ಭಾನುವಾರ, ಏಪ್ರಿಲ್ 27, 2025
HomeCinemaJames Film : ಜೇಮ್ಸ್ ಗೆ ಅದ್ದೂರಿ ಸ್ವಾಗತ : ದೇಶದ ಹಲವೆಡೆ ಗ್ರ್ಯಾಂಡ್ ಫ್ರೀ...

James Film : ಜೇಮ್ಸ್ ಗೆ ಅದ್ದೂರಿ ಸ್ವಾಗತ : ದೇಶದ ಹಲವೆಡೆ ಗ್ರ್ಯಾಂಡ್ ಫ್ರೀ ರಿಲೀಸ್ ಇವೆಂಟ್ ಆಯೋಜಿಸಿದ ಚಿತ್ರತಂಡ

- Advertisement -

ನಟಸಾರ್ವಭೌಮ ಡಾ.ರಾಜ್ ಕುಮಾರ್ ಪ್ರೀತಿಯ ಪುತ್ರ ಪುನೀತ್ ರಾಜದ ಕುಮಾರ್ ಇನ್ನಿಲ್ಲವಾಗಿ ಮೂರು ತಿಂಗಳು ಕಳೆದಿದೆ. ಹಲವು ಬಿಗ್ ಬಜೆಟ್ ಕೈಯಲ್ಲಿದ್ದಾಗಲೇ ಚಿರನಿದ್ರೆಗೆ ಜಾರಿದ ಪುನೀತ್ ನಟನೆಯ ಕೊನೆ ಚಿತ್ರ ಜೇಮ್ಸ್. ಇದೇ ಬರುವ ಮಾರ್ಚ್ 17 ರಂದು ಪುನೀತ್ (Puneet Raj Kumar) ಕೊನೆಯ ಸಿನಿಮಾ ಜೇಮ್ಸ್ (James Film) ತೆರೆಗೆ ಬರಲಿದ್ದು, ಈ ಸಿನಿಮಾವನ್ನು ಅದ್ಭುತವಾಗಿ ವೆಲ್ ಕಂ‌ಮಾಡಲು ಅಭಿಮಾನಿಗಳು ಹಾಗೂ ಚಿತ್ರತಂಡ ನಿರ್ಧರಿಸಿದೆ. ಅಲ್ಲದೇ ದೇಶದ ಹಲವೆಡೆ ಸಿನಿಮಾ‌ ರಿಲೀಸ್ ಫ್ರಿಇವೆಂಟ್ ಆಚರಿಸಲು ಪ್ಲ್ಯಾನ್ ಸಿದ್ಧಮಾಡಿದೆ.

ಜೇಮ್ಸ್ ಪುನೀತ್ ನಟನೆಯ ಕೊನೆಯ ಸಿನಿಮಾ ಆಗಿರೋದರಿಂದ ಈ ಸಿನಿಮಾವನ್ನು ಅಭಿಮಾನಿಗಳೆಲ್ಲರಿಗೂ ತಲುಪಿಸುವ ಉದ್ದೇಶದಿಂದ ಚಿತ್ರತಂಡ ಕರ್ನಾಟಕದ ಮೂರು ಪ್ರಮುಖ ನಗರಗಳಲ್ಲಿ ಜೇಮ್ಸ್ ಸಿನಿಮಾದ ಅದ್ದೂರಿ ಫ್ರೀ ರಿಲೀಸ್ ಇವೆಂಟ್ಸ್ ಮಾಡಲಿದೆ. ಬಳ್ಳಾರಿಯ ಹೊಸಪೇಟೆ,ಚಾಮರಾಜನಗರ ಜಿಲ್ಲೆ ಹಾಗೂ ಬೆಂಗಳೂರಿನಲ್ಲಿ ಫ್ರೀ ರಿಲೀಸ್ ಇವೆಂಟ್ ಗೆ ಸಿದ್ಧತೆ ನಡೆದಿದೆ.ಈ ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ್ ಕುಟುಂಬದ ಸದಸ್ಯರು ಹಾಗೂ ಸ್ಯಾಂಡಲ್ ವುಡ್ ನಟ-ನಟಿಯರು ಪಾಲ್ಗೊಳ್ಳಲಿದ್ದಾರೆ.

ಇದಲ್ಲದೇ ಹೈದರಾಬಾದ್,ಚೈನೈ ಹಾಗೂ ಮುಂಬೈ ನಗರದಲ್ಲೂ ಸಿನಿಮಾದ ಫ್ರೀ ರಿಲೀಸ್ ಇವೆಂಟ್ ನಡೆಯಲಿದೆ. ಆಯಾ ನಗರದಲ್ಲಿ ಆಯಾ ಭಾಷೆಯ ನಟನಟಿಯರನ್ನು ಆಹ್ವಾನಿಸಲು ಚಿತ್ರತಂಡ ನಿರ್ಧರಿಸಿದೆ. ಈ ಸಿನಿಮಾ‌ ಕನ್ನಡದ ಜೊತೆ ತೆಲುಗು,ತಮಿಳು,ಹಿಂದಿ,ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಇನ್ನೂ ಸಿನಿಮಾ‌ ಬಿಡುಗಡೆ ದಿನದಿಂದ ಆರಂಭಿಸಿ ನಾಲ್ಕು ದಿನಗಳ ಕಾಲ ಬೆಂಗಳೂರಿನ ವಿರೇಶ್ ಚಿತ್ರಮಂದಿರ ಹಾಗೂ ಹಲವೆಡೆ ಅನ್ನದಾನ, ರಕ್ತದಾನ‌ಶಿಬಿರ, ಚಿಕನ್ ಬಿರಿಯಾನಿ, ನೇತ್ರದಾನ ರಜಿಸ್ಟರ್ ಕಾರ್ಯಕ್ರಮ‌ನಡೆಯಲಿದೆ.

ಅಲ್ಲದೇ ವಿರೇಶ್ ಚಿತ್ರಮಂದಿರದ ಬಳಿ ಪುನೀತ್ ಅಭಿನಯದ 31 ಚಿತ್ರಗಳ ವಿಶೇಷ ಪಾತ್ರಗಳ ಕಟೌಟ್ ನಿಲ್ಲಿಸಿ ಬಳಿಕ ಹೆಲಿಕ್ಯಾಪ್ಟರ್ ನಿಂದ ಹಾಲಿನ ಅಭಿಷೇಕ ಮಾಡಿಸಲು ಅಭಿಮಾಮಿಗಳು ಪ್ಲ್ಯಾನ್ ಮಾಡಿದ್ದಾರೆ. ಇದರ ಜೊತೆಗೆ ಕಮಲಾನಗರದ ವೀರಭದ್ರೇಶ್ವರ ಚಿತ್ರಮಂದಿರದ ಬಳಿ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ಪುನೀತ್ ಬೃಹತ್ ಕಟೌಟ್ ಹಾಕಲಾಗುತ್ತದೆ. ಅಲ್ಲದೇ ಪೂಜಾ ಕುಣಿತ, ಡೊಳ್ಳು ಕುಣಿತ, ವೀರಗಾಸೆ, ಕೇರಳದ ಪ್ರಸಿದ್ಧ ವಾದ್ಯದವರಿಂದ ವಾದ್ಯಗೋಷ್ಠಿ ಮತ್ತು ಬೆಂಗಳೂರು ತಮಟೆ,ಬೆಳ್ಳಿಪರದೆ ಮುಂದೇ ಪುನೀತ್ ಗೆ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಒಟ್ಟಿನಲ್ಲಿ ಪುನೀತ್ ಅನುಪಸ್ಥಿತಿ ಯಲ್ಲೂ ಅಪ್ಪು ಹುಟ್ಟುಹಬ್ಬ ಅದ್ದೂರಿಯಾಗಿ ಆಚರಿಸಿ ಜೇಮ್ಸ್ ಸಿನಿಮಾಗೆ ಗ್ರ್ಯಾಂಡ್ ವೆಲ್ ಕಮ್ ಮಾಡೋಕೆ ಅಭಿಮಾನಿಗಳು ಹಾಗೂ ಚಿತ್ರತಂಡ ಮಾಸ್ಟರ್ ಪ್ಲ್ಯಾನ್ ಮಾಡಿದೆ.

ಇದನ್ನೂ ಓದಿ : ವಿಜಯ್ ದೇವರಗೊಂಡ – ರಶ್ಮಿಕಾ ಮಂದಣ್ಣ ಪರಿಣಯ: ವರ್ಷಾಂತ್ಯದಲ್ಲಿ ಒಂದಾಗುತ್ತಾ ಟಾಲಿವುಡ್ ಜೋಡಿ

ಇದನ್ನೂ ಓದಿ : ಸೆಟ್ ನಲ್ಲಿ ಮೇಘನಾ ರಾಜ್‌ ಸರ್ಜಾ ನೋಡಿ ಭಾವುಕರಾದ ನಿರ್ದೇಶಕ : ಶಬ್ದ ಸಿನಿಮಾದಲ್ಲಿ ಅಂತಹದ್ದೇನಾಯ್ತು ಗೊತ್ತಾ !

(James Film Grand Free Release starring Puneet Raj Kumar hosting a nation wide event)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular