Anup Revanna birthday: ಅಭಿಮಾನಿಗಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡ ಅನೂಪ್ ರೇವಣ್ಣ – ‘ಹೈಡ್ ಅಂಡ್ ಸೀಕ್’ ಪೋಸ್ಟರ್ ಲಾಂಚ್

(Anup Revanna birthday) ಲಕ್ಷ್ಮಣ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಭರವಸೆ ಮೂಡಿಸಿರುವ ಯುವನಟ ಅನೂಪ್ ರೇವಣ್ಣನವರು ‘ಹೈಡ್ ಅಂಡ್ ಸೀಕ್’ ಸಿನಿಮಾ ಮೂಲಕ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. ಇದೀಗ ಅನೂಪ್ ರೇವಣ್ಣ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು, ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ತಮ್ಮ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಂಡಿದ್ದಾರೆ. ಇದರ ಜೊತೆಗೆ ಅನೂಪ್‌ ಅವರ ಜನ್ಮ ದಿನದಂದೇ ಹೈಡ್ ಅಂಡ್ ಸೀಕ್ ಚಿತ್ರತಂಡ ಸಿನಿಮಾದ ಪೋಸ್ಟರ್ ಲಾಂಚ್ ಮಾಡಿ ಚಿತ್ರದ ನಾಯಕ ನಟನಿಗೆ ಜನ್ಮ ದಿನದ ಶುಭಾಶಯವನ್ನು ಕೋರಿದೆ.

ಹೈಡ್ ಅಂಡ್ ಸೀಕ್ ಸಿನಿಮಾ ಪುನೀತ್‌ ನಾಗರಾಜು ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಈ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಅನೂಪ್‌ ರೇವಣ್ಣ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಅನೂಪ್‌ ರೇವಣ್ಣ ಅವರಿಗೆ ನಾಯಕಿಯಾಗಿ ಧನ್ಯಾ ರಾಮ್‌ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅನೂಪ್‌ ರೇವಣ್ಣ ಇನ್ನೊಂದು ಸೀಕ್ರೇಟ್‌ ರಿವೀಲ್‌ ಮಾಡಿದ್ದು, ರಿಯಲ್‌ ಸ್ಟಾರ್‌ ಉಪೇಂದ್ರ ಅಭಿನಯದ ಫ್ಯಾನ್‌ ಇಂಡಿಯಾ ಸಿನಿಮಾ ಕಬ್ಜ ಚಿತ್ರದಲ್ಲಿ ಸ್ಪೆಶಲ್‌ ರೋಲ್‌ ನಲ್ಲಿ ಕಾಣಿಸಿಕೊಂಡಿದ್ದರ ಬಗ್ಗೆ ಕೂಡ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ. ಇದಲ್ಲದೇ ಹೈಡ್‌ ಆಂಡ್‌ ಸೀಕ್‌ ಹಾಗೂ ಕಬ್ಜ ಎರಡೂ ಸಿನಿಮಾಗಳು ಕೂಡ ಸ್ಪೆಶಲ್‌ ಸಿನಿಮಾಗಳಾಗಿದ್ದು, ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ ಎಂಬ ಭರವಸೆಯನ್ನು ಕೂಡ ಅನೂಪ್‌ ರೇವಣ್ಣ ನೀಡಿದ್ದಾರೆ.

ಇನ್ನೂ ಹೊಸ ಸಿನಿಮಾ ‘ಹೈಡ್ ಅಂಡ್ ಸೀಕ್’ ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು, ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಪುನೀತ್ ನಾಗರಾಜು ಅವರ ನಿರ್ದೇಶನದಲ್ಲಿ, ವಸಂತ್ ರಾವ್ ಎಂ.ಕುಲ್ಕರ್ಣಿ ಅವರ ನಿರ್ಮಾಣದಲ್ಲಿ ಈ ಚಿತ್ರ ಮೂಡಿ ಬರುತ್ತಿದ್ದು, ರಿಜೋ ಪಿ ಜಾನ್ ಅವರು ಛಾಯಾಗ್ರಾಹಣ ಮಾಡಿದ್ದಾರೆ. ಇನ್ನೂ ಈ ಚಿತ್ರಕ್ಕೆ ಸ್ಯಾಂಡಿ ಅದ್ದಾನ್ಕಿ ಅವರ ಸಂಗೀತ ನಿರ್ದೇಶನವಿದ್ದು, ಮಧು ತುಂಬಕೆರೆ ಅವರು ಸಿನಿಮಾದ ಸಂಕಲನವನ್ನು ಮಾಡಿದ್ದಾರೆ.

ಇದನ್ನೂ ಓದಿ : Imandar first song release: ಇಮಾನ್ದಾರ್‌ ಸಿಲ್ಕು ಮಿಲ್ಕು ಸಾಂಗ್‌ ರಿಲೀಸ್:‌ ಪ್ರಮೋದ್‌ ಶೆಟ್ಟಿಗೆ ಸಿಕ್ತು ಘಟೋದ್ಗಜ ಟೈಟಲ್‌

Anup Revanna birthday: Anup Revanna celebrated his birthday with his fans – ‘Hide and Seek’ poster launch

Comments are closed.