ಅಳಿವುದು ಕಾಯ ಉಳಿವುದು ಕೀರ್ತಿ ಎಂಬಂತೆ ಸ್ಯಾಂಡಲ್ ವುಡ್ ನಟ ಚಿರು ಸರ್ಜಾ (Chiranjeevi Sarja) ನಿಧನರಾಗಿದ್ದರೂ ಅವರ ನಟನೆಯ ರಾಜಾ ಮಾರ್ತಾಂಡ (Raja Marthanda Movie) ಸಿನಿಮಾ ಅಕ್ಟೋಬರ್ 6 ರಂದು ಅದ್ದೂರಿಯಾಗಿ ತೆರೆಕಂಡಿದೆ. ಈ ಮಧ್ಯೆ ಚಿತ್ರಮಂದಿರದ ಬಳಿ ಚಿರು ಜೊತೆ ನಿಂತ ರಾಯನ್ ರಾಜ್ ಸರ್ಜಾ (Rayan Raj Sarja) ಕಟೌಟ್ ರಾರಾಜಿಸಿದ್ದು, ರಾಯನ್ ರಾಜ್ ಸರ್ಜಾ ಸಿನಿಮಾಗೆ ಎಂಟ್ರಿಕೊಡ್ತಿದ್ದಾರಾ ಅನ್ನೋ ಪ್ರಶ್ನೆ ಹುಟ್ಟುಹಾಕಿತ್ತು. ಈ ಕುರಿತು ತಾಯಿ ನಟಿ ಮೇಘನಾ ರಾಜ್ (Meghana Raj Sarja) ಉತ್ತರ ಕೊಟ್ಟಿದ್ದಾರೆ.
ರಾಯನ್ ರಾಜ್ ಸರ್ಜಾ, ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ದಂಪತಿಯ ಪುತ್ರ. ಹುಟ್ಟುವಾಗಲೇ ತಂದೆಯನ್ನು ಕಳೆದುಕೊಂಡಿದ್ದರೂ ಸ್ಯಾಂಡಲ್ ವುಡ್ ಹಾಗೂ ಅಭಿಮಾನಿಗಳ ಭರಪೂರ ಪ್ರೀತಿಯನ್ನು ಪಡೆದುಕೊಂಡ ಅದೃಷ್ಟವಂತ.

ಇದನ್ನೂ ಓದಿ : 3 ವರ್ಷದ ಬಳಿಕ ಅಣ್ಣನ ಸಿನಿಮಾ ರಾಜಾಮಾರ್ತಾಂಡ ಜೊತೆ ಬರ್ತಡೇ: ಧ್ರುವ ಸರ್ಜಾ ಅಭಿಮಾನಿಗಳಿಗೆ ಆಹ್ವಾನ
ಚಿರುವನ್ನು ರಾಯನ್ ನಲ್ಲಿ ನೋಡೋ ಅಭಿಮಾನಿಗಳು ಹುಟ್ಟಿದ ದಿನದಿಂದಲೂ ರಾಯನ್ ರಾಜ್ ಸರ್ಜಾನಿಗೆ ಪ್ರೀತಿ ತೋರುತ್ತಲೇ ಬಂದಿದ್ದಾರೆ. ಅಕ್ಟೋಬರ್ 6 ರಂದು ತೆರೆಕಂಡ ಚಿರು ಸರ್ಜಾ ಕೊನೆಯ ಚಿತ್ರ ರಾಜಾಮಾರ್ತಾಂಡದ ಪ್ರದರ್ಶನದ ವೇಳೆ ಚಿರು ಜೊತೆ ರಾಯನ್ ರಾಜ್ ಸರ್ಜಾ ಕಟೌಟ್ ಕೂಡ ನಿಲ್ಲಿಸಲಾಗಿತ್ತು.
ಹೀಗಾಗಿ ರಾಯನ್ ರಾಜ್ ಸರ್ಜಾ ಸಿನಿಮಾ ಕ್ಷೇತ್ರಕ್ಕೆ ಕಾಲಿಡುತ್ತಾರಾ ಎಂಬ ಚರ್ಚೆ ಆರಂಭವಾಗಿತ್ತು. ಯಾಕೆಂದರೆ ರಾಯನ್ ರಾಜ್ ಸರ್ಜಾ ರಕ್ತದಲ್ಲಿಯೇ ನಟನೆಯ, ಕಲೆಯ ಗುಣ ಮಿಳಿತವಾಗಿದೆ. ತಾಯಿ ಮೇಘನಾ ರಾಜ್ ಸರ್ಜಾ ಹಾಗೂ ತಂದೆ ಚಿರು ಸರ್ಜಾ ಸ್ಯಾಂಡಲ್ ವುಡ್ ಕಲಾವಿದರು.

ಇದರೊಂದಿಗೆ ರಾಯನ್ ಸರ್ಜಾ ಅಜ್ಜ ಸುಂದರ ರಾಜ್ ಹಾಗೂ ಅಜ್ಜಿ ಪ್ರಮೀಳಾ ಜೋಷಾಯ್ ಕೂಡ ಸ್ಯಾಂಡಲ್ ವುಡ್ ನ ಹಿರಿಯ ನಟಿ. ಇದರೊಂದಿಗೆ ರಾಯನ್ ಕುಟುಂಬದಲ್ಲೂ ಶಕ್ತಿದಾಸ್, ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಚಿರು ಸರ್ಜಾ ಹೀಗೆ ಎಲ್ಲರೂ ಸ್ಯಾಂಡಲ್ ವುಡ್ ನಲ್ಲಿ ನಟನೆಯ ಮೂಲಕವೇ ಬದುಕು ಕಟ್ಟಿಕೊಂಡವರು.
ಇದನ್ನೂ ಓದಿ : ಧ್ರುವಸರ್ಜಾ ಪುತ್ರಿಗೆ ಸೋ ಕ್ಯೂಟ್ ಎಂದ ಅಣ್ಣ ರಾಯನ್ ಸರ್ಜಾ: ಮೇಘನಾ ರಾಜ್ ಸರ್ಜಾ ಶೇರ್ ಮಾಡಿದ ವಿಡಿಯೋ ವೈರಲ್
ಹೀಗಾಗಿ ಸಹಜವಾಗಿಯೇ ಎರಡು ಜನರೇಶನ್ ನಟನೆಯಲ್ಲಿ ತೊಡಗಿಕೊಂಡಿರುವ ಕುಟುಂಬದಿಂದ ಮೂರನೇ ಜನರೇಶನ್ ನಟನಾಗಿ ರಾಯನ್ ರಾಜ್ ಸರ್ಜಾ ಸಿನಿಮಾಕ್ಕೆ ಬರಬಹುದು ಎಂಬ ನೀರಿಕ್ಷೆ ಸಹಜವಾಗಿತ್ತು.
ತಂದೆಯೊಂದಿಗೆ ರಾಯನ್ ರಾಜ್ ಸರ್ಜಾ ಕಟೌಟ್ ಹಾಕಿದ್ದು ಜ್ಯೂನಿಯರ್ ಚಿರು ಸಿನಿಮಾಗೆ ಎಂಟ್ರಿ ಕೊಡ್ತಾರೆ ಅನ್ನೋ ಚರ್ಚೆ ಹುಟ್ಟುಹಾಕಿತ್ತು. ಆದರೆ ಈ ಬಗ್ಗೆ ನಟಿ ಮೇಘನಾ ರಾಜ್ ಸರ್ಜಾ ಮುಕ್ತವಾಗಿ ಮಾತನಾಡಿದ್ದಾರೆ. ಯಾವುದೇ ಕಾರಣಕ್ಕೂ ರಾಯನ್ ರಾಜ್ ಸರ್ಜಾನನ್ನು ಈಗಲೇ ಸಿನಿಮಾಕ್ಕೆ ,ಸಿನಿಮಾ ರಂಗಕ್ಕೆ ಪರಿಚಯಿಸುವ ಇರಾದೆ ಇಲ್ಲ ಎಂದಿದ್ದಾರೆ.

ಅವನಿನ್ನು ತುಂಬಾ ಚಿಕ್ಕವನು. ಹೀಗಾಗಿ ಸದ್ಯಸಿನಿಮಾಕ್ಕೆ ಪರಿಚಯಿಸುವ ಮನಸ್ಸಿಲ್ಲ. ಈಗ ಅವನ ಶಿಕ್ಷಣಕ್ಕೆ ಮೊದಲ ಆದ್ಯತೆ. ಅವನು ಚೆನ್ನಾಗಿ ಓದಬೇಕು. ಶಿಕ್ಷಣ ಪೂರ್ತಿ ಮುಗಿಸಿದ ಮೇಲೆ ಅವನಿಗೆ ಆಸಕ್ತಿ ಇದ್ದರೇ ಸಿನಿಮಾ ಕ್ಷೇತ್ರಕ್ಕೆ ಬರಲಿ. ಈಗಂತೂ ಸಿನಿಮಾಗೆ ತರುವ ಆಸೆ ಇಲ್ಲ ಎಂದಿದ್ದಾರೆ.
ಇದನ್ನೂ ಓದಿ : ಕಾವೇರಿಗಾಗಿ ನೋವಿನ ನಡುವಲ್ಲೇ ವಿಜಯ್ ರಾಘವೇಂದ್ರ ಭಾವುಕ ಗಾಯನ
ನಾನು ಕೂಡ ಒಂದು ಹಂತದ ಶಿಕ್ಷಣ ಮುಗಿಸಿದ ಮೇಲೆ ಸ್ವ ಇಚ್ಛೆಯಿಂದ ಸಿನಿಮಾ ರಂಗಕ್ಕೆ ಬಂದೆ. ಹಾಗೆಯೇ ರಾಯನ್ ಕೂಡ ತನ್ನ ಶಿಕ್ಷಣ ಮುಗಿದ ಮೇಲೆ ಆಸಕ್ತಿ ಇದ್ದರೇ ಸಿನಿಮಾಕ್ಕೆ ಬರಲಿ.ನಾನು ಅವನ ಮೇಲೆ ಯಾವುದೇ ಒತ್ತಡ ಹೇರೋದಿಲ್ಲ ಎಂದಿದ್ದಾರೆ.
ಅವನು ಅದೃಷ್ಟವಂತ ಹುಟ್ಟಿದಾಗಿನಿಂದ ಸ್ಯಾಂಡಲ್ ವುಡ್ ಹಾಗೂ ಅಭಿಮಾನಿಗಳ ಪ್ರೀತಿ ಪಡೆಯುತ್ತಲೇ ಬಂದಿದ್ದಾನೆ. ಅದೇ ಅವನಿಗೆ ಶ್ರೀರಕ್ಷೆ. ಸಿನಿಮಾ ಮತ್ತು ಶಿಕ್ಷಣದ ಮಧ್ಯೆ ನನ್ನ ಮೊದಲ ಆದ್ಯತೆ ಶಿಕ್ಷಣಕ್ಕೆ ಎಂದು ಮೇಘನಾ ಪುನರುಚ್ಛಿಸಿದ್ದಾರೆ. ಸದ್ಯ ರಾಯನ್ ರಾಜ್ ಸರ್ಜಾ ತನ್ನ ನರ್ಸರಿ ಶಿಕ್ಷಣದಲ್ಲಿದ್ದು ಶಾಲೆಯಲ್ಲಿ ಮಗನ ಶಾಲಾ ಸಾಧನೆಯ ಪೋಟೋಗಳನ್ನು ಮೇಘನಾ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ.
Junior Chiranjeevi Sarja Rayan Raj Sarja enter Sandalwood What mother actress Meghana Raj said