Gyanvapi Case:ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂಗಳಿಗೆ ಹಿನ್ನಡೆ : ಶಿವಲಿಂಗದ ಕಾರ್ಬನ್​ ಡೇಟಿಂಗ್​ ಮಾಡಲು ಕೋರ್ಟ್ ನಕಾರ

ಉತ್ತರ ಪ್ರದೇಶ:Gyanvapi Case: : ವಾರಣಾಸಿಯ ಜ್ಞಾನವಾಪಿ ಮಸೀದಿ ವಿವಾದದಲ್ಲಿ ಹಿಂದೂಗಳಿಗೆ ಹಿನ್ನಡೆಯುಂಟಾಗಿದೆ. ಜ್ಞಾನವಾಪಿ ಸಂಕೀರ್ಣದಲ್ಲಿ ಪತ್ತೆಯಾದ ಶಿವಲಿಂಗದ ವಯಸ್ಸನ್ನು ನಿರ್ಧರಿಸಲು ಕಾರ್ಬನ್​ ಡೇಟಿಂಗ್​ ಮಾಡಿಸಬೇಕು ಎಂಬ ಹಿಂದೂ ಅರ್ಜಿದಾರರ ಬೇಡಿಕೆಯನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ .ಶಿವಲಿಂಗ ಅಥವಾ ಶಿವ ಲಿಂಗದ ಅವಶೇಷವು ಈ ವರ್ಷದ ಆರಂಭದಲ್ಲಿ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ನಡೆಸಲಾದ ವಿಡಿಯೋ ಸಮೀಕ್ಷೆಯ ಸಂದರ್ಭದಲ್ಲಿ ಕಂಡು ಬಂದಿತ್ತು. ಐವರು ಹಿಂದೂ ಮಹಿಳೆಯರು ಶಿವಲಿಂಗಕ್ಕೆ ಪ್ರತಿನಿತ್ಯ ಪೂಜೆ ಸಲ್ಲಿಸಲು ನಮಗೆ ಅವಕಾಶ ನೀಡಬೇಕೆಂದು ಅವಕಾಶವನ್ನು ಕೋರಿ ಸಲ್ಲಿಸಿದ್ದ ಅರ್ಜಿಯ ಪ್ರತಿಕ್ರಿಯೆಗಾಗಿ ಕೆಳ ಹಂತದ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿ ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿದೆ.

ಕಾರ್ಬನ್​ ಡೇಟಿಂಗ್​ನಂತ ಯಾವುದೇ ಸಮೀಕ್ಷೆಯು ಮಸೀದಿಯೊಳಗಿನ ಶಿವಲಿಂಗ ಸ್ಥಳವನ್ನು ಸೀಲ್​ ಮಾಡುವ ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ವಾರಣಾಸಿ ನ್ಯಾಯಾಲಯವು ಹೇಳಿದೆ. ಕಳೆದ ತಿಂಗಳು ಐವರು ಹಿಂದೂ ಅರ್ಜಿದಾರರಲ್ಲಿ ನಾಲ್ವರು ಶಿವಲಿಂಗದ ವಯಸ್ಸನ್ನು ನಿರ್ಧಸಿರಲು ಕಾರ್ಬನ್​ ಡೇಟಿಂಗ್​​ ಎಂಬ ವೈಜ್ಞಾನಿಕ ತನಿಖೆಗೆ ಒಳಪಡಿಸಬೇಕು ಎಂದು ಕೋರಿದ್ದರು. ಹಿಂದೂ ದೇವತೆಗಳ ಪುರಾತನ ವಿಗ್ರಹಗಳು ಮಸೀದಿಯ ಒಳಗೆ ನೆಲೆಗೊಂಡಿವೆ ಎನ್ನುವುದು ಮಹಿಳೆಯರ ವಾದವಾಗಿದೆ .


ಆದರೆ ಜ್ಞಾನವಾಪಿ ಮಸೀದಿ ಆಡಳಿತ ಮಂಡಳಿಯು ಕಾರ್ಬನ್​ ಡೇಟಿಂಗ್​ ವೈಜ್ಞಾನಿಕ ಪರೀಕ್ಷೆಗೆ ವಿರೋಧವನ್ನೊಡ್ಡಿತ್ತು. ಈ ರೀತಿಯ ತನಿಖೆಯಿಂದ ಮಸೀದಿಯ ವಿಗ್ರಹಗಳು ಹಾಳಾಗುತ್ತವೆ. ಅಲ್ಲದೇ ಮಸೀದಿಯೊಳಗೆ ಪೂಜೆ ಮಾಡಬೇಕು ಎಂಬ ಹಿಂದೂಗಳ ವಾದಕ್ಕೂ ಈ ಶಿವಲಿಂಗದಂತಹ ರಚನೆಗೂ ಯಾವುದೇ ಸಂಬಂಧವಿಲ್ಲ. ವಾಸ್ತವದಲ್ಲಿ ಇದು ಮುಸ್ಲಿಮರು ಪ್ರಾರ್ಥನೆ ಸಲ್ಲಿಸುವ ಮುನ್ನ ಶುದ್ಧೀಕರಣಗೊಳ್ಳಲು ಬಳಸುವ ಕಾರಂಜಿ ಎಂಬುದು ಮಸೀದಿ ಆಡಳಿತ ಮಂಡಳಿಯ ವಾದವಾಗಿದೆ.


ಕಳೆದ ವಾರ ಶಿವಲಿಂಗ ಪ್ರಕರಣದ ಭಾಗವಾಗಿ ಮಾಡಬಹುದೇ ಹಾಗೂ ವೈಜ್ಞಾನಿಕ ತನಿಖೆಗೆ ಆದೇಶಿಸಬಹುದೇ ಎಂದು ನ್ಯಾಯಾಲಯ ಕೇಳಿತ್ತು. ಹಿಂದೂ ಮಹಿಳೆಯರನ್ನು ಪ್ರತಿನಿಧಿಸುವ ವಿಷ್ಣು ಶಂಕರ್​ ಜೈನ್​ ಈ ಎರಡೂ ಪ್ರಕರಣಗಳ ವಿಚಾರವಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಲು ಯತ್ನಿಸಿದ್ದರು.

ಇದನ್ನು ಓದಿ : Colors Kannada Serial Kannadathi : ಸಾನಿಯಾ ಕೆಣುಕಿದ್ದರೂ ತಾಳ್ಮೆ ಕಳೆದುಕೊಳ್ಳುತ್ತಿಲ್ಲ ಭುವಿ

ಇದನ್ನೂ ಓದಿ :murugha shri:ಮುರುಘಾ ಶ್ರೀಗಳಿಗೆ ಹೊಸ ಸಂಕಷ್ಟ : ಶ್ರೀಗಳ ವಿರುದ್ಧ ಮತ್ತೆ ದಾಖಲಾಯ್ತು ಲೈಂಗಿಕ ದೌರ್ಜನ್ಯ ಪ್ರಕರಣ

Gyanvapi Case: Setback For Hindu Side, No Scientific Probe Of ‘Shivling’

Comments are closed.