KL Rahul : ಕನ್ನಡಿಗ ಕೆ.ಎಲ್ ರಾಹುಲ್‌ಗೆ ಜಿಂಬಾಬ್ವೆ ಯಾಕೆ ಸ್ಪೆಷಲ್ ಗೊತ್ತಾ ?

ಹರಾರೆ: ( KL Rahul) ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕತ್ವ ವಹಿಸಿರುವ ಕನ್ನಡಿಗ ಕೆ.ಎಲ್ ರಾಹುಲ್ ಪಾಲಿಗೆ ಜಿಂಬಾಬ್ವೆ ತುಂಬಾನೇ ವಿಶೇಷ. ರಾಹುಲ್ ಈಗ ಟೀಮ್ ಇಂಡಿಯಾದ ಬಿಗ್ ಸ್ಟಾರ್ ಆಗಿ ಬೆಳೆದು ನಿಂತಿದ್ದಾರೆ. 2014ರಲ್ಲಿ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಣೆ ಮಾಡಿದ್ದ ರಾಹುಲ್ ಈಗ ಟೀಮ್ ಇಂಡಿಯಾ ನಾಯಕನೂ ಹೌದು. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುವ ಅವಕಾಶ ರಾಹುಲ್ ಅವರಿಗೆ ಒದಗಿ ಬಂದಿದೆ.

ಕೆ.ಎಲ್ ರಾಹುಲ್ ಅವರಿಗೆ ಜಿಂಬಾಬ್ವೆ ಯಾಕೆ ತುಂಬಾ ಸ್ಪೆಷಲ್ ಎಂಬ ಪ್ರಶ್ನೆಗೆ ಉತ್ತರ 6 ವರ್ಷಗಳ ಹಿಂದೆ ರಾಹುಲ್’ಗೆ ಸಿಕ್ಕಿದ್ದ ಅದೊಂದು ಯಶಸ್ಸು. 2016ರ ಜಿಂಬಾಬ್ವೆ ಪ್ರವಾಸದಲ್ಲೇ ರಾಹುಲ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದಿದ್ದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಆರಂಭಿಕನಾಗಿ ಆಡಿದ್ದ ರಾಹುಲ್, ಚೊಚ್ಚಲ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿದ್ದರು.

ಭಾರತ ಪರ ಏಕದಿನ ಕ್ರಿಕೆಟ್’ನ ಪದಾರ್ಪಣೆಯ ಪಂದ್ಯದಲ್ಲೇ ಶತಕ ಬಾರಿಸಿರುವ ಮೊದಲ ಮತ್ತು ಏಕೈಕ ಆಟಗಾರ ಕೆ.ಎಲ್ ರಾಹುಲ್. ತಮ್ಮ ಪದಾರ್ಪಣೆಯ ಇನ್ನಿಂಗ್ಸ್’ನಲ್ಲಿ 115 ಎಸೆತಗಳನ್ನು ಎದುರಿಸಿದ್ದ ರಾಹುಲ್ 7 ಬೌಂಡರಿ ಮತ್ತು 1 ಸಿಕ್ಸರ್ ಸಹಿತ ಭರ್ತಿ 100 ರನ್ ಗಳಿಸಿದ್ದರು. ರಾಹುಲ್ ಆ ಶತಕ ಬಾರಿಸಿದ್ದು ತುಂಬಾನೇ ಇಂಟ್ರೆಸ್ಟಿಂಗ್. ಗೆಲ್ಲಲು 169 ರನ್’ಗಳ ಗುರಿ ಬೆನ್ನಟ್ಟಿದ್ದ ಭಾರತ 1 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿದ್ದಾಗ ರಾಹುಲ್ ಅಜೇಯ 92 ರನ್’ಗಳೊಂದಿಗೆ ಆಡ್ತಾ ಇದ್ರು,. ಭಾರತದ ಗೆಲುವಿಗೆ ಬೇಕಿದ್ದದ್ದು 4 ರನ್, ರಾಹುಲ್ ಶತಕ ಪೂರ್ತಿಗೊಳ್ಳಲು ಬೇಕಿದ್ದದ್ದು 8 ರನ್. ಆದ್ರೂ ರಾಹುಲ್ ಶತಕ ಬಾರಿಸ್ತಾರೆ. ಹೇಗೆ ಗೊತ್ತಾ?

43ನೇ ಓವರ್’ನ ಮೊದಲ ಎಸೆತದಲ್ಲಿ ಯಾವುದೇ ರನ್ ಇಲ್ಲ. 2ನೇ ಎಸೆತದಲ್ಲಿ ರಾಹುಲ್ 2 ರನ್ ಗಳಿಸ್ತಾರೆ. ಅಲ್ಲಿಗೆ ಭಾರತದ ಜಯಕ್ಕೆ 2 ರನ್’ಗಳ ಅವಶ್ಯಕತೆ. ರಾಹುಲ್ ಸೆಂಚುರಿಗೆ 6 ರನ್’ಗಳ ಅವಶ್ಯಕತೆ. ಮುಂದಿನ ಎಸೆತದಲ್ಲಿ ಸಿಕ್ಸರ್ ಬಾರಿಸಿದ ರಾಹುಲ್ ಅತ್ಯಂತ ರೋಚಕವಾಗಿ ತಮ್ಮ ಪದಾರ್ಪಣೆಯ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿದ್ರು. 6 ವರ್ಷಗಳ ಹಿಂದೆ ಪದಾರ್ಪಣೆಯ ಏಕದಿನ ಪಂದ್ಯದಲ್ಲೇ ಶತಕ ಗಳಿಸಿದ ಮೈದಾನದಲ್ಲಿ ರಾಹುಲ್ ಭಾರತ ತಂಡವನ್ನುಮುನ್ನಡೆಸಲು ಸಜ್ಜಾಗಿದ್ದಾರೆ.

ಜಿಂಬಾಬ್ವೆ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ (India Vs Zimbabwe ODI Series) ಮೊದಲ ಪಂದ್ಯ ಆಗಸ್ಟ್ 18ರಂದು ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ. ಸರಣಿಯ ಉಳಿರೆಡು ಪಂದ್ಯಗಳು ಕ್ರಮವಾಗಿ ಆಗಸ್ಟ್ 20 ಮತ್ತು 22ರಂದು ಅದೇ ಮೈದಾನದಲ್ಲಿ ನಡೆಯಲಿವೆ.

ಇದನ್ನೂ ಓದಿ : India Tour of Zimbabwe : ಜಿಂಬಾಬ್ವೆ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೆ ಇಲ್ಲಿದೆ ಟೀಮ್ ಇಂಡಿಯಾದ ಪ್ಲೇಯಿಂಗ್ XI

ಇದನ್ನೂ ಓದಿ : Yuvraj Singh comeback : ಮತ್ತೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ವಿಶ್ವಕಪ್ ಹೀರೋ, ಕಂಬ್ಯಾಕ್ ಸುಳಿವು ಕೊಟ್ಟ ಯುವರಾಜ್ ಸಿಂಗ್

India Vs Zimbabwe ODI Series Kannadiga KL Rahul knows why Zimbabwe is special ?

Comments are closed.