Jal Jeevan Mission Project : ಕರ್ನಾಟಕ ಬಜೆಟ್ 2023 : ಗ್ರಾಮೀಣಾಭಿವೃದ್ಧಿಗೆ ಮಹತ್ವ ನೀಡಿದ ಬೊಮ್ಮಾಯಿ

ನವದೆಹಲಿ : ಕರ್ನಾಟಕ ಬಜೆಟ್​​(Karnataka Budget 2023) ನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Bommai State Budget 2023) ಬಜೆಟ್ ಮಂಡನೆ ಮಾಡಿದ್ದು, ಇದು ಈ ಸರಕಾರದ ಕೊನೆಯ ಬಜೆಟ್ ಆಗಿದ್ದು, ಬೊಮ್ಮಾಯಿ ಅವರು ಮಂಡನೆ ಮಾಡುತ್ತಿರುವ ಎರಡನೇ ಬಜೆಟ್ ಆಗಿದೆ. ಈ ಬಾರೀ ಬಜೆಟ್‌ನಲ್ಲಿ ಗ್ರಾಮೀಣ ಪ್ರದೇಶಕ್ಕೂ ಪ್ರಾಮುಖ್ಯತೆ ನೀಡಿದ್ದಾರೆ. ಗ್ರಾಮೀಣ ಪ್ರದೇಶದ ಮನೆಗಳಿಗೆ ನಳ ಸಂಪರ್ಕ ಒದಗಿಸುವ ಜಲಜೀವನ್ ಮಿಷನ್‌ (Jaljeevan Mission Project) ಯೋಜನೆಗೆ 3230 ಕೋಟಿ ರೂ. ಹಂಚಿಕೆ ಮಾಡಲಾಗಿದೆ.

ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 1800 ಕೋಟಿ ರೂ. ವೆಚ್ಚದಲ್ಲಿ 88 ಲಕ್ಷ ಕುಟುಂಬಗಳಿಗೆ ಉದ್ಯೋಗ ಕಲ್ಪಿಸುವ ಗುರಿ ಹೊಂದಲಾಗಿದೆ. ಪಂಚಾಯತ್‌ ರಾಜ್‌ ವ್ಯವಸ್ಥೆ ಬಲಪಡಿಸಲು ಪ್ರತಿ ಗ್ರಾಮ ಪಂಚಾಯಿತಿಗೆ ನೀಡುವ 2 ಲಕ್ಷ ರೂ. ನಿಂದ 35 ಲಕ್ಷ ರೂ. ಗಳವರೆಗಿನ ಅನುದಾನವನ್ನು 24 ರಿಂದ 60 ಲಕ್ಷ ರೂ. ಗಳ ವರೆಗೆ ಹೆಚ್ಚಿಸಿದೆ. ಗ್ರಾಮೀಣ ರಸ್ತೆ ಮತ್ತು ಜಮೀನುಗಳನ್ನು ಸಂಪರ್ಕಿಸುವ ಒಟ್ಟು 5000 ಕಿ.ಮೀ. ರಸ್ತೆ ನಿರ್ಮಾಣಕ್ಕೆ 300 ಕೋಟಿ ರೂ ಅನುದಾನ ನೀಡಲಾಗುವುದು.

ಇದನ್ನೂ ಓದಿ : ಕರ್ನಾಟಕ ಬಜೆಟ್ 2023 : ಶ್ರೀ ನಾರಾಯಣ ಗುರು ವಸತಿ ಶಾಲೆಗೆ 18 ಕೋಟಿ ರೂ. ಅನುದಾನ

ಇದನ್ನೂ ಓದಿ : State budget 2023: ಗೃಹಿಣಿಯರಿಗೆ ಹಾಗೂ ಮಹಿಳಾ ಕಾರ್ಮಿಕರಿಗೆ 500 ರೂ ಸಹಾಯಧನ ಘೋಷಣೆ

ಇದನ್ನೂ ಓದಿ : Karnaraka State Budget 2023: ಈ ಬಾರಿ ಸಿಎಂ ಬೊಮ್ಮಾಯಿ ಬಜೆಟ್ ನಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಗ್ರಾಮೀಣ ಪ್ರದೇಶಗಳಲ್ಲಿ ಚರಂಡಿ ವ್ಯವಸ್ಥೆ ನಿರ್ಮಾಣಕ್ಕೆ ನರೇಗಾ ಮತ್ತು ಸ್ವಚ್ಛ ಭಾರತ್‌ ಮಿಷನ್‌ ಅಡಿ 4190 ಕೋಟಿ ರೂ. ಅನುದಾನ ನೀಡಲಾಗುವುದು. ಪಂಚಾಯತ್‌ ವ್ಯಾಪ್ತಿಯ 2000 ಕೆರೆಗಳ ಅಭಿವೃದ್ಧಿಗೆ 200 ಕೋಟಿ ರೂ ವೆಚ್ಚ ನೀಡಲಾಗುವುದು. ಗ್ರಂಥಾಲಯಗಳಿಲ್ಲದ ೩೩೦ ಗ್ರಾಮ ಪಂಚಾಯತ್‌ಗಳಲ್ಲಿ ಗ್ರಂಥಾಲಯ ಸ್ಥಾಪನೆ. ವಿಶೇಷ ಚೇತನ ಮಕ್ಕಳಿಗಾಗಿ 1000 ಗ್ರಾಮೀಣ ಗ್ರಂಥಾಲಯಗಳ ಉನ್ನತೀಕರಣ ನೀಡಲಾಗುವುದು ಎನ್ನಲಾಗಿದೆ.

ಇದನ್ನೂ ಓದಿ : Karnataka budget: ಶಂಕರ್ ನಾಗ್‌ ಹೆಸರಲ್ಲಿ ಆಟೋ ಹಾಗೂ ಟ್ಯಾಕ್ಸಿ ನಿಲ್ದಾಣ ಘೋಷಣೆ

ಇದನ್ನೂ ಓದಿ : Irrigation Project Budget:‌ ವಿವಿಧ ನೀರಾವರಿ ಯೋಜನೆಗಳ ಜಾರಿಗೆ 25 ಸಾವಿರ ಕೋಟಿ ರೂ ಅನುದಾನ

Jal Jeevan Mission Project : Karnataka Budget 2023 : Bommai given importance to rural development

Comments are closed.