Good Bye Arun Bali : ಗುಡ್‌ ಬೈ ರಿಲೀಸ್ ದಿನವೇ ಬಾಲಿವುಡ್ ಖ್ಯಾತ ನಟ ಆಕ್ಟರ್ ಅರುಣ್‌ ಬಾಲಿ ವಿಧಿವಶ

ಮುಂಬೈ : ( Good Bye Arun Bali ) ಬಾಲಿವುಡ್‌ ಖ್ಯಾತ ನಟ ಅರುಣ್‌ ಬಾಲಿ ಅವರು ಇಂದು ( ಶುಕ್ರವಾರ ) ಬೆಳಿಗ್ಗೆ ನಿಧನರಾಗಿದ್ದಾರೆ. ತಮ್ಮ ಕೊನೆಯ ಸಿನಿಮಾ “ಗುಡ್‌ ಬೈ ” ಸಿನಿಮಾ ರೀಲೀಸ್‌ ದಿನವೇ ಮುಂಬೈನಲ್ಲಿ ತಮ್ಮ ಕೊನೆಯುಸಿರೆಳೆದಿದ್ದಾರೆ . ಬಾಲಿವುಡ್‌ ಚಿತ್ರರಂಗದ ಹಿರಿಯ ನಟರನ್ನು ಕಳೆದುಕೊಂಡ ಚಿತ್ರರಂಗ ಕಣ್ಣೀರಿನ ಮೂಲಕ ಅವರಿಗೆ ವಿದಾಯ ಹೇಳಿದ್ದಾರೆ. ಅರುಣ್‌ ಬಾಲಿ ಈ ಹಿಂದೆಯೆ ಕಾಯಿಲೆಗಳಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು . ಆರೋಗ್ಯ ಪರೀಕ್ಷೆಯಲ್ಲಿ ಇವರಿಗೆ ʼಮ್ಯಾಸ್ತೆನಿಯಾ ಗ್ರೇವಿಸ್‌ ಎ ಕ್ರೋನಿಕ್‌ ಆಟೋಇಮ್ಯೂನ್‌ ʼ ನ್ಯೂರೋ ಮಸ್ಕ್ಯೂಲಾರ್‌ ಎನ್ನುವ ಕಾಯಿಲೆ ಇರುವುದಾಗಿ , ಶುಕ್ರವಾರ ಬೆಳಿಗ್ಗೆ ಅವರು ತಮ್ಮ ಕೊನೆಯುಸಿರೆಳೆದರು( Good Bye Arun Bali ).

ಬಾಲಿವುಡ್‌ನ ಹಿರಿಯ ನಟ ಅರುಣ್‌ ಬಾಲಿ ಅವರ ನಟನೆಯ ಕೊನೆಯ ಸಿನಿಮಾ ವಿಕಾಸ್‌ ಬಹ್ಲ್‌ ನಿರ್ದೇಶನದ , ಅಮಿತಾಬ್‌ ಬಚ್ಚನ್‌ , ನೀನಾ ಗುಪ್ತ ಹಾಗೂ ರಶ್ಮಿಕಾ ಮಂದಣ್ಣ ಅವರ ಜೊತೆ ನಟಿಸಿದ ” ಗುಡ್‌ ಬೈ “ ಶುಕ್ರವಾರ ತೆರೆ ಕಾಣಲಿದ್ದು, ಅದೇ ದಿನ ಬಾಲಿ ಅವರು ಸಿನಿಲೋಕಕ್ಕೆ ಹಾಗೂ ತಮ್ಮ ಜೇವನ ಪಯಣಕ್ಕೆ ಗುಡ್‌ ಬೈ( Good Bye Arun Bali ) ಹೇಳಿ ಹೊರಟಿದ್ದಾರೆ. ಮತ್ತೆ ಬಾರದ ಲೋಕಕ್ಕೆ ತೆರಳಿದ ಹಿರಿಯ ನಟ ಬಾಲಿ ಅವರನ್ನು ನೆನೆದು ಅವರ ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ.

ಬಾಲಿ ಅವರು ಅನೇಕ ಚಿತ್ರಗಳ ಹಾಗೂ ದಾರಾವಾಹಿಗಳಲ್ಲಿ ಅಭಿನಯಿಸಿದ್ದು, 1991 ರ ಸಮಯದಲ್ಲಿ ದಾರವಾಹಿಯೊಂದರಲ್ಲಿ ʼಚಾಣಕ್ಯʼ ಪಾತ್ರದ ಮೂಲಕ ಜನರ ಮನಸಲ್ಲಿ ನೆಲೆನಿಂತಿದ್ದರು . ಅದಲ್ಲದೆ ʼಕೇದಾರನಾಥʼ, 3 ಈಡಿಯಟ್ಸ್‌ ʼ, ʼಹೇ ರಾಮʼ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ : 108 Ambulance : ರಾಜ್ಯದಲ್ಲಿ ಮೆಡಿಕಲ್ ಎಮರ್ಜೆನ್ಸಿ : ಮುಷ್ಕರಕ್ಕೆ ಮುಂದಾದ 108 ಚಾಲಕರು

ಇದನ್ನೂ ಓದಿ :Mexico Firing : ಮೆಕ್ಸಿಕೋ ಸಿಟಿಯಲ್ಲಿ ಗುಂಡಿನ ದಾಳಿ ; ಮೇಯರ್‌ ಸೇರಿ 18 ಮಂದಿ ಸಾವು

ಇದನ್ನೂ ಓದಿ : Karnataka Weather Report : ಮತ್ತೆ ಶುರುವಾಯ್ತು ಮಳೆಯ ಅಬ್ಬರ ;ಕರ್ನಾಟಕದಲ್ಲಿ ಯೆಲ್ಲೋ ಅಲರ್ಟ್‌

ಅರುಣ್‌ ಬಾಲಿ ತಮ್ಮ 79 ನೇ ವಯಸ್ಸಿನಲ್ಲಿ ನಿಧನರಾಗಿದ್ದು , ಅವರ ಸಾವಿನ ಸುದ್ದಿ ತಿಳಿದ ಅಭಿಮಾನಿಗಳು ಟ್ವಿಟರ್‌ ಮೂಲಕ ಬಾಲಿ ಅವರಿಗೆ ಶೃದ್ಧಾಂಜಲಿಯನ್ನು ಸಲ್ಲಿಸಿದ್ದಾರೆ. “ಬಾಲಿಯವರು ಒಬ್ಬ ಸಹಜ ನಟ, ಪ್ರತಿ ಪಾತ್ರದಲ್ಲೂ ಒಳ್ಳೆಯ ನಟನೆಯನ್ನು ಮಾಡುವವರು , ಅವರ ಆತ್ಮಕ್ಕೆ ಶಾಂತಿ ಸಿಗಲಿ. RIP” ಎಂದು ಟ್ವಿಟರ್‌ ನಲ್ಲಿ ಶೃದ್ಧಾಂಜಲಿಯನ್ನು ಕೋರಿದ್ದಾರೆ.

ಅವರು ನಿಜ ಜೀವನದಲ್ಲಿ ನಮ್ಮನ್ನು ಅಗಲಿರಬಹುದು, ಆದರೆ ಚಿತ್ರರಂಗದಲ್ಲಿ ಅವರು ನಟಿಸಿರುವ ಸಿನಿಮಾಗಳ ಮೂಲಕ ನಮ್ಮ ಜೊತೆಗಿದ್ದಾರೆ , ಆದರೆ ಸಿನಿಮಾ ರಿಲೀಸ್‌ ದಿನವೇ ಅವರು ವಿದಾಯ ಹೇಳಿದರು ಎಂದು ಅಭಿಮಾನಿಗಳು ಕಮೆಂಟ್‌ ಮಾಡುವ ಮೂಲಕ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ.

(Good Bye Arun Bali) Famous Bollywood actor Arun Bali passed away this (Friday) morning. He breathed his last in Mumbai on the day of the release of his last movie “Goodbye”.

Comments are closed.