Kidnap and Rape: ಕ್ರೀಡಾಕೂಟದ ವೇಳೆ ವಿದ್ಯಾರ್ಥಿ ಅಪಹರಿಸಿ ಸಾಮೂಹಿಕ ಅತ್ಯಾಚಾರ : 3 ಯುವಕರ ವಿರುದ್ದ ಪ್ರಕರಣದ ದಾಖಲು

ಗುರುಗ್ರಾಮ್: (Kidnap and Rape) ಕ್ರೀಡಾಕೂಟದ ವೇಳೆ ಶಾಲೆಯಿಂದ 14 ವರ್ಷದ ಬಾಲಕಿಯನ್ನು ಅಪಹರಿಸಿ ಮೂವರು ಯುವಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಗುರುಗ್ರಾಮ್‌ನ ಸೋಹ್ನಾ ಪ್ರದೇಶದ ಶಾಲೆಯೊಂದರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಲ್ಲದೇ ಘಟನೆಯನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

ಸಂತ್ರಸ್ತೆಯ ತಂದೆ ನೀಡಿದ ದೂರಿನ ಪ್ರಕಾರ, ಕಳೆದ ವರ್ಷ ಡಿಸೆಂಬರ್ 18 ರಂದು ಕ್ರೀಡಾ ಕಾರ್ಯಕ್ರಮದ ವೇಳೆ 8 ನೇ ತರಗತಿಯ ತನ್ನ ಮಗಳನ್ನು ಶಾಲೆಯಿಂದ ಮೂವರು ಯುವಕರು ಅಪಹರಿಸಿ ಗುಡ್ಡಗಾಡು ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದರು. ನಂತರ ಮೂವರು ಆರೋಪಿಗಳು ಬಾಲಕಿಯ ಆಕ್ಷೇಪಾರ್ಹ ವಿಡಿಯೋ ಮಾಡಿ ವಾಟ್ಸಾಪ್ ಗ್ರೂಪ್‌ಗಳು ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಹರಿಬಿಟ್ಟಿದ್ದಾರೆ. ಬೆದರಿಕೆಗೆ ಹೆದರಿದ ಸಂತ್ರಸ್ತ ಬಾಲಕಿ ಈ ಘಟನೆಯನ್ನು ಇಲ್ಲಿಯವರೆಗೆ ಯಾರಿಗೂ ಬಹಿರಂಗಪಡಿಸಿಲ್ಲ ಎಂದು ಸಂತ್ರಸ್ತೆಯ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.

ಆದರೆ ಶನಿವಾರ ವೀಡಿಯೊ ಬಗ್ಗೆ ತಿಳಿದುಕೊಂಡ ಸಂತ್ರಸ್ತ ಬಾಲಕಿಯ ತಂದೆ ಮಗಳನ್ನು ವಿಚಾರಿಸಿ ಕೇಳಿದಾಗ ಬಾಲಕಿ ಘಟನೆಯ ಬಗ್ಗೆ ತಿಳಿಸಿದ್ದಾಳೆ. ವಿಷಯ ತಿಳಿದ ಕೂಡಲೇ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಾಹಿತಿಗಳ ಪ್ರಕಾರ, ಇಬ್ಬರು ಆರೋಪಿಗಳು 11 ಮತ್ತು 12 ನೇ ತರಗತಿಯಲ್ಲಿ ಓದುತ್ತಿರುವ ಮತ್ತೊಂದು ಶಾಲೆಯ ವಿದ್ಯಾರ್ಥಿಗಳಾಗಿದ್ದು, ಮೂರನೆಯವರು ಶಾಲೆಯನ್ನು ತೊರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಬಂಧಿಸಲು ಪೊಲೀಸರು ದಾಳಿ ನಡೆಸುತ್ತಿದ್ದು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆರೋಪಿಗಳನ್ನು ಗುರುತಿಸಲಾಗಿದ್ದು, ಮೂವರು ತಲೆಮರೆಸಿಕೊಂಡಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ದಕ್ಷಿಣ ವಿಭಾಗದ ಡಿಸಿಪಿ ಉಪಾಸನಾ ಸಿಂಗ್ ತಿಳಿಸಿದ್ದಾರೆ.

ಇದನ್ನೂ ಓದಿ : Uttar Pradesh Fire accident: ಉತ್ತರ ಪ್ರದೇಶದಲ್ಲಿ ಅಗ್ನಿ ಅವಘಡ: 5 ಸಾವು

ಬಾಲಕಿಯ ತಂದೆಯ ದೂರಿನ ಮೇರೆಗೆ ಪೊಲೀಸರು ಮೂವರು ಶಂಕಿತರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 363 (ಅಪಹರಣ) ಮತ್ತು 376-ಡಿ ಎ (ಹದಿನಾರು ವರ್ಷದೊಳಗಿನ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ) ಮತ್ತು ಮಕ್ಕಳ ರಕ್ಷಣೆಯ ಸೆಕ್ಷನ್ 13/6, ಲೈಂಗಿಕ ಅಪರಾಧಗಳ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Kidnap and Rape: Student abducted and gang-raped during sports event: Case registered against 3 youths

Comments are closed.