Head Bush trailer:ತೆರೆಗೆ ಬರಲು ಸಿದ್ದವಾಯ್ತು “ಹೆಡ್‌ ಬುಶ್‌” :ಅಕ್ಟೋಬರ್‌ 16ಕ್ಕೆ ಟ್ರೈಲರ್ ರಿಲೀಸ್

(Head Bush trailer)ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್‌ ನಟನೆಯ ಹೆಡ್‌ ಬುಶ್‌ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದೆ. ಮಾನ್ಸೂನ್‌ ರಾಗ, ಬಡವರಾಸ್ಕಲ್ ಸೇರಿದಂತೆ ಹಲವು ಸಾಲು ಸಾಲು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಡಾಲಿ ನಟನೆಯ ಹೆಡ್ ಬುಷ್ ಸಿನಿಮಾ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

ಬೆಂಗಳೂರು ಭೂಗತ ಪಾತಕಿಗಳ ಲೋಕದಲ್ಲಿ ಭಯ ಹುಟ್ಟಿಸಿದ ಎಂ ಪಿ ಜಯರಾಜ್‌ ಜೀವನಾಧರಿತ ಸಿನಿಮಾ ತೆರೆಯ ಮೇಲೆ ಬರಲು ಸಿದ್ದವಾಗಿದೆ. ಜಯರಾಜ್‌ ಪಾತ್ರದಲ್ಲಿ ನಟ ಧನಂಜಯ್‌ ಬಣ್ಣ ಹಚ್ಚಿದ್ದಾರೆ.ಇವರಿಗೆ ಯಾವ ಪಾತ್ರವನ್ನು ಕೂಟ್ಟರು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ.ಚಿತ್ರದ ಪೋಸ್ಟರ್‌ ಮತ್ತು ಹಾಡು ಸೊಷಿಯಲ್‌ ಮಿಡಿಯಾದಲ್ಲಿ ಭಾರಿ ಸದ್ದು ಮಾಡಿದೆ.ಈ ಚಿತ್ರದ ಬಗ್ಗೆ ಜನರು ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇದೀಗ ಈ ಸಿನಿಮಾದ ಟ್ರೈಲರ್‌ ಬಿಡುಗಡೆಯ ಡೆಟ್‌ ಫಿಕ್ಸ್‌ ಆಗಿದೆ. ಅಕ್ಟೋಬರ್‌ 16 ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನಲ್ ನಲ್ಲಿ “ಹೆಡ್‌ ಬುಶ್” (Head Bush trailer)ಟ್ರೈಲರ್‌ ಬಿಡುಗಡೆ ಆಗಲಿದೆ.

ಈಗಾಗಲೇ ಈ ಸಿನಿಮಾದ ಬಗ್ಗೆ ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ನೀರಿಕ್ಷೆಗಳನ್ನು ಮೂಡಿಸಿದೆ. ಸದ್ಯ ಬಿಡುಗಡೆಯಾಗುವ ಟ್ರೈಲರ್‌ ಗಾಗಿ ಸಿನಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.ಈಗಾಗಲೇ ಡಾಲಿ ಧನಂಜಯ್‌ ವಿಲನ್‌ ಪಾತ್ರವನ್ನು ಜನರು ಮೆಚ್ಚಿಕೊಂಡಿದ್ದಾರೆ.ಈ ಸಿನಿಮಾದ ನಟನೆಯನ್ನು ಮೆಚ್ಚುತ್ತಾರೆ ಎಂಬುದು ಚಿತ್ರತಂಡದ ಆಶಯವಾಗಿದೆ.

ಇದನ್ನೂ ಓದಿ:Colors Kannada Serial Kannadathi : ಸಾನಿಯಾ ಕೆಣುಕಿದ್ದರೂ ತಾಳ್ಮೆ ಕಳೆದುಕೊಳ್ಳುತ್ತಿಲ್ಲ ಭುವಿ

ಇದನ್ನೂ ಓದಿ:Gyanvapi Case:ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂಗಳಿಗೆ ಹಿನ್ನಡೆ : ಶಿವಲಿಂಗದ ಕಾರ್ಬನ್​ ಡೇಟಿಂಗ್​ ಮಾಡಲು ಕೋರ್ಟ್ ನಕಾರ

ಪಾಯಲ್‌ ರಜಪೂತ್, ಶ್ರುತಿ ಹರಿಹರನ್‌, ಬಾಲು, ನಾಗೇಂದ್ರ, ರಘು ಮುಕರ್ಜಿ, ಲೂಸ್‌ ಮಾದ ಹಾಗೂ ವಸಿಷ್ಠ ಸಿಂಹ ,ಧನಂಜಯ ದೊಡ್ಡ ಸ್ಟಾರ್‌ ಬಳಗವೆ ಈ ಚಿತ್ರದಲ್ಲಿ ಬಣ್ಣವನ್ನು ಹಚ್ಚಿದ್ದಾರೆ. ಇನ್ನು ಈ ಸಿನಿಮಾಗೆ ಶೂನ್ಯ ಅವರು ಆಕ್ಷನ್‌ ಕಟ್‌ ಹೇಳಿದ್ದಾರೆ. ಸಂಗೀತದ ರಚನೆಯನ್ನು ಚರಣ್‌ ರಾಜ್‌ ಮಾಡಿದ್ದಾರೆ. ಹಲವಾರು ಸ್ಟಾರ್‌ ಬಳಗ ಈ ಚಿತ್ರದಲ್ಲಿ ನಟನೆ ಮಾಡಿರುವುದರಿಂದ ಅಭಿಮಾನಿಗಳ ಬಳಗ ಹೆಚ್ಚಾಗಿದೆ. ಈ ಸಿನಿಮಾ ಮೂಡಿಬಂದಿರುವ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ‌ಅಕ್ಟೋಬರ್‌21ಕ್ಕೆ ಹೆಡ್‌ ಬುಶ್‌ ಚಿತ್ರ ತೆರೆಯ ಮೇಲೆ ಬರಲು ಸಿದ್ದವಾಗಿದೆ.ಈ ಚಿತ್ರವನ್ನು ಜನರಿಗೆ ಔತಣವಾಗಿ ಬಡಿಸಬೇಕಿದೆ. ಈ ಔತಣವನ್ನು ಜನರು ಹೇಗೆ ಸವಿಯುತ್ತಾರೆ ಎಂದು ಕಾದು ನೋಡಬೇಕಿದೆ.

“Head Bush” all set to hit the screens: trailer release on October 16

Comments are closed.