LKG Student Fail : ಶಿಕ್ಷಣ ಸಂಸ್ಥೆಯ ಎಡವಟ್ಟು: ಯುಕೆಜಿ ಮಗುವನ್ನೇ ಫೇಲ್ ಮಾಡಿದ ಶಿಕ್ಷಕ

ಬೆಂಗಳೂರು: (LKG Student Fail) ಬೆಂಗಳೂರಿನಲ್ಲಿ‌ ಶಿಕ್ಷಣ ವ್ಯಾಪಾರಿಕರಣಗೊಂಡಿದೆ ಎಂಬ ಮಾತಿದೆ. ಆದರೆ ಈ ವ್ಯಾಪಾರದಲ್ಲಿ ಶಾಲೆಗಳು ಮಾನವೀಯತೆಯನ್ನು ಮರೆತಿವೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಯುಕೆಜಿ ಓದುವ ಮಗುವನ್ನು ಶಾಲೆ ಯೊಂದು ಪರೀಕ್ಷೆಯಲ್ಲಿ ಫೇಲ್ ಮಾಡಿದ್ದು, ಈ ಸಂಗತಿ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ರಿಂದ ಆರಂಭಿಸಿ ಹಲವರು ಶಿಕ್ಷಣ ಸಂಸ್ಥೆಗೆ ಛೀಮಾರಿ ಹಾಕಿದ್ದಾರೆ.

ಬೆಂಗಳೂರಿನ ಆನೇಕಲ್ ನಲ್ಲಿರೋ ಸೆಂಟ್ ಜೋಸೇಫ್ ಚಾಮಿನೇಡ್ ಅಕಾಡೆಮಿ ಎಂಬ ಹೆಸರಿನ ಶಿಕ್ಷಣ ಸಂಸ್ಥೆಯೇ ಹೀಗೆ ಯುಕೆಜಿ ಓದುವ ಮಗುವನ್ನು ಫೇಲ್ ಮಾಡುವ ಮೂಲಕ ಶಿಕ್ಷಣ ತಜ್ಞರು, ಪೋಷಕರು ಹಾಗೂ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಯುಕೆಜಿಯಲ್ಲಿ ಓದುತ್ತಿದ್ದ ಬಿ.ನಂದಿನಿ ಎಂಬ ಪುಟ್ಟ ಮಗುವನ್ನು ಶಿಕ್ಷಣ ಸಂಸ್ಥೆ ವಾರ್ಷಿಕ ಪರೀಕ್ಷೆಯಲ್ಲಿ ಫೇಲ್ ಮಾಡಿದೆ. ಮಗು ರೈಮ್ಸ್ ಹೇಳೋದರಲ್ಲಿ ನೀರಿಕ್ಷಿತ ಮಟ್ಟದಲ್ಲಿ ಸ್ಪಂದಿಸಿಲ್ಲ ಎಂಬ ಕಾರಣಕ್ಕೆ ಫೇಲ್ ಮಾಡಿರೋದಾಗಿ ಶಿಕ್ಷಣ ಸಂಸ್ಥೆ ತನ್ನ ಮಾರ್ಕ್ಸ್ ಕಾರ್ಡ್ ನಲ್ಲಿ ಹೇಳಕೊಂಡಿದೆ.

ಇದಕ್ಕೆ ಬಿ.ನಂದಿನಿ ಪೋಷಕರಾದ ಮನೋಜ್ ಬಾದಲ್ ಆಕ್ಷೇಪ ವ್ಯಕ್ತಪಡಿಸಿದ್ದು, ಶಾಲೆಯನ್ನು ಸಂಪರ್ಕಿಸಿದ್ದಾರೆ. ಆದರೆ ಶಾಲಾ ಆಡಳಿತ ಮಂಡಳಿ ಯಾವುದೇ ಸ್ಪಷ್ಟ ವಿವರಣೆ ನೀಡುವಲ್ಲಿ ವಿಫಲವಾಗಿದ್ದು, ಈ ಫೇಲ್ ಆದರೆ ಮುಂದೇ ಮಗುವಿನ ಶಿಕ್ಷಣದಲ್ಲಿ ಗುಣಮಟ್ಟ ತರಲು ಸಾಧ್ಯವಾಗುತ್ತದೆ ಎಂದು ತೇಪೆ ಸಾರಿಸುವ ಕೆಲಸ ಮಾಡಿದೆ ಎನ್ನಲಾಗಿದೆ. ಈ ಸಂಗತಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ಮಾಜಿ ಶಿಕ್ಷಣ ಸಚಿವ ಹಾಗೂ ಹಾಲಿ ಶಾಸಕ ಸುರೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಶಾಲೆಗೆ ಹೃದಯ ಮತ್ತು ಬುದ್ಧಿ ಎರಡೂ ಇಲ್ಲ ಎಂಬರ್ಥದಲ್ಲಿ ಸೋಷಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.

ಇದನ್ನೂ ಓದಿ : ಸಾಮೂಹಿಕ ರಜೆ ಹಾಕಿ ಪ್ರೊಟೆಸ್ಟ್ : ಬೇಡಿಕೆ ಈಡೇರಿಸಿಕೊಳ್ಳಲು ಬಿಬಿಎಂಪಿ ನೌಕರರ ಪ್ಲ್ಯಾನ್

ಇದನ್ನೂ ಓದಿ : CBI notice for DK daughter: ಚುನಾವಣೆ ಹೊತ್ತಲ್ಲಿ ಡಿಕೆ ಶಿವಕುಮಾರ್‌ ಗೆ ಮತ್ತೊಂದು ಶಾಕ್‌: ಡಿಕೆಶಿ ಪುತ್ರಿ ಐಶ್ವರ್ಯಾಗೆ ಸಿಬಿಐ ನೋಟೀಸ್‌

ಅಷ್ಟೇ ಅಲ್ಲ ಈ ಬಗ್ಗೆ ತಕ್ಷಣವೇ ಸಂಬಂಧಿಸಿದ ತಾಲೂಕಿನ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕ್ರಮಕೈಗೊಳ್ಳಲು ಸೂಚಿಸಿದ್ದೇನೆ ಎಂದಿದ್ದಾರೆ. ಯುಕೆಜಿ ಮಗುವನ್ನು ಫೇಲ್ ಮಾಡಿದ ಸಂಗತಿ ಈ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ತಮ್ಮ ಶಾಲೆಯ ಫಲಿತಾಂಶ ದೊಡ್ಡ ಮಟ್ಟದಲ್ಲಿ ವಿವಾದವಾಗುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಂಸ್ಥೆ ಪ್ರಿನ್ಸಿಪಾಲ್ ರು ಅದು ಸಿಸ್ಟಮ್ ಎಂಟ್ರಿಯಲ್ಲಿ ಉಂಟಾದ ಸಮಸ್ಯೆ. ಮಗು ಫೇಲ್ ಆಗಿಲ್ಲ ಎಂದು ಸಮಜಾಯಿಸಿ ನೀಡುವ ಪ್ರಯತ್ನ ಮಾಡಿದ್ದಾರೆ.

LKG Student Fail : Education institution’s dilemma: Teacher who failed UKG student

Comments are closed.