Border dispute: ಗಡಿ ವಿವಾದ ಸುಪ್ರೀಂ ಕೋರ್ಟ್‌ ನಲ್ಲಿ ನಾಳೆ ಅರ್ಜಿ ವಿಚಾರಣೆ

ಬೆಳಗಾವಿ: (Border dispute) ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‍ಗಳ ಮೇಲೆ ಕಲ್ಲು ತೂರಾಟ ಮಸಿ ಬಳಿದ ಪ್ರಕರಣ ಸೇರಿದಂತೆ ನಾಳೆ ಸುಪ್ರೀಂ ಕೋರ್ಟ್‍ನಲ್ಲಿ ಗಡಿ ವಿವಾದ ವಿಚಾರಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗದ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಹೈವೋಲ್ಟೆಜ್ ಮೀಟಿಂಗ್ ನಡೆಯುತ್ತಿದೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದ ಸರ್ಕ್ಯೂಟ್‌ ಹೌಸ್‌ ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‍ಕುಮಾರ್ ನೇತೃತ್ವದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಭಾಗದ (Border dispute) ಹಿರಿಯ ಪೊಲೀಸ್ ಅಧಿಕಾರಿಗಳ ಮಹತ್ವದ ಸಭೆ ಜರುಗುತ್ತಿದೆ. ಸಭೆಯಲ್ಲಿ ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್‍ಗಳ ಮೇಲೆ ಕಲ್ಲು ತೂರಾಟ ಮಸಿ ಬಳಿದ ಪ್ರಕರಣ ಸೇರಿದಂತೆ ನ.30ರಂದು ಸುಪ್ರೀಂ ಕೋರ್ಟ್‍ನಲ್ಲಿ ಗಡಿ ವಿವಾದದ ಅಂತಿಮ ವಿಚಾರಣೆ ಕುರಿತು ಅರ್ಜಿ ವಿಚಾರಣೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್‍ನಲ್ಲಿ ಅಂತಿಮ ಹಂತದ ವಿಚಾರಣೆಯಲ್ಲಿ ಏನೇ ಆದರೂ ಕಾನೂನು ಸುವ್ಯವಸ್ಥೆ ಹದಗೆಡದಂತೆ ಎಚ್ಚರಿಕೆ ವಹಿಸುವ ಬಗ್ಗೆ ಚರ್ಚೆ ಜೊತೆಗೆ ಎರಡು ರಾಜ್ಯದ ಗಡಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಭೆಯನ್ನು ನಡೆಸಲಾಗಿದೆ.

ಇದನ್ನೂ ಓದಿ : Karnataka-Maharashtra: ಕರ್ನಾಟಕ-ಮಹಾರಾಷ್ಟ್ರದ ಗಡಿಗಳಲ್ಲಿ ಮೊಳಗುತ್ತಿದೆ ಕನ್ನಡದ ಪ್ರೇಮ

ಇದನ್ನೂ ಓದಿ : Murder mystery: ಪ್ರೇಯಸಿ ಕರೆದಳೆಂದು ಆಕೆಯ ಮನೆಗೆ ಹೋದವ ಹೆಣವಾದ.. ಖತರ್ನಾಕ್ ಮರ್ಡರ್ ಸ್ಟೋರಿಯನ್ನು ಪೊಲೀಸರು ಭೇದಿಸಿದ್ದು ಹೇಗೆ ಗೊತ್ತಾ.

ಇದನ್ನೂ ಓದಿ : Bomb blast: ಭಾರತದಲ್ಲಿ ಷರಿಯಾ ಕಾನೂನು ಜಾರಿಗೆ ಮುಂದಾಗಿದ್ದ ಉಗ್ರ ಶಾರೀಖ್

ಸಭೆಯಲ್ಲಿ ಕೆಲವು ನಿರ್ಧಾರಗಳನ್ನು ಕೂಡ ಎರಡು ರಾಜ್ಯದ ಪೊಲೀಸರು ಕೈಗೊಳ್ಳಲಿದ್ದಾರೆ. ಸಭೆಯಲ್ಲಿ ಉತ್ತರ ವಲಯ ಐಜಿಪಿ, ಬೆಳಗಾವಿ ಎಸ್‍ಪಿ, ನಗರ ಪೊಲೀಸ್ ಆಯುಕ್ತ, ಇಬ್ಬರು ಡಿಸಿಪಿ, ಆರು ಜನ ಡಿಎಸ್‍ಪಿ ಭಾಗಿಯಾಗಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ ಐಜಿಪಿ, ಕೊಲ್ಲಾಪುರ, ಸಿಂಧದುರ್ಗ, ಸಾಂಗ್ಲಿಯ ಎಸ್‌ಪಿಗಳು ಮತ್ತು ಆರು ಜನ ಡಿಎಸ್‍ಪಿಗಳು ಕೂಡ ಭಾಗಿಯಾಗಿದ್ದಾರೆ.

(Border dispute) Border dispute hearing will be held in the Supreme Court tomorrow, including the case of stone pelting on Karnataka buses in Maharashtra.

Comments are closed.