Women’s Premier League: ಸತತ ಎರಡು ಸೋಲುಗಳ ಎಫೆಕ್ಟ್, ರಾಯಲ್ ಚಾಲೆಂಜರ್ಸ್ ತಂಡದ ಪ್ಲೇ ಆಫ್ ಹಾದಿ ಕಷ್ಟ ಕಷ್ಟ

ಮುಂಬೈ: (Women’s Premier League) ಸ್ಮೃತಿ ಮಂಧನ ಸಾರಥ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore Women’s team) ತಂಡ ಮಹಿಳಾ ಪ್ರೀಮಿಯರ್ ಲೀಗ್ (Women’s Premier League – WPL 2023) ಟೂರ್ನಿಯಲ್ಲಿ ಸತತ ಎರಡನೇ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 60 ರನ್’ಗಳ ಅಂತರದಲ್ಲಿ ಸೋತಿದ್ದ ಆರ್’ಸಿಬಿ ಮಹಿಳೆಯರು, ಸೋಮವಾರ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 9 ವಿಕೆಟ್’ಗಳ ಅಂತರದ ಭಾರೀ ಸೋಲು ಕಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ವನಿತಾ ತಂಡ 18.4 ಓವರ್’ಗಳಲ್ಲಿ 155 ರನ್’ಗಳಿಗೆ ಆಲೌಟಾಯಿತು. ನಂತರ ಗುರಿ ಬೆನ್ನಟ್ಟಿದ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ಪಡೆ ಕೇವಲ 14.2 ಓವರ್’ಗಳಲ್ಲಿ 1 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ ಭರ್ಜರಿ ಗೆಲುವು ದಾಖಲಿಸಿತು. ವೆಸ್ಟ್ ಇಂಡೀಸ್ ಆಟಗಾರ್ತಿ ಹೀಲಿ ಮ್ಯಾಥ್ಯೂಸ್ ಅಮೋಘ ಆಲ್ರೌಂಡ್ ಆಟವಾಡಿ ಮುಂಬೈ ಇಂಡಿಯನ್ಸ್ ಗೆಲುವಿನ ರೂವಾರಿಯಾಗಿ ಮೂಡಿ ಬಂದರು. ಬೌಲಿಂಗ್’ನಲ್ಲಿ ಮಿಂಚಿ 28 ರನ್ನಿಗೆ 3 ವಿಕೆಟ್ ಪಡೆದಿದ್ದ ಹೀಲಿ ಮ್ಯಾಥ್ಯೂಸ್ ನಂತರ ಬ್ಯಾಟಿಂಗ್’ನಲ್ಲೂ ಅಬ್ಬರಿಸಿ ಕೇವಲ 38 ಎಸೆತಗಳಲ್ಲಿ 13 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 77 ರನ್ ಬಾರಿಸಿದರು. ಇಂಗ್ಲೆಂಡ್ ಆಟಗಾರ್ತಿ ನಥಾಲಿ ಸಿವರ್ ಬ್ರಂಟ್ 29 ಎಸೆತಗಳಲ್ಲಿ ಅಜೇಯ 55 ರನ್’ಗಳ ಕಾಣಿಕೆಯಿತ್ತರು. ಮ್ಯಾಥ್ಯೂಸ್ ಮತ್ತು ಸಿವರ್ ಜೋಡಿ ಮುರಿಯದ 2ನೇ ವಿಕೆಟ್’ಗೆ 56 ಎಸೆತಗಳಲ್ಲಿ 114 ರನ್’ಗಳ ಜೊತೆಯಾಟವಾಡಿ ರಾಯಲ್ ಚಾಲೆಂಜರ್ಸ್ ಸೋಲಿಗೆ ಕಾರಣರಾದರು.

ಸತತ 2 ಪಂದ್ಯಗಳಲ್ಲಿ ಸೋತಿರುವ ಸ್ಮೃತಿ ಮಂಧನ ಬಳಗ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಹಂತಕ್ಕೆ ಪ್ರವೇಶ ಪಡೆಯಬೇಕಾದರೆ ಮುಂದಿನ ಆರು ಪಂದ್ಯಗಳಲ್ಲಿ ಕನಿಷ್ಠ 4 ಅಥವಾ 5 ಪಂದ್ಯಗಳನ್ನು ಗೆಲ್ಲಬೇಕಿದೆ. ನಾಳೆ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿರುವ ತನ್ನ 3ನೇ ಲೀಗ್ ಪಂದ್ಯದಲ್ಲಿ RCB ತಂಡ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಗುಜರಾತ್ ಕೂಡ ಆಡಿರುವ 2 ಪಂದ್ಯಗಳನ್ನೂ ಸೋತು ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯುವ ತಂಡದ ನೇರವಾಗಿ ಫೈನಲ್ ತಲುಪಲಿದ್ರೆ, 2 ಹಾಗೂ 3ನೇ ಸ್ಥಾನ ಪಡೆಯುವ ತಂಡಗಳು ಪ್ಲೇ ಆಫ್’ನ ಎಲಿಮಿನೇಟರ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ 2ನೇ ತಂಡವಾಗಿ ಫೈನಲ್ ತಲುಪಲಿದೆ.

WPL ಟೂರ್ನಿ: RCB ತಂಡದ ಮುಂದಿನ ಪಂದ್ಯಗಳು
ಮಾರ್ಚ್ 8: Vs ಗುಜರಾತ್ ಜೈಂಟ್ಸ್ (ಬ್ರೆಬೋರ್ನ್ ಕ್ರೀಡಾಂಗಣ, ಮುಂಬೈ; 7.30 pm)
ಮಾರ್ಚ್ 10: Vs ಯುಪಿ ವಾರಿಯರ್ಸ್ (ಬ್ರೆಬೋರ್ನ್ ಕ್ರೀಡಾಂಗಣ, ಮುಂಬೈ; 7.30 pm)
ಮಾರ್ಚ್ 13: Vs ಡೆಲ್ಲಿ ಕ್ಯಾಪಿಟಲ್ಸ್ (ಡಿ.ವೈ ಪಾಟೀಲ್ ಕ್ರೀಡಾಂಗಣ, ಮುಂಬೈ; 7.30 pm)
ಮಾರ್ಚ್ 15: Vs ಯುಪಿ ವಾರಿಯರ್ಸ್ (ಡಿ.ವೈ ಪಾಟೀಲ್ ಕ್ರೀಡಾಂಗಣ, ಮುಂಬೈ; 7.30 pm)
ಮಾರ್ಚ್ 18: Vs ಗುಜರಾತ್ ಜೈಂಟ್ಸ್ (ಬ್ರೆಬೋರ್ನ್ ಕ್ರೀಡಾಂಗಣ, ಮುಂಬೈ; 7.30 pm)
ಮಾರ್ಚ್ 21: Vs ಮುಂಬೈ ಇಂಡಿಯನ್ಸ್ (ಡಿ.ವೈ ಪಾಟೀಲ್ ಕ್ರೀಡಾಂಗಣ, ಮುಂಬೈ; 3.30 pm)

ಇದನ್ನೂ ಓದಿ : Prithvi Shaw meets Kiccha Sudeep: ಕಿಚ್ಚ ಸುದೀಪ್ ಭೇಟಿ ಮಾಡಿದ ಪೃಥ್ವಿ ಶಾ, ಇನ್’ಸ್ಟಾಗ್ರಾಮ್’ನಲ್ಲಿ ಸಂತಸ ಹಂಚಿಕೊಂಡ ಮುಂಬೈಕರ್

Women’s Premier League: The effect of two consecutive defeats, Royal Challengers team’s path to the playoffs is difficult

Comments are closed.