ಜ್ಯೂನಿಯರ್ ಚಿರು ಜೊತೆ ಕ್ಯೂಟ್ ಅಮ್ಮಂದಿರು…! ಮೇಘನಾ ಸೋಷಿಯಲ್ ಮೀಡಿಯಾದಲ್ಲಿ ಹೊಸ ಪೋಟೋ…!!

ನಟಿ ಮೇಘನಾ ರಾಜ್ ತಮ್ಮ ತಾಯ್ತನದ ಪ್ರತಿಗಳಿಗೆಯನ್ನೂ ಸಖತ್ತಾಗಿ ಎಂಜಾಯ್ ಮಾಡ್ತಿದ್ದಾರೆ. ಮೊನ್ನೆಯಷ್ಟೇ ಕೊರೋನಾ ಎರಡನೆ ಅಲೆಯ ಭಯ ಹಂಚಿಕೊಂಡಿದ್ದ ಮೇಘನಾ ಈಗ ತಮ್ಮ ಸ್ನೇಹಿತ ಜೊತೆ ಮಗನನ್ನು ಆಟ ಆಡಿಸುವ ಪೋಟೋ ರಿಲೀಸ್ ಮಾಡಿದ್ದಾರೆ.

ಮೇಘನ ಪ್ರೆಂಡ್ ಲೀ ಗರ್ಲ್. ಸಿನಿಮಾ ಮಾತ್ರವಲ್ಲ ಸ್ಯಾಂಡಲ್ ವುಡ್ ಹೊರಗೂ ಮೇಘನಾಗೆ ಸ್ನೇಹಿತರು ಇದ್ದಾರೆ. ಇಂತಹುದೇ ಸ್ಪೆಶಲ್ ಪ್ರೆಂಡ್ ಜೊತೆ ಜ್ಯೂನಿಯರ್ ಆಟ ಆಡ್ತಿರೋ ಪೋಟೋ ಹಂಚಿ ಕೊಂಡಿದ್ದಾರೆ ಮೇಘನಾ. ಮೊನ್ನೆ ಮೇ‌ 3 ರಂದು ಮೇಘನಾ ತಮ್ಮ 31 ನೇ ಬರ್ತಡೇ ಆಚರಿಸಿಕೊಂಡರು. ಈ ವೇಳೆ ಮೇಘನಾ ಹಾಗೂ ಅವರ ಸ್ನೇಹಿತೆ ವಿದ್ಯಾ ಶ್ರೀ ರಾವ್ ಜ್ಯೂನಿಯರ್ ಚಿರುವನ್ನು ಮಧ್ಯದಲ್ಲಿ ಮುಗಿಸಿಕೊಂಡು ಆಟ ಆಡ್ತಿರೋ ಪೋಟೋ ಶೇರ್ ಮಾಡಿದ್ದಾರೆ.

ಕೊವೀಡ್ ಕಾರಣಕ್ಕೆ ಮೇಘನಾ ವರ್ಚುವಲ್ ಬರ್ತಡೇ ಆಚರಿಸಿ ಕೊಂಡಿದ್ದು ಎಲ್ಲ ಸ್ನೇಹಿತರ ಜೊತೆ ಪೋನ್ ನಲ್ಲೇ ಮಾತನಾಡಿದ್ದಾರಂತೆ.

ಆದರೆ ಸ್ಪೆಶಲ್ ಪ್ರೆಂಡ್ ವಿದ್ಯಾಶ್ರೀ ರಾವ್ ಮಾತ್ರ ಮನೆಗೆ ಭೇಟಿ‌ ನೀಡಿದ್ದಾರೆ. ಈ ಹಿಂದೆಯೂ ಜ್ಯೂನಿಯರ್ ಚಿರು ಐದು ತಿಂಗಳು ಮುಗಿಸಿ ಆರನೇ ತಿಂಗಳಿಗೆ ಕಾಲಿಟ್ಟಾಗ ಸ್ನೇಹಿತೆ ವಿದ್ಯಾಶ್ರೀ ರಾವ್ ಮೇಘನಾ ಹಾಗೂ ಚಿರುಗಾಗಿ ಲಯನ್ ಕಿಂಗ್ ಥೀಮ್ ನಲ್ಲಿ ಸ್ಪೆಶಲ್ ಕೇಕ್ ತರಿಸಿ ಸಪ್ರೈಸ್ ಸೆಲಿಬ್ರೇಶನ್ ಮಾಡಿದ್ದರು.

ಈಗ ಮೇಘನಾ ಬರ್ತಡೆಗೂ ವಿದ್ಯಾಶ್ರೀ ಸಪ್ರೈಸ್ ವಿಸಿಟ್ ಮಾಡಿದ್ದಾ ರಂತೆ. ವಿದ್ಯಾಶ್ರೀ ಕೂಡ ಚಿಕ್ಕಮಗುವಿನ ತಾಯಿಯಾಗಿದ್ದು ಮೇಘನಾ ಹಾಗೂ ಅವರ ನಡುವೆ ಹಲವು ವರ್ಷಗಳ ಸ್ನೇಹವಿದೆ.

Comments are closed.