ಸಲ್ಮಾನ್ ಖಾನ್ ತರ ಬಾಡಿ ಬಿಲ್ಡ್ ಮಾಡೋ ಆಸೆ ಇದ್ಯಾ? ಹಾಗಿದ್ದರೆ ಬೆಂಗಳೂರಿಗೆ ಬನ್ನಿ…!!

ಬೆಂಗಳೂರು: 80 ದಶಕದಿಂದ ಇಲ್ಲಿಯವರೆಗೆ ಶರ್ಟ್ ಬಿಚ್ಚಿ‌ನಿಂತು ಯುವ ಮನಸ್ಸುಗಳ ಸೆಳೆಯೋ ಹೀರೋ ಸಲ್ಮಾನ್ ಖಾನ್.  ಸಲ್ಮಾನ್ ಖಾನ್ ರಂತೆ ಸಿಕ್ಸ್ ಪ್ಯಾಕ್ ಬಾಡಿ ಶೇಪ್ ಮಾಡೋ ಆಸೆ ನಿಮಗಿದ್ಯಾ ಹಾಗಿದ್ದರೇ ಇನ್ಯಾಕೆ ತಡ ಬೆಂಗಳೂರಿಗೆ ಬನ್ನಿ.

ಅರೇ ಇದೇನು ಬೆಂಗಳೂರಲ್ಲಿ ಸಲ್ಮಾನ್ ಖಾನ್ ಬಾಡಿ ಬಿಲ್ಡಿಂಗ್ ಕ್ಲಾಸ್ ಮಾಡ್ತಿದ್ದಾರಾ ಅಂದ್ರಾ. ಹೌದು ಬೆಂಗಳೂರಿನಲ್ಲಿ ಸಲ್ಮಾನ್ ಖಾನ್ ಮಾಲಿಕತ್ವದ ಜಿಮ್ ಆರಂಭವಾಗ್ತಿದೆ.

ಈ ವಿಚಾರವನ್ನು ಖುದ್ದು ಸಲ್ಮಾನ್ ಖಾನ್ ತಮ್ಮ ಇನ್ ಸ್ಟಾ ಗ್ರಾಂ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ಸಲ್ಮಾನ್ ನಟನೆಯ ಜೊತೆಗೆ ಜಿಮ್ ಹಾಗೂ ಚ್ಯಾರಿಟಿ ಟ್ರಸ್ಟ್ ಗಳನ್ನು ಹಲವು ವರ್ಷಗಳಿಂದ‌ ನಡೆಸಿಕೊಂಡು ಬರ್ತಿದ್ದಾರೆ.  ಈಗ ಸಲ್ಮಾನ್ ಮಾಲಿಕತ್ವದ ಜಿಮ್ ಬೆಂಗಳೂರಿನ ಆರ್.ಆರ್.ನಗರದಲ್ಲಿ ಆರಂಭವಾಗ್ತಿದೆ.

ಎಸ್ ಕೆ 27 ಈಗ ಬೆಂಗಳೂರಿನಲ್ಲಿ ಎಂಬ ಪೋಸ್ಟ್ ನ್ನು ಸಲ್ಮಾನ್ ಖಾನ್ ಹಂಚಿಕೊಂಡಿದ್ದು, ವಿಳಾಸ ಹಾಗೂ ಕಾಂಟ್ಯಾಕ್ಟ್ ನಂಬರ್ ಕೂಡ ನೀಡಿದ್ದಾರೆ.

 ಲಾಕ್ ಡೌನ್ ನಿಂದ ಜನರು ಜಿಮ್,ವಾಕಿಂಗ್,ಸ್ವಿಮ್ಮಿಂಗ್ ನಂತ ದೈಹಿಕ ಕಸರತ್ತಿನ ಚಟುವಟಿಕೆ ಮಾಡದೇ ಅಡ್ಡಾ ದಿಡ್ಡಿಯಾಗಿ ಮೈ ಬೆಳೆಸಿಕೊಂಡಿದ್ದರೇ ಈಗ ಸಲ್ಮಾನ್ ಖಾನ್ ಮಾಲೀಕತ್ವದ ಜಿಮ್ ನಲ್ಲೇ ಬೆವರಿಳಿಸಿ ಜನ ಹುಬ್ಬೆರಿಸುವಂತ ಪರ್ಸನಾಲ್ಯಿಟಿ ಪಡೆಯಬಹುದು.

https://www.instagram.com/p/CGmEtRHllGu/

Comments are closed.