Alia Ranbir Wedding : ಮುಂದಿನವಾರವೇ ಫಿಕ್ಸ್‌ ಆಯ್ತಾ? ರಣಬೀರ್-ಅಲಿಯಾ ಭಟ್ ಮದುವೆ!

ಕಳೆದ ಒಂದು ತಿಂಗಳಿಂದ ಬಾಲಿವುಡ್ ಭಾವಿ ದಂಪತಿ ಎಂದೇ ಬಿಂಬಿತವಾಗಿರುವ ಅಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಯ(Alia-Ranbir Wedding) ಬಗ್ಗೆ ಗಾಳಿ ಸುದ್ದಿ ಓಡಾಡುತ್ತಲೇ ಇದೆ. ಈ ಇಬ್ಬರೂ ಕೊನೆಗೂ ಮದುವೆಯಾಗುತ್ತಿದ್ದಾರೆ. ಅದು ಈ ಏಪ್ರಿಲ್ ನಲ್ಲಿ ಅನ್ನೋದು ಸುದ್ದಿಯ ಹೂರಣ. ಆದರೆ, ನಿಜಕ್ಕೂ ಮದುವೆಯಾಗುತ್ತಿದ್ದಾರ ಅಂತ ಸ್ವತಃ ಈ ಸ್ಟಾರ್ ಗಳು ಮಾತ್ರ ಖಚಿತಪಡಿಸಿಲ್ಲ.

ಹಾಗೇ ನೋಡಿದರೆ, ಈ ಇಬ್ಬರು ಮದುವೆ(Alia Ranbir Wedding) ಬಗೆಗಿನ ಸುದ್ದಿ ಹೊಸತೇನಲ್ಲ. ಈಗಾಗಲೇ ನೂರಾರು ಗಾಳಿಸುದ್ದಿಗಳು ಹರಿದಾಡುತ್ತಲೇ ಇದ್ದವು. ಈ ಹಿಂದೆ, ಇಬ್ಬರೂ ಬೇರೆ, ಬೇರೆ ಆಗಿದ್ದಾರೆ ಅಂದಾಗ ಸ್ವತಃ ಅಲಿಯಾ ಭಟ್ಟೇ ನಾವು ಮದುವೆಯಾಗುವುದು ಖಚಿತ. ಆದರೆ, ಯಾವಾಗ ಅನ್ನೋದು ಇನ್ನು ನಿರ್ಧಾರವಾಗಿಲ್ಲ ಅಲ್ಲ ಅಂತ ಹೇಳಿಕೆ ನೀಡಿದ್ದರು.

ಇದನ್ನೂ ಓದಿ : Grammy Award : ನನಗೆ ಡಬಲ್ ಪ್ರಶಸ್ತಿ ಬಂದಂತಾಯಿತು! ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕ್ಕಿ ಕೇಜ್ ಮಾತು

ಇದೀಗ ಬಂದ ಸುದ್ದಿಯ ಪ್ರಕಾರ, ಮುಂದಿನವಾರವೇ ಅಲಿಯಾಭಟ್, ರಣಬೀರ್ ಕಪೂರರನ್ನು ವರಿಸಲಿದ್ದಾರೆ. ಇದರ ಸೂಚನೆಯಂತೆ, ರಣಬೀರ್ ಗೆಳೆಯರ ತಂಡಕ್ಕೆ ದೊಡ್ಡ, ಐಷಾರಾಮಿ ಬ್ಯಾಚುಲರ್ ಪಾರ್ಟಿ ನೀಡಲು ಸರ್ವಸಿದ್ಧತೆ ಮಾಡಿಕೊಳ್ಳುತ್ತಿದ್ದಾರಂತೆ. ಅದೂ ಕೂಡ ರಣಬೀರ್ ಮನೆಯಲ್ಲಿ ನಡೆಯಲಿದೆ ಎನ್ನುವುದನ್ನು ಪತ್ರಿಕೆಯೊಂದು ವರದಿ ಮಾಡಿದೆ. ಈ ಪಾರ್ಟಿಯಲ್ಲಿ ರಣಬೀರರ ಅಗದಿ ಗೆಳೆಯರು ಹಾಗೂ ಅರ್ಜುನ್ ಕಪೂರ್, ಅಧಿತ್ಯಾ ರಾಯ್ ಕಪೂರ್ ಮತ್ತು ಆಯನ್ ಮುಖರ್ಜಿ ಕೂಡ ಈ ಪಾರ್ಟಿಯಲ್ಲಿ ಭಾವಹಿಸಲಿದ್ದಾರೆ.

ಇನ್ನೊಂದು ಮೂಲದ ಪ್ರಕಾರ, ಮದುವೆಯ ಸಿದ್ಧತೆಗಳು ಕೂಡ ಭರದಿಂದ ಸಾಗಿದ್ದು, ರಣಬೀರ್ ಅವರ ಅಜ್ಜಿಯಮನೆಯಾದ ಆರ್ ಕೆ ಹೌಸ್ ನಲ್ಲಿ ಈ ಮದುವೆ ಸಮಾರಂಭ ನಡೆಯಲಿದೆ ಎನ್ನಲಾಗುತ್ತಿದೆ.

ಇತ್ತ ಅಲಿಯಾ ಭಟ್ ನಟನೆಯ ಬ್ರಹ್ಮಸೂತ್ರ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ರಣಬೀರ್ ಕಪೂರ್ ಅಭಿನಯದ ಸಮ್ ಸಹೇರ, ರಂಜನ್ ಅನ್ ಲಿಮಿಟೆಡ್ ಸಿನಿಮಾಗಳು ತೆರೆಕಾಣಲು ಸಿದ್ಧವಾಗುತ್ತಿವೆ. ರಣಬೀರ್ ಮತ್ತು ಅಲಿಯಾ ಭಟ್ ಜೋಡಿಯಾಗಿ ನಟಿಸಿರುವ ರಾಕಿ ಔರ್ ರಾಮಿ ಕಿ ಪ್ರೇಮ್ ಕಹಾನಿ ಕೂಡ ತೆರೆಕಾಣಬೇಕಿದೆ.

ಇದನ್ನೂ ಓದಿ : Rashmika Mandanna : ಹಿಜಾಬ್ ಧರಿಸಿದ ರಶ್ಮಿಕಾ : ಬರ್ತಡೇ ದಿನ ರಿಲೀಸ್ ಆಯ್ತು ವಿಭಿನ್ನ ಪೋಟೋ

(Alia Ranbir Wedding to finally happen next week)

Comments are closed.