನಕ್ಕಾಗಿ ಎಮೋಜಿ ಕೀಬೋರ್ಡ್‌ ನೀಡಿದೆ. ವೀಡಿಯೊ ಕಾನ್ಫರೆನ್ಸಿಂಗ್‌ಗಾಗಿ ಲ್ಯಾಪ್‌ಟಾಪ್ 5MP IR ಕ್ಯಾಮೆರಾ, AI ನೊಯ್ಸ್‌ ರಿಡಕ್ಷನ್‌ ಮತ್ತು ಆಟೋ ಫ್ರೇಮ್ ತಂತ್ರಜ್ಞಾನದಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಇನ್ನು ಹೊಸ Envy x360 15 ಲ್ಯಾಪ್‌ಟಾಪ್‌ನ ಹೊರ ಮೇಲ್ಮೈ ಓಷಿಯನ್‌–ಬೌಂಡ್ ಪ್ಲಾಸ್ಟಿಕ್‌ ಮತ್ತು ಮರುಬಳಕೆಯ ಅಲ್ಯೂಮಿನಿಯಂ ಅನ್ನು ಒಳಗೊಂಡಿದೆ. ಇದು 88 ಪ್ರತಿಶತದಷ್ಟು ಸ್ಕ್ರೀನ್‌ ಟು ಬಾಡಿಯನ್ನು ಹೊಂದಿದೆ. ಇದರಿಂದ ಹೆಚ್ಚಿನ ಸ್ಕ್ರೀನ್ ಮತ್ತು ಕಡಿಮೆ ಸ್ಕ್ರೋಲಿಂಗ್ ನೀಡಿದೆ. ಚಾರ್ಜಿಂಗ್‌ ವಿಷಯದಲ್ಲಿ ಇದು ಫಾಸ್ಟ್‌ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ಜೊತೆಗೆ 10 ಗಂಟೆಗಳ ಬ್ಯಟರಿ ಅವಧಿಯನ್ನು ನೀಡುತ್ತದೆ.

ಬೆಲೆ ಮತ್ತು ಲಭ್ಯತೆ :

HPಯ ಹೊಸ Envy x360 15 ಲ್ಯಾಪ್‌ಟಾಪ್‌ ಅನ್ನು ಕಂಪನಿಯ ಅಧಿಕೃತ ವೆಬ್‌ಸೈಟ್‌ನಿಂದ ಮತ್ತು ಇತರ ರಿಟೇಲ್‌ ಅಂಗಡಿಗಳಲ್ಲಿ ಖರೀದಿಸಬಹುದಾಗಿದೆ. ಹೊಸ ಶ್ರೇಣಿಯ HP ಲ್ಯಾಪ್‌ಟಾಪ್‌ಗಳು 82,999 ರೂ. ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿರುತ್ತವೆ.

ಇದನ್ನೂ ಓದಿ : Save Dish From Too Much Salt : ನೀವು ತಯಾರಿಸಿದ ಅಡುಗೆಯಲ್ಲಿ ಉಪ್ಪು ಹೆಚ್ಚಾಯಿತೇ? ಈ ಸಿಂಪಲ್‌ ಟ್ರಿಕ್‌ ಉಪಯೋಗಿಸಿ ನೋಡಿ

(HP Envy x360 15 Laptops launched this is perfect for content creators. Know the price and specifications)

Comments are closed.