Imandar first song release: ಇಮಾನ್ದಾರ್‌ ಸಿಲ್ಕು ಮಿಲ್ಕು ಸಾಂಗ್‌ ರಿಲೀಸ್:‌ ಪ್ರಮೋದ್‌ ಶೆಟ್ಟಿಗೆ ಸಿಕ್ತು ಘಟೋದ್ಗಜ ಟೈಟಲ್‌

(Imandar first song release) ಇಮಾನ್ದಾರ್‌ ಸ್ಯಾಂಡಲ್‌ ವುಡ್‌ ನ ಇನ್ನೊಂದು ಹೊಸಬರ ಸಿನಿಮಾವಾಗಿದ್ದು, ಇದರ ಟೀಸರ್‌ ಈಗಾಗಲೇ ರಾಜ್ಯದೆಲ್ಲೆಡೆ ಸದ್ದು ಮಾಡುತ್ತಿದೆ. ಇದರ ಮಧ್ಯೆ ಇದೀಗ ಕೊಪ್ಪದಲ್ಲಿ ಈ ಸಿನಿಮಾದ ಮೊದಲ ಹಾಡು ರಿಲೀಸ್‌ ಆಗಿದ್ದು, ಸಂಗೀತ ಪ್ರೀಯರಿಗೆ ಸಖತ್‌ ಕಿಕ್‌ ಕೊಟ್ಟಿದೆ.

ಕೊಪ್ಪದಲ್ಲಿ ಇಮಾನ್ದಾರ್‌ ಸಿನಿಮಾದ ಮೊದಲ ಹಾಡು ಸಿಲ್ಕು ಮಿಲ್ಕು ಹಾಡನ್ನು ರಿಲೀಸ್‌ ಮಾಡಲಾಗಿದ್ದು, ಕೊಪ್ಪಳ ಜನತೆಯನ್ನು ಹುಚ್ಚೆಬ್ಬಿಸಿ ಕುಣಿಯುವಂತೆ ಮಾಡಿದೆ. ಈಗಾಗಲೇ ಟೀಸರ್‌ ಮೂಲಕ ರಾಜ್ಯದೆಲ್ಲೆಡೆ ಸದ್ದು ಮಾಡಿದ್ದ ಸಿನಿತಂಡ ಸಿನಿಮಾದ ಮೊದಲ ಹಾಡು ರಿಲೀಸ್‌ ಮಾಡುವ ಮೂಲಕ ಮತ್ತುಷ್ಟು ಭರವಸೆಯನ್ನು ಮೂಡಿಸುವ ನಿಟ್ಟಿನಲ್ಲಿ ಪ್ರೇಕ್ಷಕರನ್ನು ತನ್ನತ್ತ ಆಕರ್ಷಿಸುತ್ತಿದೆ. ವಿಶೇಷವೆಂದರೇ ನಟ ಪ್ರಮೋದ್‌ ಶೆಟ್ಟಿಗೆ ಈ ಚಿತ್ರತಂಡ ಸ್ಯಾಂಡಲ್‌ ವುಡ್‌ ಘಟೋದ್ಗಜ ಎಂಬ ಬಿರುದನ್ನು ನೀಡಿದೆ. ಇದೇ ಸಂದರ್ಭದಲ್ಲಿ ಚಿತ್ರದ ಡೈಲಾಗ್‌ ಕೇಳಿ ಜನರು ಸಿನಿಮಾದ ಬಗ್ಗೆ ಇನ್ನಷ್ಟು ಭರವಸೆಯನ್ನು ಹೊಂದಿದ್ದಾರೆ.

ಅಂದಹಾಗೆ ಈ ಸಿನಿಮಾ ಎರಡು ಬಣ್ಣಗಳ ನಡುವಿನ ಘರ್ಷಣೆಯ ಸುತ್ತ ಹೆಣೆದಿರುವ ಕಥೆಯಾಗಿರುವ ಕಾರಣ ಸಿನಿಪ್ರೀಯರಿಗೆ ಇನ್ನಷ್ಟು ಕುತೂಹಲ ಮೂಡಿಸಿದೆ. ಇಡೀ ಸಿನಿಮಾದ ಟೆಕ್ನಿಕಲ್‌ ಆಗಲಿ, ಕಥೆಯಾಗಲಿ ಎಲ್ಲವೂ ಕೂಡ ಅದ್ಭುತವಾಗಿ ಮೂಡಿ ಬಂದಿದ್ದು, ಇಮಾನ್ದಾರ್‌ ಸಿನಿಮಾವನ್ನು ಸಂದೇಶ್‌ ಶೆಟ್ಟಿ ಆಜ್ರಿ ನಿರ್ದೇಶನ ಮಾಡಿದ್ದಾರೆ. ಇನ್ನೂ ಸಿನಿಮಾದ ನಿರ್ಮಾಣವನ್ನು ನಿರಂಜನ್‌ ಶೆಟ್ಟಿ ತಲ್ಲೂರು ಮಾಡಿದ್ದು, ಎರಡು ಜನಾಂಗದ ಘರ್ಷಣೆಯನ್ನು ತೆರೆ ಮೇಲೆ ತರಲು ನಿರ್ದೇಶಕರು ಹೊಸ ಪ್ರಯತ್ನವನ್ನು ಮಾಡಿದ್ದಾರೆ. ಸಿನಿಮಾದ ನಾಯಕರಾಗಿ ರಂಜನ್‌ ಛತ್ರಪತಿ, ನಟಿ ಚಿರಶ್ರೀ ಅಂಚನ್‌ ಹಾಗೂ ಏಸ್ತಾರ್‌ ನೆರೋನಾ, ರಘು ಪಾಂಡೇಶ್ವರ್‌, ಕರಣ್‌ ಕುಂದರ್‌, ಯಶ್‌ ಆಚಾರ್ಯ, ಮಹಾಬಲೇಶ್ವರ ಕ್ಯಾದಗಿ, ರಕ್ಷಿತ್‌ ಶೆಟ್ಟಿ ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ : Tamanna : ಬಿಕಿನಿ ಬಿಟ್ಟು ಕಾವಿ ತೊಟ್ಟ ಮಿಲ್ಕಿಬ್ಯೂಟಿ : ಸನ್ಯಾಸ ಸ್ವೀಕರಿಸಿದ್ರಾ ತಮನ್ನಾ?

ಇದನ್ನೂ ಓದಿ : ಸ್ಯಾಂಡಲ್‌ವುಡ್‌ ನಟ ದರ್ಶನ್‌ ಅಭಿನಯದ ಮೆಜೆಸ್ಟಿಕ್‌ಗೆ 21 ವರ್ಷ ಸಂಭ್ರಮ

ಇದನ್ನೂ ಓದಿ : ನಿರ್ದೇಶಕ ಉಮಾಪತಿ ರಾಕಿಂಗ್‌ ಸ್ಟಾರ್‌ ಯಶ್‌ ಜೊತೆ ಸಿನಿಮಾ ಮಾಡ್ತಾರಾ ? ಯಾವಾಗ

Imandar first song release: Imandar Silku Milku Song Release: Pramod Shetty Siktu Ghatodgaja Title

Comments are closed.