Yuvraj Singh comeback : ಮತ್ತೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಶ್ವಕಪ್ ಹೀರೋ, ಕಂಬ್ಯಾಕ್ ಸುಳಿವು ಕೊಟ್ಟ ಯುವರಾಜ್ ಸಿಂಗ್

ಮುಂಬೈ: (Yuvraj Singh comeback ) ಯುವರಾಜ್ ಸಿಂಗ್ ಭಾರತದ ವಿಶ್ವಕಪ್. ದೇಶಕ್ಕೆ ಮೂರು ವಿಶ್ವಕಪ್’ಗಳನ್ನು ಗೆದ್ದು ಕೊಟ್ಟಿದ್ದ ಮ್ಯಾಚ್ ವಿನ್ನರ್. 40 ವರ್ಷದ ಯುವರಾಜ್ ಸಿಂಗ್ 2017ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ನಿಂದ ನಿವೃತ್ತಿಯಾಗಿದ್ದರು. ಯುವರಾಜ್ ಸಿಂಗ್ (Yuvraj Singh) ಅವರ ಆಟ ಅಂದ್ರೆ ಅದು ಕ್ರಿಕೆಟ್ ಪ್ರಿಯರ ಪಾಲಿಗೆ ಹಬ್ಬ. ಯುವಿ ಬಾರಿಸುತ್ತಿದ್ದ ಆ ಸಿಕ್ಸರ್’ಗಳು, ಆ ಅಬ್ಬರದ ಬ್ಯಾಟಿಂಗ್.. ಅಂತಹ ಆಟವನ್ನು ಮತ್ತೊಮ್ಮೆ ಕಣ್ತುಂಬಿಕೊಳ್ಳುವ ಅವಕಾಶ ಯುವಿ ಅಭಿಮಾನಿ ಗಳಿಗೆ ಒದಗಿ ಬಂದಿದೆ. ಕ್ರಿಕೆಟ್ ಮೈದಾನಕ್ಕೆ ಮರಳುತ್ತಿರುವ ಬಗ್ಗೆ ಸ್ವತಃ ಯುವರಾಜ್ ಸಿಂಗ್ ಅವರೇ ಗುಟ್ಟು ಬಿಟ್ಟುಕೊಟ್ದಿದ್ದಾರೆ.

ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ರೋಡ್ ಸೇಫ್ಟಿ ಸೀರೀಸ್ ಟೂರ್ನಿಯಲ್ಲಿ (Road Safety Series) ಯುವರಾಜ್ ಸಿಂಗ್ ಇಂಡಿಯಾ ಲೆಜೆಂಡ್ಸ್ ತಂಡದ ಪರ ಆಡಲಿದ್ದು, ಯುವಿ ಈಗಾಗ್ಲೇ ಅಭ್ಯಾಸ ಆರಂಭಿಸಿದ್ದಾರೆ.. ಟೂರ್ನಿಯಲ್ಲಿ ಇಂಡಿಯಾ ಲೆಜೆಂಡ್ಸ್, ಆಸ್ಟ್ರೇಲಿಯಾ ಲೆಜೆಂಡ್ಸ್, ಶ್ರೀಲಂಕಾ ಲೆಜೆಂಡ್ಸ್, ವೆಸ್ಟ್ ಇಂಡೀಸ್ ಲೆಜೆಂಡ್ಸ್, ದಕ್ಷಿಣ ಆಫ್ರಿಕಾ ಲೆಜೆಂಡ್ಸ್, ಬಾಂಗ್ಲಾದೇಶ ಲೆಜೆಂಡ್ಸ್, ಇಂಗ್ಲೆಂಡ್ ಲೆಜೆಂಡ್ಸ್ ಮತ್ತು ನ್ಯೂಜಿಲೆಂಜ್ ಲೆಜೆಂಡ್ಸ್ ಸಹಿತ ಒಟ್ಟು ಎಂಟು ತಂಡಗಳು ಆಡಲಿವೆ. ಟೂರ್ನಿಯ ಪಂದ್ಯಗಳು ಲಕ್ನೋ, ಜೋಧ್’ಪುರ್, ಕಟಕ್ ಮತ್ತು ಹೈದರಾಬಾದ್’ನಲ್ಲಿ ನಡೆಯಲಿವೆ. ಮೊದಲ ಏಳು ಪಂದ್ಯಗಳಿಗೆ ಲಕ್ನೋ ಆತಿಥ್ಯ ವಹಿಸಲಿದೆ. ಜೋಧ್’ಪುರದಲ್ಲಿ ಐದು ಪಂದ್ಯಗಳು, ಕಟಕ್’ನಲ್ಲಿ ಆರು ಪಂದ್ಯಗಳು ಹಾಗೂ ಹೈದರಾಬಾದ್’ನಲ್ಲಿ ಫೈನಲ್ ಸೇರಿದಂತೆ ಅಂತಿಮ ಹಂತದ ಪಂದ್ಯಗಳು ನಡೆಯಲಿವೆ.

ರೋಡ್ ಸೇಫ್ಟಿ ಸೀರೀಸ್ ವೇಳಾಪಟ್ಟಿ:
ಸೆಪ್ಟೆಂಬರ್ 10-15: ಲಕ್ನೋ (7 ಪಂದ್ಯಗಳು)
ಸೆಪ್ಟೆಂಬರ್ 16-19: ಜೋಧ್’ಪುರ್ (5 ಪಂದ್ಯಗಳು)
ಸೆಪ್ಟೆಂಬರ್ 21-25: ಕಟಕ್ (6 ಪಂದ್ಯಗಳು)
ಸೆಪ್ಟೆಂಬರ್ 27-ಅಕ್ಟೋಬರ್ 02: ಹೈದರಾಬಾದ್ (ಅಂತಿಮ ಹಂತದ ಲೀಗ್ ಹಾಗೂ ನಾಕೌಟ್ ಪಂದ್ಯಗಳು)

2020ರಲ್ಲಿ ನಡೆದ ಮೊದಲ ಆವೃತ್ತಿಯ ರೋಡ್ ಸೇಫ್ಟಿ ಸೀರೀಸ್’ನಲ್ಲಿ ಇಂಡಿಯಾ ಲೆಜೆಂಡ್ಸ್ ತಂಡ ಚಾಂಪಿಯನ್ ಆಗಿತ್ತು. ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಲೆಜೆಂಡ್ಸ್ ತಂಡವನ್ನು 14 ರನ್’ಗಳಿಂದ ಸೋಲಿಸಿದ್ದ ಇಂಡಿಯಾ ಲೆಜೆಂಡ್ಸ್ ಪ್ರಶಸ್ತಿ ಗೆದ್ದಿತ್ತು. ಕೋವಿಡ್ ಕಾರಣದಿಂದಾಗಿ ಕಳೆದ ವರ್ಷ ಟೂರ್ನಿ ನಡೆದಿರಲಿಲ್ಲ.

ಇದನ್ನೂ ಓದಿ : Rohit Sharma video viral: ಹೋಟೆಲ್‌ಗೆ ಹೋದ ರೋಹಿತ್ ಶರ್ಮಾಗೆ ಶಾಕ್, ಫ್ಯಾನ್ಸ್ ಕಾಟಕ್ಕೆ ಹಿಟ್‌ಮ್ಯಾನ್ ಮಾಡಿದ್ದೇನು ಗೊತ್ತಾ?

ಇದನ್ನೂ ಓದಿ : India Tour of Zimbabwe : ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಇಲ್ಲಿದೆ ಟೀಮ್ ಇಂಡಿಯಾದ ಪ್ಲೇಯಿಂಗ್ XI

Yuvraj Singh comeback , World Cup hero, who hinted at a comeback, will appear on the cricket field again

Comments are closed.