Jothe Jotheyali Team : ಜೊತೆ ಜೊತೆಯಲಿ ಸೀರಿಯಲ್​ ಸೆಟ್​ನಿಂದ ಅನೂಪ್​ ಭಂಡಾರಿಗೆ ಆಫರ್​​

Jothe Jotheyali Team : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಜೊತೆ ಜೊತೆಯಲಿ ಧಾರವಾಹಿ ಸದ್ಯ ವಿವಾದದ ಕಾರಣಗಳಿಂದಲೇ ಸುದ್ದಿಯಲ್ಲಿದೆ. ಈ ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನಿರುದ್ಧ ಧಾರವಾಹಿ ತಂಡದಿಂದ ಗೇಟ್​ಪಾಸ್​​​ ಪಡೆದಿದ್ದಾರೆ. ಅಲ್ಲದೇ ಕಿರುತೆರೆಯಿಂದ 2 ವರ್ಷಗಳ ನಿಷೇಧವನ್ನೂ ಅನುಭವಿಸುತ್ತಿದ್ದಾರೆ. ಅನಿರುದ್ಧ ಜತ್ಕರ್​ ಹಾಗೂ ಆರೂರು ಜಗದೀಶ್​ ನಡುವಿನ ಗುದ್ದಾಟದಿಂದ ಧಾರವಾಹಿಗೆ ಇದೀಗ ಮುಖ್ಯ ಪಾತ್ರಧಾರಿ ಇಲ್ಲದಂತಾಗಿದೆ.


ಜೊತೆ ಜೊತೆಯಲಿ ಧಾರವಾಹಿ ತಂಡವು ಇದೀಗ ಮುಖ್ಯ ಪಾತ್ರಧಾರಿಯ ಹುಡುಕಾಟದಲ್ಲಿದೆ. ಈಗಾಗಲೇ ಆರ್ಯವರ್ಧನ್​​ ಪಾತ್ರದಲ್ಲಿ ಅನಿರುದ್ಧ ಕರುನಾಡ ಜನತೆಯ ಮನಸ್ಸನ್ನು ಗೆದ್ದಿರುವ ಹಿನ್ನೆಲೆಯಲ್ಲಿ ಈ ಪಾತ್ರಕ್ಕಾಗಿ ಸೂಕ್ತವಾದ ಕಲಾವಿದನನ್ನು ಆಯ್ಕೆ ಮಾಡಬೇಕಾದ ಬಹುದೊಡ್ಡ ಜವಾಬ್ದಾರಿ ಇದೀಗ ಧಾರವಾಹಿ ತಂಡದ ಮೇಲಿದೆ .


ಅನಿರುದ್ಧರನ್ನು ಧಾರವಾಹಿಯಿಂದ ಹೊರಗೆ ಕಳುಹಿಸಿರುವ ಜೊತೆ ಜೊತೆಯಲ್ಲಿ ತಂಡ ಆರ್ಯವರ್ಧನ್​ ಪಾತ್ರಕ್ಕೆ ಅನಿರುದ್ಧರನ್ನು ಹೋಲುವ ಮತ್ತೊಬ್ಬ ಕಲಾವಿದರಿಗಾಗಿ ಹುಡುಕಾಟ ನಡೆಸ್ತಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಸಮಯದಲ್ಲಿ ಅತ್ಯಂತ ಮುನ್ನೆಲೆಗೆ ಬಂದಿರುವ ಹೆಸರು ನಿರ್ದೇಶಕ ಅನೂಪ್​ ಭಂಡಾರಿ…! ಹೌದು.. ನಿರ್ದೇಶಕ ಅನೂಪ್​ ಭಂಡಾರಿಗೆ ಈ ಧಾರವಾಹಿಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುವಂತೆ ಆಫರ್​ ಬಂದಿದೆಯಂತೆ.

ಈ ಸಂಬಂಧ ಖುದ್ದು ಮಾಹಿತಿ ನೀಡಿರುವ ನಿರ್ದೇಶಕ ಅನೂಪ್ ಭಂಡಾರಿ, ನನಗೆ ಜೊತೆ ಜೊತೆಯಲ್ಲಿ ಧಾರವಾಹಿ ತಂಡದಿಂದ ಇಂತಹದ್ದೊಂದು ಆಫರ್​ ಬಂದಿದ್ದು ನಿಜ. ಆದರೆ ನಾನು ಈ ಆಫರ್​ನ್ನು ನಿರಾಕರಿಸಿದ್ದೇನೆ. ನಾನು ಸದ್ಯ ಹೊಸದೊಂದು ಸಿನಿಮಾವನ್ನು ಘೋಷಣೆ ಮಾಡುವ ತಯಾರಿಯಲ್ಲಿದ್ದೇನೆ. ಹೀಗಾಗಿ ಇದರ ಸ್ಕ್ರಿಪ್ಟ್​ ಕೆಲಸದಲ್ಲಿ ನಾನು ನಿರತನಾಗಿದ್ದೇನೆ. ಈ ಸಂದರ್ಭದಲ್ಲಿ ನನಗೆ ಧಾರವಾಹಿಯಲ್ಲಿ ನಟಿಸಲು ಸಮಯ ಇಲ್ಲ ಎಂದು ಹೇಳಿದ್ದಾರೆ .

ಧಾರವಾಹಿ ತಂಡದಿಂದ ಹೊರ ನಡೆದ ಬಳಿಕವೂ ಅನಿರುದ್ಧ ಬಹಿರಂಗವಾಗಿಯೇ ನಾನು ಈ ಧಾರವಾಹಿಗೆ ಮರಳಲು ರೆಡಿ ಇದ್ದೇನೆ ಎಂದು ಹೇಳಿದ್ದರು. ಆದರೆ ಆರೂರು ಜಗದೀಶ್​ ಮಾತ್ರ ಯಾವುದೇ ಕಾರಣಕ್ಕೂ ಅನಿರುದ್ಧ ಜೊತೆಗೆ ಮತ್ತೆ ಕೆಲಸ ಮಾಡಲು ಒಪ್ಪುತ್ತಲೇ ಇಲ್ಲ. ಇದೀಗ ಅನೂಪ್​ ಭಂಡಾರಿ ಕೂಡ ಈ ಪಾತ್ರಕ್ಕೆ ನೋ ಎಂದಿದ್ದಾರೆ. ಹೀಗಾಗಿ ಜೊತೆ ಜೊತೆಯಲಿ ತಂಡ ಹೊಸ ಆರ್ಯವರ್ಧನನ ಹುಡುಕಾಟಕ್ಕೆ ಮತ್ತಷ್ಟು ತಯಾರಿ ನಡೆಸಿದೆ.

ಇದನ್ನು ಓದಿ : POLICE COMPLAINT ON WOMAN : ಪತಿಯ ಮನೆಯ 10 ಲಕ್ಷ ರೂ. ದೋಚಿ ತವರು ಮನೆಗೆ ಎಸ್ಕೇಪ್​ ಆದ ಪತ್ನಿ

ಇದನ್ನೂ ಓದಿ : bath naked in public : ಗಂಡು ಮಗು ಬೇಕೆಂಬ ಹಂಬಲಕ್ಕೆ ಪತ್ನಿಗೆ ಸಾರ್ವಜನಿಕವಾಗಿ ಬೆತ್ತಲೆ ಸ್ನಾನ ಮಾಡಿಸಲು ಮುಂದಾದ ಪತಿ

I Had Received Offer From Jothe Jotheyali Team For Aryavardhan S Role Says Director Anup Bhandari

Comments are closed.