ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ಧಿ : ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಏರಿಕೆಯ ಸಂಪೂರ್ಣ ಮಾಹಿತಿ

ಮಂಗಳೂರು : ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಮಂಗಳವಾರ ಭರ್ಜರಿ (Arecanut Price Increase) ಏರಿಕೆ ಕಂಡಿದೆ. ಕಳೆದೆರಡು ದಿನದಿಂದ ಹೆಚ್ಚಿನ ಅಡಿಕೆ ಮಾರುಕಟ್ಟೆಯಲ್ಲಿ ಬೆಲೆಯಲ್ಲಿ ಏರಿಕೆ ಕಾಣುತ್ತಿದ್ದರಿಂದ ಬೆಳೆಗಾರರಿಗೆ ಸಂತಸವನ್ನು ತಂದಿದೆ. ಕಳೆದ ವಾರ ಮಾರುಕಟ್ಟೆಯಲ್ಲಿ ಅಡಿಕೆಧಾರಣೆ ಸಾಕಷ್ಟು ಕುಸಿತಗೊಂಡಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದರು. ಆದರೆ ಈ ವಾರದ ಆರಂಭದಿಂದಲೇ ಅಡಿಕೆಧಾರಣೆಯಲ್ಲಿ ಏರಿಕೆ ಕಂಡಿದ್ದರಿಂದ ನೆಮ್ಮದಿಯಲ್ಲಿ ಇದ್ದಾರೆ. ಇದೀಗ ನಮ್ಮ ಕರ್ನಾಟಕ ರೈತರ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ(Arecanut) ಧಾರಣೆ ಉತ್ತಮ ಸ್ಥಿತಿಯಲ್ಲಿದೆ. ವರದಿಗಳ ಪ್ರಕಾರ, ಮುಂದಿನ ದಿನಗಳಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದ್ದರಿಂದಾಗಿ ಅಡಿಕೆ ಬೆಳೆಗಾರರು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯುವ ನಿರೀಕ್ಷೆಯಲ್ಲಿದ್ದಾರೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಹೆಚ್ಚಿನ ಮಾರುಕಟ್ಟೆಯಲ್ಲಿ ಅಡಿಕೆ ಉತ್ತಮ ಬೆಲೆಯಲ್ಲಿ ಮಾರಾಟವಾಗುತ್ತಿದ್ದು, ರೈತರು ಮಾರುಕಟ್ಟೆಯ ವಹಿವಾಟಿನಲ್ಲಿ ಚೇತರಿಕೆ ಕಂಡಿರುತ್ತದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಿದೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.

ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ಧಾರಣೆ ವಿವರ :

  • ಮಾರುಕಟ್ಟೆ ವಿಧ ಕನಿಷ್ಠ ಬೆಲೆ ಗರಿಷ್ಠ ಬೆಲೆ
  • ಬಂಟ್ವಾಳ ಕೋಕಾ ರೂ. 12,500 ರೂ. 25,000
  • ಬಂಟ್ವಾಳ ಹೊಸ ವೆರೈಟಿ ರೂ. 22,500 ರೂ. 40,000
  • ಬಂಟ್ವಾಳ ಹಳೆಯ ವೆರೈಟಿ ರೂ. 48,000 ರೂ. 54,500
  • ಚಿತ್ರದುರ್ಗ ಅಪಿ ರೂ. 46,869 ರೂ. 46,689
  • ಚಿತ್ರದುರ್ಗ ಬೆಟ್ಟೆ ರೂ. 34,619 ರೂ. 35,099
  • ಚಿತ್ರದುರ್ಗ ಕೆಂಪು ಗೋಟು ರೂ. 30,009 ರೂ. 30,410
  • ಚಿತ್ರದುರ್ಗ ರಾಶಿ ರೂ. 45,929 ರೂ. 46,359
  • ಕಾರ್ಕಳ ಹೊಸ ವೆರೈಟಿ ರೂ. 30,000 ರೂ. 40,000
  • ಕಾರ್ಕಳ ಹಳೆಯ ವೆರೈಟಿ ರೂ. 40,000 ರೂ. 54,500
  • ಕುಮಟಾ ಚಿಪ್ಪು ರೂ. 27,809 ರೂ. 33,019
  • ಕುಮಟಾ ಕೋಕಾ ರೂ. 17,509 ರೂ. 29,999
  • ಕುಮಟಾ ಫ್ಯಾಕ್ಟರಿ ರೂ. 11,569 ರೂ. 19,929
  • ಕುಮಟಾ ಹಳೆ ಚಾಲಿ ರೂ. 37,209 ರೂ. 40,599
  • ಕುಮಟಾ ಹೊಸ ಚಾಲಿ ರೂ. 34,209 ರೂ. 36,666
  • ಮಡಿಕೇರಿ ಕಚ್ಚಾ ರೂ. 44,080 ರೂ. 44,080
  • ಪುತ್ತೂರು ಕೋಕಾ ರೂ. 11,000 ರೂ. 26,000
  • ಪುತ್ತೂರು ಹೊಸ ವೆರೈಟಿ ರೂ. 33,000 ರೂ. 40,000
  • ಸಾಗರ ಬಿಳೆ ಗೊಟು ರೂ. 18,119 ರೂ. 31,199
  • ಸಾಗರ ಚಾಲಿ ರೂ. 27,569 ರೂ. 39,599
  • ಸಾಗರ ಕೋಕಾ ರೂ. 23,399 ರೂ. 30,989
  • ಸಾಗರ ಕೆಂಪು ಗೋಟು ರೂ. 18,989 ರೂ. 37,199
  • ಸಾಗರ ರಾಶಿ ರೂ. 40,269 ರೂ. 47,179
  • ಸಾಗರ ಸಿಪ್ಪೆಗೋಟು ರೂ. 4,690 ರೂ. 20,729
  • ಶಿವಮೊಗ್ಗ ಬೆಟ್ಟೆ ರೂ. 47,399 ರೂ. 52,100
  • ಶಿವಮೊಗ್ಗ ಗೊರಬಲು ರೂ. 17,001 ರೂ. 36,250
  • ಶಿವಮೊಗ್ಗ ರಾಶಿ ರೂ. 40,138 ರೂ. 47,359
  • ಶಿವಮೊಗ್ಗ ಸರಕು ರೂ. 45,009 ರೂ. 80,106
  • ಸಿದ್ದಾಪುರ ಬಿಳೆ ಗೊಟು ರೂ. 25,699 ರೂ. 32,899
  • ಸಿದ್ದಾಪುರ ಚಾಲಿ ರೂ.38,699 ರೂ. 41,339
  • ಸಿದ್ದಾಪುರ ಕೋಕಾ ರೂ. 16,899 ರೂ. 30,082
  • ಸಿದ್ದಾಪುರ ಹೊಸ ಚಾಲಿ ರೂ. 30,309 ರೂ. 35,249
  • ಸಿದ್ದಾಪುರ ಕೆಂಪು ಗೋಟು ರೂ. 25,699 ರೂ. 33,299
  • ಸಿದ್ದಾಪುರ ರಾಶಿ ರೂ. 44,899 ರೂ. 47,077
  • ಸಿದ್ದಾಪುರ ತಟ್ಟಿ ಬೆಟ್ಟೆ ರೂ. 33,199 ರೂ. 40,009
  • ಶಿರಸಿ ಬೆಟ್ಟೆ ರೂ. 32,100 ರೂ. 44,409
  • ಶಿರಸಿ ಬಿಳೆ ಗೊಟು ರೂ. 23,699 ರೂ. 33,939
  • ಶಿರಸಿ ಚಾಲಿ ರೂ. 32,100 ರೂ. 42,531
  • ಶಿರಸಿ ಕೆಂಪು ಗೋಟು ರೂ. 32,100 ರೂ. 36,999
  • ಶಿರಸಿ ರಾಶಿ ರೂ. 37,099 ರೂ. 46,650
  • ಯಲ್ಲಾಪುರ ಅಪಿ ರೂ. 52,869 ರೂ. 64,595
  • ಯಲ್ಲಾಪುರ ಬಿಳೆ ಗೊಟು ರೂ. 24,899 ರೂ. 34,269
  • ಯಲ್ಲಾಪುರ ಕೋಕಾ ರೂ. 15,601 ರೂ. 31,212
  • ಯಲ್ಲಾಪುರ ಹಳೆ ಚಾಲಿ ರೂ. 35,414 ರೂ. 41,641
  • ಯಲ್ಲಾಪುರ ಹೊಸ ಚಾಲಿ ರೂ. 30,899 ರೂ. 35,199
  • ಯಲ್ಲಾಪುರ ಕೆಂಪು ಗೋಟು ರೂ. 25,499 ರೂ. 34,815
  • ಯಲ್ಲಾಪುರ ರಾಶಿ ರೂ. 45,009 ರೂ. 51,699
  • ಯಲ್ಲಾಪುರ ತಟ್ಟಿ ಬೆಟ್ಟೆ ರೂ. 36,899 ರೂ. 44,889

ಇದನ್ನೂ ಓದಿ : Arecanut Today Price Increase :ಅಡಿಕೆ ಬೆಳೆಗಾರರಿಗೆ ಗುಡ್‌ ನ್ಯೂಸ್‌ : ಅಡಿಕೆ ಧಾರಣೆಯಲ್ಲಿ ಭಾರೀ ಏರಿಕೆ

ಇದನ್ನೂ ಓದಿ : ಅಡಿಕೆ ಬೆಲೆಯಲ್ಲಿ ಏರಿಳಿತ : ಆತಂಕದಲ್ಲಿ ಅನ್ನದಾತರು

ಇದನ್ನೂ ಓದಿ : ಅಡಿಕೆ ಧಾರಣೆ ಮಾರುಕಟ್ಟೆಯಲ್ಲಿ ಏರಿಕೆ : ಎಲ್ಲೆಲ್ಲಿ ಎಷ್ಟೆಷ್ಟು ಬೆಲೆ ?

Arecanut Price Increase: Good news for arecanut growers: Complete information about arecanut price increase in the market

Comments are closed.