Namma metro profit : ಕೊರೋನಾ ಬಳಿಕ ಚೇತರಿಸಿಕೊಂಡ ನಮ್ಮ ಮೆಟ್ರೋ: ಪ್ರತಿತಿಂಗಳು 36 ಕೋಟಿ ಆದಾಯ

ಬೆಂಗಳೂರು : Namma metro profit : ಎಲ್ಲೆಡೆ ನಷ್ಟದ್ದೆ ಸುದ್ದಿ. ಕೊರೋನಾದ ಎಫೆಕ್ಟ್ ನಿಂದ ಎಲ್ಲ ಉದ್ಯಮಗಳು ಆದಾಯವಿಲ್ಲದೇ ಸೊರಗುತ್ತಿರುವಾಗಲೇ ನಮ್ಮ ಮೆಟ್ರೋ ಮಾತ್ರ ಭರ್ಜರಿ ಆದಾಯ ಗಳಿಸುತ್ತಿದ್ದು, ಕೊರೋನಾ ವೇಳೆಯಲ್ಲಿ ಎದುರಿಸಿದ ನಷ್ಟದಿಂದ ಹೊರಬರುವ ಪ್ರಯತ್ನದಲ್ಲಿದೆ. ಸದ್ಯ ನಮ್ಮ ಮೆಟ್ರೋ ಲಾಭದಲ್ಲಿದೆ. ಕೋವಿಡ್ ಸಂಕಷ್ಟದಿಂದ ಹೊರ ಬಂದು ನಿತ್ಯ ಲಾಭ ಮಾಡ್ತಿರೋ ಮೆಟ್ರೋ ತಿಂಗಳಿಗೆ ಸರಾಸರಿ 36 ಕೋಟಿ ರೂ ಆದಾಯ ಸಂಗ್ರಹಿಸುತ್ತಿದೆ.

ಮೆಟ್ರೋದಲ್ಲಿ ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು ಪ್ರಯಾಣಿಸುತ್ತಿದ್ದಾರೆ. ಇದರಿಂದ ಕೋಟ್ಯಾಂತರ ಆದಾಯ ಗಳಿಸುತ್ತಿರುವ ನಮ್ಮ ಮೆಟ್ರೋ ಈ ಪೈಕಿ ತಿಂಗಳಿಗೆ ಎಲ್ಲಾ ಖರ್ಚು ಬಿಟ್ಟು 6 ಕೋಟಿ ನಮ್ಮ ಮೆಟ್ರೋ ಖಜಾನೆಗೆ ಬರುತ್ತಿದೆ. ಮೆಟ್ರೋ ನಿಗಮಕ್ಕೆ ಪ್ರಯಾಣಿಕರ ಟಿಕೆಟ್ ದರದಿಂದ ಪ್ರತಿ ನಿತ್ಯ 1 ಕೋಟಿ 20 ಲಕ್ಷ ರೂ ಸಂಗ್ರಹವಾಗುತ್ತಿದೆ. ಇದರಲ್ಲಿ 1 ಕೋಟಿಯಷ್ಟನ್ನು ನಮ್ಮ ಮೆಟ್ರೋ ತನ್ನ ಪ್ರತಿನಿತ್ಯದ ಆಪರೇಷನ್ ವೆಚ್ಚಮಾಡ್ತಿದೆ. ಇದನ್ನು ಹೊರತುಪಡಿಸಿ 20 ಲಕ್ಷ ಪ್ರತಿನಿತ್ಯದ ಲಾಭ.

ಕೊರೋನಾಗೂ ಮೊದಲು ಪ್ರತಿ ದಿನ 5.50 ಲಕ್ಷ ಪ್ರಯಾಣಿಕರು ಮೆಟ್ರೋ ಬಳಕೆ ಮಾಡುತ್ತಿದ್ದರು. ಆದರೆ ಕೊರೋನಾ ಸಮಯದಲ್ಲಿ ಈ ಸಂಖ್ಯೆ 1 ಲಕ್ಷಕ್ಕೆ ಇಳಿಕೆಯಾಗಿತ್ತು. ಈಗ‌ ಮತ್ತೆ ಐಟಿ ಬಿಟಿ ಸೇರಿದಂತೆ ಎಲ್ಲ ಕ್ಷೇತ್ರಗಳು ರೆಸ್ಯೂಮ್ ಆಗಿದ್ದು ಮತ್ತೆ ಎಲ್ಲರೂ ಉದ್ಯೋಗಕ್ಕೆ ಮರಳುತ್ತಿದ್ದಾರೆ. ಹೀಗಾಗಿ ಈಗ ಮತ್ತೆ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದೆ.ಪ್ರತಿ ದಿನ ಸರಾಸರಿ 5 ಲಕ್ಷ ಪ್ರಯಾಣಿಕರಿಂದ ಮೆಟ್ರೋ ಸೇವೆ ಬಳಕೆಯಾಗ್ತಿದ್ದು, ಪ್ರತಿನಿತ್ಯ ‌ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇನ್ನೂ ಪೂರ್ಣಪ್ರಮಾಣದಲ್ಲಿ ಐಟಿ ವರ್ಕ್ ಫ್ರಂ ಆಫೀಸ್ ಆಗಿಲ್ಲ.. ಹೀಗಿದ್ರೂ ಮೆಟ್ರೋ ಲಾಭದ ಗಳಿಕೆ ಮಾಡ್ತಿದೆ

ಪೂರ್ಣಪ್ರಮಾಣದಲ್ಲಿ ಐಟಿ ಬಿಟಿ ಆರಂಭವಾದ್ರೆ ಮೆಟ್ರೋ ಲಾಭ ಡಬಲ್ ಆಗುವ ನಿರೀಕ್ಷೆ ಇದೆ. ಕೇವಲ ನಮ್ಮ ಮೆಟ್ರೋ ಮಾತ್ರ ಲಾಭದಲ್ಲಿದ್ದು ಇನ್ನುಳಿದ ಸರ್ಕಾರಿ ಸಂಪರ್ಕ ಮಾಧ್ಯಮಗಳಾದ ಬಿಎಂಟಿಸಿ , ಕೆಎಸ್ಆರ್ಟಿಸಿ ಹಾಗೂ ಇತರ ಮಾಧ್ಯಮಗಳು ನಷ್ಟದಲ್ಲಿವೆ. ಪ್ರತಿನಿತ್ಯ ಸಾವಿರಾರು ಬಸ್ ಗಳು ಸಂಚರಿಸುತ್ತಿದ್ದರೂ ಪ್ರಯಾಣಿಕರ ಸಂಖ್ಯೆ ಏರುತ್ತಿಲ್ಲ. ಅಲ್ಲದೇ ಬಸ್ ಗಳು ಕೂಡ ಪ್ರಯಾಣಿಕರನ್ನು ಸೆಳೆಯುವಲ್ಲಿ ವಿಫಲವಾಗ್ತಿರೋದಲ್ಲದೇ ಬಸ್ ಗಳ ನಿರ್ವಹಣೆಗೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದೆ‌ . ಇದರ ಮಧ್ಯೆ ಸದ್ಯ ಮೆಟ್ರೋವೊಂದೇ ಸರ್ಕಾರಕ್ಕೆ ಆದಾಯ ತರುತ್ತಿದೆ.

ಇದನ್ನೂ ಓದಿ : Bengaluru Power cut : ಬೆಂಗಳೂರಿನಲ್ಲಿಂದು ವಿದ್ಯುತ್ ಕಡಿತ : ಇಲ್ಲಿದೆ ಸಂಪೂರ್ಣ ವಿವರ

ಇದನ್ನೂ ಓದಿ : BBMP : ದಸರಾ ಎಫೆಕ್ಟ್ ಎಲ್ಲೆಂದರಲ್ಲಿ ಕಸ: ತ್ಯಾಜ್ಯ ನಿರ್ವಹಣೆಯಲ್ಲಿ ಸೋತ ಬಿಬಿಎಂಪಿ

Namma metro is in profit After Corona Pandemic, 1 crore 20 lakh daily earnings

Comments are closed.