ನಟ ಪುನೀತ್‌ ಹುಟ್ಟುಹಬ್ಬಕ್ಕೆ ‘ಕಬ್ಜ’ ಸಿನಿಮಾ ರಿಲೀಸ್

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಆರ್‌ ಚಂದ್ರು ಕಾಂಬಿನೇಶನ್‌ನ ಬಹು ನಿರೀಕ್ಷಿತ ಕಬ್ಜ ಸಿನಿಮಾದ (Kabza movie release) ಬಿಡುಗಡೆ ಡೇಟ್‌ ಫಿಕ್ಸ್‌ ಆಗಿದೆ. “ಕಬ್ಜ” ಸಿನಿಮಾ ಯಾವಾಗ ರಿಲೀಸ್‌ ಎನ್ನುವ ಪ್ರಶ್ನೆ ಉಪೇಂದ್ರ ಅಭಿಮಾನಿಗಳಲ್ಲಿ ಹಾಗೂ ಕನ್ನಡ ಸಿನಿ ರಸಿಕರಲ್ಲಿ ಮೂಡಿತ್ತು. ಈ ಪ್ರಶ್ನೆಗೆ ಇಂದು ( ಜನವರಿ 24 ) ಉತ್ತರ ಸಿಕ್ಕಿದ್ದು, ಪುನೀತ್ ಹುಟ್ಟುಹಬ್ಬದ ಪ್ರಯುಕ್ತ ಕಬ್ಜ ಬಿಡುಗಡೆಯಾಗಲಿದೆ ಎಂಬ ಅಧಿಕೃತ ಸುದ್ದಿ ಹೊರಬಿದ್ದಿದೆ.

ಆನಂದ್ ಆಡಿಯೋ ಅಧಿಕೃತ ಖಾತೆ ಹಾಗೂ ಉಪೇಂದ್ರ ಸೇರಿದಂತೆ ಸಿನಿತಂಡದ ಇತರೆ ಸದಸ್ಯರು ಕಬ್ಜ ಸಿನಿಮಾ ಮಾರ್ಚ್ 17ರಂದು ಬಿಡುಗಡೆಯಾಗಲಿದೆ ಎಂದು ಪೋಸ್ಟರ್‌ಗಳನ್ನು ಹಂಚಿಕೊಳ್ಳುವುದರ ಮೂಲಕ ತಿಳಿಸಿದ್ದಾರೆ. ಇನ್ನು ಮಾರ್ಚ್ 17 ಕನ್ನಡ ರಾಜರತ್ನ, ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬವಿದ್ದು, ಅದೇ ದಿನದಂದು ಸಿನಿಮಾವನ್ನು ಬಿಡುಗಡೆ ಮಾಡುವ ಮೂಲಕ ಪುನೀತ್ ರಾಜ್‌ಕುಮಾರ್‌ಗೆ ಈ ಸಿನಿಮಾವನ್ನು ಅರ್ಪಿಸಲಿದೆ ಎಂದು ಕಬ್ಜ ಸಿನಿತಂಡ ಹಂಚಿಕೊಂಡಿದೆ.

ಇದನ್ನೂ ಓದಿ : “ಕ್ರಾಂತಿ” ಸಿನಿಮಾ ಬೆಂಬಲಿಸಿದ ಅಪ್ಪು ಅಭಿಮಾನಿಗಳು! ಭೇಷ್ ಎಂದ ನೆಟ್ಟಿಗರು

ಇದನ್ನೂ ಓದಿ : ತೆಲುಗು ಖ್ಯಾತ ಯುವ ನಟ ಸುಧೀರ್ ವರ್ಮಾ ಆತ್ಮಹತ್ಯೆ

ಇದನ್ನೂ ಓದಿ : Kranthi firstday show details: ಕ್ರಾಂತಿ ರಿಲೀಸ್‌ ಗೆ 3 ದಿನ ಬಾಕಿ: ಎಲ್ಲೆಲ್ಲಿ ಎಷ್ಟೆಷ್ಟು ಶೋ? ಇಲ್ಲಿದೆ ಪೂರ್ಣ ಮಾಹಿತಿ

ಇನ್ನು ಈ ಸಿನಿಮಾದಲ್ಲಿ ಉಪೇಂದ್ರ ಜೊತೆಗೆ ಕಿಚ್ಚ ಸುದೀಪ್ ಸಹ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹೀಗಾಗಿ “ಕಬ್ಜ” ಸಿನಿಮಾದ ಮೇಲಿನ ನಿರೀಕ್ಷೆ ಅಭಿಮಾನಿಗಳಲ್ಲಿ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಸಿನಿಮಾದ ಮೇಕಿಂಗ್ ಸ್ಟಿಲ್ಸ್ ಹಾಗೂ ಟೀಸರ್ ಸಿನಿ ರಸಿಕರಲ್ಲಿ ತೀವ್ರ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಕಬ್ಜ ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಪ್ಯಾನ್‌ ಇಂಡಿಯಾ ಸಿನಿಮಾವಾದ “ಕಬ್ಜ”ಸುಮಾರು 6000 ತೆರೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ : Actor Lakshman: ಕನ್ನಡ ಚಿತ್ರರಂಗದ ಹೆಸರಾಂತ ಖಳನಟ ಲಕ್ಷ್ಮಣ ವಿಧಿವಶ

ಇದನ್ನೂ ಓದಿ : Amrita Prem’s birthday: ಹುಟ್ಟು ಹಬ್ಬದ ಸಂಭ್ರಮದಲ್ಲಿ ‘ಟಗರು ಪಲ್ಯ’ ಬೆಡಗಿ ಅಮೃತ ಪ್ರೇಮ್

ಇದನ್ನೂ ಓದಿ : KL Rahul Athiya Shetty reception : ಕೆಎಲ್ ರಾಹುಲ್, ಅಥಿಯಾ ಶೆಟ್ಟಿ ವಿವಾಹ ಆರತಕ್ಷತೆಗೆ 3000 ಅತಿಥಿಗಳಿಗೆ ಆಹ್ವಾನ

Kabza movie release : The release date of real star Upendra and R Chandru combination’s much awaited movie Kabza is fixed.

Comments are closed.