ಪತ್ನಿಯನ್ನು ಚಾಕುನಿಂದ ಇರಿದುಕೊಂದ ಪತಿರಾಯ : ಭೀಕರ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ವೆಲ್ಲೂರು : ಜನ ಓಡಾಡುತ್ತಿರುವ ರಸ್ತೆಯಲ್ಲಿ ವ್ಯಕ್ತಿಯೊರ್ವ ತನ್ನ ಪತ್ನಿಯನ್ನು ಚಾಕುನಿಂದ ಇರಿದು (Woman Stabbed In Vellore) ಕೊಂದಿದ್ದಾರೆ. ಆರೋಪಿ ತನ್ನ ಪತ್ನಿಯನ್ನು ಇರಿದು ಕೊಲೆಗೈದ ದೃಶ್ಯವಾಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತನನ್ನು ಪೊಲೀಸ್‌ ಅಧಿಕಾರಿಗಳು ಬಂಧಿಸಿದ್ದಾರೆ.

ತಮಿಳುನಾಡಿನ ವೆಲ್ಲೂರಿನ ರಸ್ತೆಯೊಂದರಲ್ಲಿ ಸೋಮವಾರ ರಾತ್ರಿ ಪತಿಯೊಬ್ಬ ತನ್ನ ಪತ್ನಿಗೆ ಚಾಕುವಿನಿಂದ ಇರಿದಿರುವ ಭಯಾನಕ ವಿಡಿಯೋವೊಂದು ಹೊರಬಿದ್ದಿದೆ. ಸಮೀಪದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಈ ಭಯಾನಕ ಕೃತ್ಯ ಸೆರೆಯಾಗಿದೆ. ವೀಡಿಯೊದಲ್ಲಿ, ಪುರುಷನು ಎಲ್ಲಿಂದಲೋ ಕಾಣಿಸಿಕೊಳ್ಳುತ್ತಾನೆ. ನಂತರ ಜನನಿಬಿಡ ರಸ್ತೆಯ ಮಧ್ಯದಲ್ಲಿ ಸುತ್ತಮುತ್ತಲಿನ ಜನರು ನೋಡುತ್ತಿದ್ದರು ಆರೋಪಿ ತನ್ನ ಪತ್ನಿಯನ್ನು ಇರಿದು ಕೊಲ್ಲುತ್ತಾನೆ.

ಇದನ್ನೂ ಓದಿ : ಕ್ಯಾಲಿಫೋರ್ನಿಯಾದಲ್ಲಿ ಗುಂಡಿನ ಚಕಮಕಿ : 7 ಮಂದಿ ಸಾವು

ಇದನ್ನೂ ಓದಿ : Child raped-Accused arrested: 20 ತಿಂಗಳ ಮಗುವಿನ ಮೇಲೆ ಅತ್ಯಾಚಾರ : ಆರೋಪಿ ಅರೆಸ್ಟ್‌

ಇದನ್ನೂ ಓದಿ : Truck- Bus accident: ಟ್ರಕ್ – ಬಸ್ ಭೀಕರ ಅಪಘಾತ : 55 ಮಂದಿಗೆ ಗಾಯ

ಇದನ್ನೂ ಓದಿ : Cement container accident: ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಮೆಂಟ್‌ ಕಂಟೈನರ್‌ ಪಲ್ಟಿ: ಕಾರು ಜಖಂ

ಸಂತ್ರಸ್ತೆ ಪುನೀತಾ ರಸ್ತೆಯಲ್ಲೇ ಕುಸಿದು ಬಿದ್ದಿದ್ದು, ಸಮೀಪದ ಆಸ್ಪತ್ರೆಗೆ ಕರೆದೊಯ್ದ ಬಳಿಕ ಆಕೆ ಸಾವನ್ನಪ್ಪಿದ್ದಾಳೆ ಎಂದು ತಿಳಿದು ಬಂದಿದೆ. ಸೋಮವಾರ ರಾತ್ರಿ ಮನೆಗೆ ತೆರಳುತ್ತಿದ್ದ ವೇಳೆ ಪತಿ ಜೈಶಂಕರ್ ಆಕೆಯ ಮೇಲೆ ಹಲ್ಲೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಯಿಂದ ತಿಳಿದುಬಂದಿದೆ. ಈ ಕುರಿತು ಪೊಲೀಸ್‌ ಅಧಿಕಾರಿಗಳು ಆರೋಪಿ ಮೇಲೆ ದೂರು ದಾಖಲಿಸಿಕೊಂಡು, ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಅನೈತಿಕ ಸಂಬಂಧದ ಶಂಕೆ: ಕತ್ತು ಸೀಳಿ ಪತ್ನಿಯನ್ನೇ ಕೊಲೆಗೈದ ಪತಿ

ಹುಬ್ಬಳ್ಳಿ: ಹೆಂಡತಿಗೆ ಅನೈತಿಕ ಸಂಬಂಧವಿರುವುದಾಗಿ ಶಂಕಿಸಿ ಗಂಡನೇ ಕತ್ತು ಸೀಳಿ ಹೆಂಡತಿಯನ್ನ ಭೀಕರವಾಗಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ಕೋಳಿವಾಡ ಗ್ರಾಮದಲ್ಲಿ ನಡೆದಿದೆ. ಶಾರದಾ ದೇವರಮನಿ ಕೊಲೆಯಾದ ಮಹಿಳೆ.

ಅನೈತಿಕ ಸಂಬಂಧ ಹಾಗೂ ಕೌಟುಂಬಿಕ ಕಲಹದ ಕಾರಣ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿ ಪತಿ ಉಡಚಪ್ಪ ದೇವರಮನಿಯನ್ನು ಪೊಲೀಸರು ಬಂಧಿಸಿದ್ದಾರೆ.

Woman Stabbed In Vellore: The husband stabbed his wife with a knife: The gruesome act was captured on CCTV.

Comments are closed.