Kabza Namami Song : ಬಾಲಿವುಡ್‌ಗೆ ಸೆಡ್ಡು ಹೊಡೆಯುತ್ತಿದೆ ಕಬ್ಜ ಸಾಂಗ್ : ನಮಾಮಿ ಎನ್ನುತ್ತ ಮನಗೆದ್ದ ಶ್ರೀಯಾ ಶರಣ್

ಸ್ಯಾಂಡಲ್ ವುಡ್ ನ ಬಹುನೀರಿಕ್ಷಿತ ಸಿನಿಮಾಗಳಾದ ಕೆಜಿಎಫ್-2, ವಿಕ್ರಾಂತ್ ರೋಣ ಬಳಿಕ ಕುತೂಹಲ ಮೂಡಿಸಿರೋ ಸಿನಿಮಾ ಕಬ್ಜ. ನಾನಾ ಕಾರಣಕ್ಕೆ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿರೋ ಬುದ್ಧಿವಂತನ ಬತ್ತಳಿಕೆಯ ಈ ಸಿನಿಮಾದ ಹೊಸ ಅಪ್ಡೇಟ್ ವೊಂದು ಹೊರ ಬಂದಿದ್ದು, ಅಭಿಮಾನಿಗಳಿಗೆ ಸಖತ್ ಖುಷಿ ತಂದಿದೆ. ಕಬ್ಜ ಸಿನಿಮಾದ ಬಹುನಿರೀಕ್ಷಿತ ನಮಾನಿ ಸಾಂಗ್ (Kabza Namami Song) ರಿಲೀಸ್ ಆಗಿದೆ. ಬಾಲಿವುಡ್ ಸಿನಿಮಾ ಸಾಂಗ್ ಮಾದರಿಯಲ್ಲಿ ನಿರ್ಮಾಣವಾಗಿರೋ ಈ ಸಾಂಗ್ ಕನ್ನಡ ಪ್ರೇಕ್ಷಕರ ಮನಗೆದ್ದಿದೆ.

ಸಿನಿಮಾದ ನಾಯಕಿ ಶ್ರೀಯಾ, ನಟರಾಜನ್ ಬಣ್ಣಿಸೋ ಈ ಹಾಡನ್ನು ನೋಡಿ ಉಪ್ಪಿ ಅಭಿಮಾನಿಗಳು ಸಖತ್ ಖುಷಿಯಾಗಿದ್ದು, ಸಾಂಗ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ನಟರಾಜನ ಮೂರ್ತಿ ಎದುರು ಕಾಲಿಗೆ ಗಜ್ಜೆ ಕಟ್ಟಿ ನಾಯಕಿ ಸಂಗಡಿಗರ ಜೊತೆ ಕುಣಿದ ಈ ಸಾಂಗ್ ಐಶ್ವರ್ಯಾ ರೈ, ದೀಪಿಕಾ ಪಡುಕೋಣೆಯ ಅದ್ದೂರಿ ಹಾಡುಗಳನ್ನು ನೆನೆನಪಿಸುವಂತಿದೆ. ರವಿ ಬಸ್ರೂರು ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರೋ ಈ ಹಾಡಿನಲ್ಲಿ ಶಿವನನ್ನು ಪರಿ ಪರಿಯಾಗಿ ಬಣ್ಣಿಸಲಾಗಿದ್ದು, ಶಿವರಾತ್ರಿ ಸ್ಪೆಶಲ್ ಗಿಫ್ಟ್ ಮಾದರಿಯಲ್ಲಿ ಈ ಹಾಡನ್ನು ಸಿನಿತಂಡ ರಿಲೀಸ್ ಮಾಡಿದೆ.

ಕಬ್ಜ ಉಪೇಂದ್ರ ನಟನೆಯ ಸಿನಿಮಾವಾಗಿದ್ದು, ಹಲವು ವರ್ಷಗಳ ಬಳಿಕ ಉಪೇಂದ್ರರನ್ನು ತೆರೆ ಮೇಲೆ ಮತ್ತೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇನ್ನೊಂದು ವಿಶೇಷತೆ ಎಂದರೇ ನಟ ಉಪೇಂದ್ರ್ ಈ ಸಿನಿಮಾದಲ್ಲಿ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲದೇ ಅಭಿನಯ ಚಕ್ರವರ್ತಿ ಸುದೀಪ್ ಕೂಡ ಈ ಸಿನಿಮಾದಲ್ಲಿ ಸ್ಪೆಶಲ್ ರೋಲ್ ನಲ್ಲಿ ನಟಿಸಿದ್ದಾರೆ. ಅರ್. ಚಂದ್ರು ಜೊತೆ ಕಬ್ಜ ಸಿನಿಮಾಕ್ಕಾಗಿ ನಟ ಉಪೇಂದ್ರ ಮೂರನೇ ಭಾರಿ ಕೈಜೋಡಿಸಿದ್ದಾರೆ. ಹೀಗಾಗಿ ಈ ಫ್ಯಾನ್ ಇಂಡಿಯಾ ಸಿನಿಮಾದ ಮೇಲೆ ಎಲ್ಲರ ನೀರಿಕ್ಷೆ ಹೆಚ್ಚಿದೆ.

ಇದನ್ನೂ ಓದಿ : ಪತಿ ಹುಟ್ಟುಹಬ್ಬಕ್ಕೆ ವಿಜಯಲಕ್ಷ್ಮಿ ವಿಶೇಷ ಫೋಟೊ ಹಂಚಿಕೊಂಡು ವಿಶ್ ಮಾಡಿದ್ದು ಹೇಗೆ ಗೊತ್ತಾ ?

ಇದನ್ನೂ ಓದಿ : Actor Surya – Sachin Tendulkar : ತಮಿಳು ನಟ ಸೂರ್ಯ ಭೇಟಿ ಬಗ್ಗೆ ತಮಿಳಿನಲ್ಲಿಯೇ ಬರೆದುಕೊಂಡ ಸಚಿನ್ ತೆಂಡೂಲ್ಕರ್

ಇದನ್ನೂ ಓದಿ : ಶಿವರಾತ್ರಿ ಜಾಗರಣೆಗೆ ‘ರಾಜಕುಮಾರ’ ವಿಶೇಷ ಪ್ರದರ್ಶನ : ಬುಕಿಂಗ್ ಓಪನ್!

ಏಳು ಭಾಷೆಯಲ್ಲಿ ಏಕಕಾಲಕ್ಕೆ ತೆರೆ ಕಾಣಲಿರೋ ಈ ಸಿನಿಮಾದಲ್ಲಿ ನಟಿ ಶ್ರೀಯಾ ಶರಣ್ ಉಪ್ಪಿಗೆ ಜೊತೆಯಾಗೋ ಮೂಲಕ ಸಿನಿಮಾದ ಗ್ಲ್ಯಾಮರ್ ಮತ್ತಷ್ಟು ಹೆಚ್ಚಿಸಿದ್ದಾರೆ. ನಮಾಮಿ ಹಾಡು ರಿಲೀಸ್ ಆದ ಗಂಟೆಗಳಲ್ಲೇ ಲಕ್ಷಾಂತರ ವೀವ್ಸ್ ಪಡೆದುಕೊಂಡಿದ್ದು, ಅಭಿಮಾನಿಗಳು ಈ ಹಾಡನ್ನು ನೋಡಿ ಸಖತ್ ಎಂಜಾಯ್ ಮಾಡ್ತಿದ್ದಾರೆ. ಅಲ್ಲದೇ ನಮಾಮಿ ಹಾಡು ಹಲವು ದಾಖಲೆ ಮುರಿಯೋ ನೀರಿಕ್ಷೆ ಕೂಡ ಇದೆ.

Kabza Namami Song: Bollywood is being teased Kabza Namami Song: Shriya Sharan was impressed with Namami

Comments are closed.