ನಟ ಪುನೀತ್‌ ರಾಜ್‌ಕುಮಾರ್‌ ಹುಟ್ಟುಹಬ್ಬದ ದಿನವೇ “ಕಬ್ಜ” ರಿಲೀಸ್‌ : ಕಾರಣ ತಿಳಿಸಿದ ಆರ್‌ ಚಂದ್ರು

ಸ್ಯಾಂಡಲ್‌ವುಡ್‌ ಪವರ್‌ಸ್ಟಾರ್‌ (Puneeth Rajkumar’s birthday) ನಮ್ಮಗಲಿ ಒಂದು ವರ್ಷದ ಮೇಲೆ ಐದು ತಿಂಗಳು ಕಳೆಯುತ್ತಾ ಬಂದಿದೆ. ಆದರೆ ಅಪ್ಪು ನೆನಪು ಯಾರಲ್ಲೂ ಮಾಸಿಲ್ಲ. ನಟ ಪುನೀತ್‌ ರಾಜ್‌ಕುಮಾರ್‌ ಇಲ್ಲದೇ ಅವರ ಅಭಿಮಾನಿಗಳು ಅಪ್ಪು ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದರ ನಡುವಲ್ಲೇ ರಿಯಲ್‌ ಸ್ಟಾರ್‌, ಕಿಚ್ಚ ಸುದೀಪ್‌ ಹಾಗೂ ಶಿವರಾಜ್‌ಕುಮಾರ್‌ ಅಭಿನಯದ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ “ಕಬ್ಜ”ವನ್ನು ಅಪ್ಪು ಹುಟ್ಟುಹಬ್ಬದಂದು ಬಿಡುಗಡೆ ಮಾಡುವುದಾಗಿ ಆರ್‌ ಚಂದ್ರು ಘೋಷಣೆ ಮಾಡಿದ್ದಾರೆ. ಹಾಗೆಯೇ ಆ ದಿನದಂದು “ಕಬ್ಜ” ಸಿನಿಮಾ ರಿಲೀಸ್‌ ಮಾಡುವ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ.

ನಿರ್ದೇಶಕ ಹಾಗೂ ನಿರ್ಮಾಪಕ ಆರ್‌.ಚಂದ್ರು ತಮ್ಮ ಟ್ವೀಟರ್‌ನಲ್ಲಿ, “ಹಲವಾರು ಗೆಳೆಯರು ಕೇಳಿದರು- ಮಾರ್ಚ್ 17 ರ ಪವರ್ ಸ್ಟಾರ್ ಜನ್ಮದಿನದಂದೇ ಕಬ್ಜ ಬಿಡುಗಡೆಗೆ ವಿಶೇಷ ಕಾರಣವಿದೆಯೇ? ಹೌದು ಖಂಡಿತ ವಿಶೇಷವಿದೆ, ಹೇಳುತ್ತೇನೆ. “ಕನ್ನಡಿಯಂತಹ ಅಪ್ಪು ಕನ್ನಡಿಗರೆದೆಯಲ್ಲಿ ಅಜರಾಮರ ” ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ. ಈಗಾಗಲೇ ಬಿಡುಗಡೆಯಾದ ಟೀಸರ್‌, ಹಾಡುಗಳು ಹಾಗೂ ಟ್ರೈಲರ್‌ ಸಖತ್‌ ಸದ್ದು ಮಾಡುತ್ತಿದ್ದು, ಸಿನಿಪ್ರೇಕ್ಷಕರ ಕುತೂಹಲವನ್ನು ಇನ್ನಷ್ಟು ಕೆರಳಿಸಿದೆ.

ಈ ಸಿನಿಮಾ ಪಕ್ಕಾ ಬ್ಲಾಕ್‌ಬಸ್ಟರ್ ಎನ್ನುವ ಮಾತು ಜೋರಾಗಿದೆ. ಇದಕ್ಕೆಲ್ಲಾ ಮುಖ್ಯ ಕಾರಣ ಆರ್‌. ಚಂದ್ರು ವಿಷನ್, ಮೇಕಿಂಗ್, ರಿಚ್ ವಿಷ್ಯುವಲ್ಸ್, ಹ್ಯೂಜ್ ಸೆಟಪ್ಸ್, ಉಪ್ಪಿ, ಕಿಚ್ಚನ ಆರ್ಭಟ, ರವಿ ಬಸ್ರೂರು ಹಂಟಿಂಗ್ ಬಿಜಿಎಂ ಸಖತ್ ಮಜಾ ಕೊಡುತ್ತಿದೆ. ಇಡೀ ಟ್ರೈಲರ್‌ನಲ್ಲಿ ಸುದೀಪ್ ವಾಯ್ಸ್ ಹೈಲೆಟ್ ಆಗಿದ್ದು, ಕಿಚ್ಚನ ಒಂದೊಂದು ಡೈಲಾಗ್ ಅಭಿಮಾನಿಗಳಿಗೆ ಮಜಾ ಕೊಡುತ್ತಿದೆ. ಅಲ್ಲಲ್ಲಿ ‘ಕೆಜಿಎಫ್’ ಸಿನಿಮಾ ಚಹರೆ ಕಂಡರರೂ ಸಹ ಟ್ರೈಲರ್ ಅಂತೂ ಸಿನಿಪ್ರಿಯರಿಗೆ ಹೊಸ ಫೀಲ್ ನೀಡಿದೆ. ಅಷ್ಟೇ ಅಲ್ಲದೇ ಮೂರು ನಟರು ಒಂದೇ ಪರದೇಯಲ್ಲಿ ಕಾಣಿಸಿಕೊಳ್ಳುವ ಸಿನಿಮಾಕ್ಕಾಗಿ ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ನೋಡಲೇಬೇಕು ಎನ್ನುವ ಕುತೂಹಲ ಹುಟ್ಟಿಸಿದೆ.

‘ಕಬ್ಜ’ ಸಿನಿಮಾದಲ್ಲಿ ನಾಯಕ ಮೊದಲು ಏರ್‌ಪೋರ್ಸ್ ಅಕಾಡೆಮಿ ಅಧಿಕಾರಿ ಅರ್ಕೇಶ್ವರ ಅಂಡರ್‌ವರ್ಲ್ಡ್ ಡಾನ್ ಆಗುವ ಕಥೆಯನ್ನು ಒಳಗೊಂಡಿದೆ. ಆತನ ಎದುರಾಳಿ ಭಾರ್ಗವ್ ಭಕ್ಷಿ ಪಾತ್ರದಲ್ಲಿ ಕಿಚ್ಚ ಸುದೀಪ್ ಮಿಂಚಿದ್ದಾರೆ. ರಾಣಿ ಮಧುಮತಿಯಾಗಿ ಶ್ರೀಯಾ ಮೋಡಿ ಮಾಡುತ್ತಾರೆ. ಇನ್ನು ನವಾಬ್ ಶಾ, ಕೋಟ ಶ್ರೀನಿವಾಸ್ ರಾವ್, ಕಬೀರ್ ದುಹಾನ್ ಸಿಂಗ್, ದೇವ್ ಗಿಲ್, ನೀನಾಸಂ ಅಶ್ವಥ್ ಸೇರಿದಂತೆ ಹಲವರು ಡಾನ್‌ಗಳಾಗಿ ಅಬ್ಬರಿಸಿದ್ದಾರೆ. ‘ದಿ ನೆಕ್ಸ್ಟ್ ಬಿಗ್ ಥಿಂಗ್ ಇನ್ ಇಂಡಿಯನ್ ಸಿನಿಮಾ’ ಎಂದು ‘ಕಬ್ಜ’ ಸಿನಿಮಾವನ್ನು ತೆರೆಗೆ ತರಲಾಗುತ್ತಿದೆ.

ಇದನ್ನೂ ಓದಿ : RRR ನಾಟು ನಾಟು ಹಾಡಿಗೆ ಆಸ್ಕರ್‌ ಪ್ರಶಸ್ತಿ : ಸಿನಿತಂಡಕ್ಕೆ ಪಿಎಂ ಮೋದಿಯಿಂದ ಅಭಿನಂದನೆ

ಇದನ್ನೂ ಓದಿ : ಆಸ್ಕರ್ 2023 ರ ವಿಜೇತರ ಪಟ್ಟಿ : RRR, ದಿ ಎಲಿಫೆಂಟ್ ವಿಸ್ಪರರ್ಸ್‌ನೊಂದಿಗೆ ಮಿಂಚಿದ ಭಾರತ

ಇದನ್ನೂ ಓದಿ : ದಿ ಎಲಿಫೆಂಟ್ ವಿಸ್ಪರರ್ಸ್ ಸಿನಿಮಾಕ್ಕೆ ಆಸ್ಕರ್ ಪ್ರಶಸ್ತಿ ಗೆದ್ದ ಗುನೀತ್ ಮೊಂಗಾ ಭಾವನಾತ್ಮಕ ಪೋಸ್ಟ್‌

ಈ ಸಿನಿಮಾವನ್ನು ತೆಲುಗಿನ ಫೇಮಸ್ ವಿತರಕರಾದ ಸುಧಾಕರ್ ರೆಡ್ಡಿ ಹಾಗೂ ಬಾಂಬೆ ರಮೇಶ್ ‘ಕಬ್ಜ’ವನ್ನು ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ರಿಲೀಸ್ ಮಾಡಲಿದ್ದಾರೆ. ಕೇರಳದಾದ್ಯಂತ ‘ಕಬ್ಜ’ ಸಿನಿಮಾವನ್ನು ಎಲ್‌ಜಿಎಫ್ ಸ್ಟುಡಿಯೋ ರಿಲೀಸ್ ಮಾಡುವುದಕ್ಕೆ ಮುಂದಾಗಿದೆ. ವಿತರಕ ರಮೇಶ್ ವ್ಯಾಸ್ ಎಂಬುವವರು ಈ ಸಿನಿಮಾವನ್ನು ಗ್ರ್ಯಾಂಡ್ ಆಗಿ ರಿಲೀಸ್ ಮಾಡುತ್ತಿದ್ದಾರೆ. ಕೇರಳದಲ್ಲಿ ಎಷ್ಟು ಸಿನಿಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ ಅನ್ನೋ ಮಾಹಿತಿ ಇನ್ನೂ ಹೊರಬೀಳಬೇಕಿದೆ. ಆನಂದ್ ಪಂಡಿತ್-ಲೈಕಾ ಪ್ರೊಡಕ್ಷನ್ ಇನ್ನು ಹಿಂದಿ ಬೆಲ್ಟ್‌ನಿಂದ ಭಾರತದಲ್ಲಿ ಅತೀ ಹೆಚ್ಚು ಕಲೆಕ್ಷನ್ ಆಗುತ್ತದೆ. ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಹಿಂದಿ ಸಿನಿಮಾಗಳನ್ನು ಹೆಚ್ಚಾಗಿ ನೋಡುತ್ತಾರೆ. ತಮಿಳಿನ ಹೆಸರಾಂತ ನಿರ್ಮಾಣ ಸಂಸ್ಥೆ ಲೈಕಾ ವಿತರಣೆ ಮಾಡುತ್ತಿದೆ. ಈ ಕಾರಣಕ್ಕೆ ದೊಡ್ಡ ಮಟ್ಟದ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ನಿರೀಕ್ಷೆ ಮಾಡಲಾಗಿದೆ.

Kabza Movie release on actor Puneeth Rajkumar’s birthday: R Chandru explained the reason

Comments are closed.