Good news for D Boss fans: ಡಿ ಬಾಸ್ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಇಂದಿನಿಂದ ಡೆವಿಲ್ ಅಡ್ವಾನ್ಸ್ ಬುಕ್ಕಿಂಗ್ ಶುರು
Good news for D Boss fans: ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅಭಿಮಾನಿಗಳು ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಬಹುನಿರೀಕ್ಷಿತ ಡೆವಿಲ್ ಸಿನಿಮಾ ಇದೇ ತಿಂಗಳ 11ನೇ ತಾರೀಖಿನಂದು ಬೆಳ್ಳಿ ತೆರೆಗೆ ಅಪ್ಪಳಿಸುತ್ತಿದೆ.ಈ ನಡುವೆ ಇಂದಿನಿಂದಲೇ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಆಗಲಿದ್ದು ಡಿ ಬಾಸ್ ಅಭಿಮಾನಿಗಳು ಫುಲ್ ಖುಶ್ ಆಗಿದ್ದಾರೆ.ಇಂದು ಮಧ್ಯಾಹ್ನ 1 ಗಂಟೆಯಿಂದ ಅಡ್ವಾನ್ಸ್ ಬುಕ್ಕಿಂಗ್ ಪ್ರಕ್ರಿಯೆ ಆರಂಭಗೊಳ್ಳುತ್ತಿದೆ.
ಬೆಂಗಳೂರು, ಶಿವಮೊಗ್ಗ, ಹಾಸನ,ಮೈಸೂರು ಸೇರಿದಂತೆ ರಾಜ್ಯದ ವಿವಿಧ ಚಿತ್ರಮಂದಿರಗಳಲ್ಲಿ ದರ್ಶನ್ ಕಟೌಟ್ಗಳು ರಾರಾಜಿಸುತ್ತಿದ್ದು, ನೆಚ್ಚಿನ ನಟನ ಸಿನಿಮಾ ಪ್ರದರ್ಶನವನ್ನು ಹಬ್ಬದಂತೆ ಆಚರಿಸಲು ಡಿ ಬಾಸ್ ಅಭಿಮಾನಿಗಳು ಎಲ್ಲಾ ರೀತಿಯ ತಯಾರಿ ಮಾಡಿಕೊಂಡಿದ್ದಾರೆ.
ಡೆವಿಲ್ ಸಿನಿಮಾದ ಟ್ರೇಲರ್ ಬಿಡುಗಡೆಯಾದ ಕೇವಲ ಅರ್ಧ ಗಂಟೆಯಲ್ಲಿ 3 ಲಕ್ಷ ಮಂದಿ ವೀಕ್ಷಿಸುವ ಮೂಲಕ ದಾಖಲೆ ನಿರ್ಮಿಸಿತ್ತಯ.ದರ್ಶನ್ರ ಹೊಸ ಗೆಟಪ್ಗೆ ಅಭಿಮಾನಿಗಳು ಫಿದಾ ಆಗಿದ್ದರು. ಟ್ರೇಲರ್ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿಸಿದ್ದು ಯಾವಾಗ ಡಿಸೆಂಬರ್ 11 ಬರುತ್ತೋ ಎಂದು ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.
ಸೂರ್ಯಂಗೆ ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ,ನಾನು ಬರ್ತಿದಿದ್ದೀನಿ ಎಂದು ನಟ ದರ್ಶನ್ ಡೈಲಾಗ್ ಹೊಡೆದಿದ್ದಾರೆ . ನಿಜ ಜೀವನದಲ್ಲಿಯೂ ರೇಣುಕಾಸ್ವಾಮಿ ಕೊಲೆ ಪ್ರಕರಣದಿಂದಾಗಿ ನಟ ದರ್ಶನ್ ಜೀವನಕ್ಕೂ ಗ್ರಹಣ ಹಿಡಿದಂತಾಗಿದೆ. ತಮ್ಮದೇ ಸಿನಿಮಾ ರಿಲೀಸ್ನ ಖುಷಿಯನ್ನೂ ಅನುಭವಿಸುವ ಅವಕಾಶ ದರ್ಶನ್ಗೆ ಸಿಗದಂತಾಗಿದೆ.
Also Read: ಕಿಚ್ಚನ ಮುಂದೆಯೇ ಕಿತ್ತಾಡಿಕೊಂಡ ಧ್ರುವಂತ್-ರಜತ್! ಸುದೀಪ್ ಮೌನವಾಗಿದ್ಯಾಕೆ?
ನೆಚ್ಚಿನ ನಟ ಜೈಲಿನಲ್ಲಿರುವ ಈ ಸಂದರ್ಭದಲ್ಲಿ ಅವರ ಸಿನಿಮಾಗೆ ಭರ್ಜರಿ ಯಶಸ್ಸು ದೊರಕಿಸಬೇಕೆಂದು ಡಿ ಬಾಸ್ ಅಭಿಮಾನಿಗಳು ಪಣ ತೊಟ್ಟಿದ್ದಾರೆ.ಡೆವಿಲ್ ಸಿನಿಮಾ ದರ್ಶನ್ ಅಭಿಮಾನಿಗಳ ಪಾಲಿಗೆ ಪ್ರತಿಷ್ಠೆಯ ವಿಚಾರವಾಗಿದೆ.
ಹೀಗಾಗಿ ಸಿನಿಮಾ ಹೇಗೇ ಇದ್ದರೂ ಯಶಸ್ಸು ದೊರಕಿಸಿಕೊಡಬೇಕು.ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಬೇಕು ಎನ್ನುವುದು ದರ್ಶನ್ ಅಭಿಮಾನಿಗಳು ಪಣ ತೊಟ್ಟಿದ್ದಾರೆ .



