ಸೋಮವಾರ, ಏಪ್ರಿಲ್ 28, 2025
HomeCinemaJacqueline Fernandez ED: ವಿಕ್ರಾಂತ್ ರೋಣ ನಟಿ ಜಾಕ್ವಲಿನ್‌ ಫೆರ್ನಾಂಡಿಸ್‌ಗೆ ಸಂಕಷ್ಟ: ಇಡಿಯಿಂದ ಚಾರ್ಜಶೀಟ್ ಸಲ್ಲಿಕೆ

Jacqueline Fernandez ED: ವಿಕ್ರಾಂತ್ ರೋಣ ನಟಿ ಜಾಕ್ವಲಿನ್‌ ಫೆರ್ನಾಂಡಿಸ್‌ಗೆ ಸಂಕಷ್ಟ: ಇಡಿಯಿಂದ ಚಾರ್ಜಶೀಟ್ ಸಲ್ಲಿಕೆ

- Advertisement -

Jacqueline Fernandez ED : ವಿಕ್ರಾಂತ್ ರೋಣಾದಲ್ಲಿ ಗಡಂಗ್ ರಕ್ಕಮ್ಮನಾಗಿ ಮಿಂಚಿದ್ದ ಶ್ರೀಲಂಕಾ ಬೆಡಗಿ, ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡೀಸ್ ಗೆ ಪ್ರೀತಿಯೇ ಸಂಕಷ್ಟ ತಂದಿಟ್ಟಿದ್ದು, ಜಾಕ್ವಲಿನ್ ಪ್ರಿಯಕರ ಸುಕೇಶ್ ಚಂದ್ರಶೇಖರ್ ಮನಿಲ್ಯಾಂಡ್ರಿಂಗ್ ಕೇಸ್‌ನಲ್ಲಿ ಜಾಕ್ವಲಿನ್ ಫರ್ನಾಂಡಿಸ್ ವಿರುದ್ಧ ಕೂಡ ಚಾರ್ಜಶೀಟ್ ದಾಖಲಾಗಿದೆ. ಸುಕೇಶ್ ಚಂದ್ರಶೇಖರ ವಿರುದ್ಧದ 200 ಕೋಟಿ ರೂಪಾಯಿ ಮನಿ ಲ್ಯಾಂಡ್ರಿಂಗ್ ಪ್ರಕರಣದಲ್ಲಿ ಇಡಿ ದೆಹಲಿಯ ನ್ಯಾಯಾಲಯಕ್ಕೆ ಸಲ್ಲಿಸಿದ ಹೆಚ್ಚುವರಿ ಚಾರ್ಜಶೀಟ್ ನಲ್ಲಿ ಆರೋಪಿ ಸ್ಥಾನದಲ್ಲಿ ಜಾಕ್ವಲಿನ್ ಫರ್ನಾಂಡಿಸ್ ಹೆಸರನ್ನು ನಮೂದಿಸಿದೆ.

ಈ ಹಿಂದೆ ಮನಿ‌ಲ್ಯಾಂಡ್ರಿಂಗ್ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ನನ್ನು ವಶಕ್ಕೆ ಪಡೆದಿದ್ದ ಇಡಿ ಅಧಿಕಾರಿಗಳು 200 ಕೋಟಿ ರೂಪಾಯಿ ಅವ್ಯವಹಾರಕ್ಕೆ ಸಂಬಂಧಿಸಿದಂತೆಯೂ ಪ್ರಶ್ನೆ ಮಾಡಿದ್ದರು. ಬಳಿಕ ಸುಕೇಶ್ ನೀಡಿದ ಮಾಹಿತಿ ಆಧರಿಸಿ ಸುಕೇಶ್ ಚಂದ್ರಶೇಖರ್ ರಿಂದ ದುಬಾರಿ ಗಿಫ್ಟ್ ಗಳನ್ನು ಪಡೆದ ನಟಿ ಜಾಕ್ವಲಿನ್ ಫರ್ನಾಂಡಿಸ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಅಲ್ಲದೇ ಜಾಕ್ವಲಿನ್ ಗೆ ಸೇರಿದ ಅಂದಾಜು 7 ಕೋಟಿ ಮೌಲ್ಯದ ಆಸ್ತಿಗಳನ್ನು ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದರು.

ಸುಕೇಶ್ ವಿಚಾರಣೆ ವೇಳೆ ಜಾಕ್ವಲಿನ್ ನೀಡಿದ ಗಿಫ್ಟ್ ಗಳ ಬಗ್ಗೆ ಮಾಹಿತಿ ನೀಡಿದ್ದರು. 5.71 ಕೋಟಿ ಮೌಲ್ಯದ ಗಿಫ್ಟ್ ಹಾಗೂ 52 ಲಕ್ಷದ ಕುದುರೆ,9 ಲಕ್ಷ ಬೆಲೆ ಬಾಳುವ ಬೆಕ್ಕು ನೀಡಿದ್ದಾರೆ ಎಂಬುದು ತನಿಖೆ ವೇಳೆ ಬಯಲಾಗಿತ್ತು. ಅಲ್ಲದೇ ಸುಕೇಶ್ ಚಂದ್ರಶೇಖರ್ ಜಾಕ್ವಲಿನ್ ಕುಟುಂಬಸ್ಥರಿಗೂ ಹಣ ನೀಡಿದ್ದಾರೆ ಎಂದು ಇಡಿ ಅಧಿಕಾರಿಗಳು ಆರೋಪಿಸಿ ದಾಖಲೆ ಸಲ್ಲಿಸಿದ್ದರು.

ಶ್ರೀಲಂಕಾ ಮೂಲದ ಜಾಕ್ವಲಿನ್ ಫರ್ನಾಂಡಿಸ್ ನಟಿ ಹಾಗೂ ಐಟಂ ಸಾಂಗ್ ಡ್ಯಾನ್ಸರ್ ಆಗಿ ಗುರುತಿಸಿಕೊಂಡಿದ್ದು, 2009 ರಲ್ಲಿ ಬಾಲಿವುಡ್ ಗೆ ಎಂಟ್ರಿ‌ಕೊಟ್ಟಿದ್ದರು. ಕನ್ನಡದ ಬಹುನೀರಿಕ್ಷಿತ ವಿಕ್ರಾಂತ್ ರೋಣ ಮೂಲಕ ಸ್ಯಾ‌ಂಡಲ್ ವುಡ್ ಗೆ ಬಂದ ಜಾಕ್ವಲಿನ್ ಗಡಂಗ್ ರಕ್ಕಮ್ಮನಾಗಿ ಮಿಂಚಿ ಕನ್ನಡಿಗರ ಮನ ಗೆದ್ದಿದ್ದಾರೆ. ಒಂದು ಹಾಡಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಹಣ ಪಡೆದ ಜಾಕ್ವಲಿನ್ ಸಖತ್ ಸದ್ದು ಮಾಡಿದ್ದರು. ಸುಕೇಶ್ ಚಂದ್ರಶೇಖರ್ ಮನಿ ಲ್ಯಾಂಡ್ರಿಂಗ್ ಪ್ರಕರಣದಲ್ಲಿ ಇದುವರೆಗೂ ೭ ಜನರನ್ನು ಬಂಧಿಸಲಾಗಿದ್ದು, ಸುಕೇಶ್ ಚಂದ್ರಶೇಖರ್ ಪತ್ನಿ ಲೀನಾ ಮಾರಿಯಾ ಪೌಲ್ ಕೂಡ ಇಡಿ ಬಲೆಗೆ ಬಿದ್ದಿದ್ದಾರೆ.

ಇದನ್ನೂ ಓದಿ : Bigg Boss Ott Kannada Season 1 : ಸೋನುಗೌಡಗೆ ಕ್ಲಾಸ್​ ತೆಗೆದುಕೊಂಡ ಕಿಚ್ಚ ಸುದೀಪ

ಇದನ್ನೂ ಓದಿ : Bigg boss Kannada OTT : ರಾಕೇಶ್​ ಅಡಿಗನಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ ಸ್ಫೂರ್ತಿ ಗೌಡ

Jacqueline Fernandez named as accused by ED Laundered Money, Says Enforcement Directorate

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular