“ಕಬ್ಜ” ಸಿನಿಮಾ ಬಿಡುಗಡೆಗಾಗಿ ಮುಗ್ಗಿ ಬಿದ್ದ ಪರಭಾಷಾ ವಿತರಕರು

ಸ್ಯಾಂಡಲ್‌ವುಡ್‌ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ “ಕಬ್ಜ” ರಿಲೀಸ್‌ಗೆ (Kabzaa movie release) ಇನ್ನು ಒಂದು ವಾರವಷ್ಟೇ ಬಾಕಿಯಿದೆ. ಈಗಾಗಲೇ ಬಿಡುಗಡೆಯಾದ ಟೀಸರ್‌, ಹಾಡುಗಳು ಹಾಗೂ ಟ್ರೈಲರ್‌ ಸಖತ್‌ ಸದ್ದು ಮಾಡುತ್ತಿದ್ದು, ಸಿನಿಪ್ರೇಕ್ಷಕರ ಕುತೂಹಲವನ್ನು ಇನ್ನಷ್ಟು ಕೆರಳಿಸಿದೆ. ಹಾಗೆಯೇ ಈಗಾಗಲೇ ಪ್ರತಿ ಭಾಷೆಯಲ್ಲೂ ಅದ್ದೂರಿ ಪ್ರಿ-ರಿಲೀಸ್‌ ಇವೆಂಟ್‌ನ್ನು ಆಯೋಜಿಸಿದ್ದು, ರಿಯಲ್‌ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ಶ್ರಿಯಾ ಶರಣ್ ಸೇರಿದಂತೆ ನಿರ್ದೇಶಕ ಆರ್ ಚಂದ್ರು ಬಾಲಿವುಡ್‌ ಮಂದಿಯ ನಿದ್ದೆಗೆಡಿಸಿದ್ದಾರೆ. ಹೀಗಾಗಿ ಪರಭಾಷೆ ವಿತರಕರು ಸಿನಿಮಾ ವಿತರಣೆಗೆ ಮುಗಿಬಿದ್ದಿದ್ದಾರೆ.

ಈಗಾಗಲೇ ಬಾಲಿವುಡ್‌ನ ಹೆಸರಾಂತ ನಿರ್ಮಾಪಕ ಹಾಗೂ ನಿರ್ದೇಶಕ ಆನಂದ್ ಪಂಡಿತ್ ಪ್ರಿ ರಿಲೀಸ್ ಇವೆಂಟ್‌ನ್ನು ಮುಂಬೈನಲ್ಲಿ ಆಯೋಜಿಸಿದ್ದರು. ಅದು ಸಕ್ಸಸ್ ಕಂಡ ಬೆನ್ನಲ್ಲೆ ಬೇರೆ ಕಡೆಗಳಲ್ಲಿ ಇಂತಹದ್ದೇ ಇವೆಂಟ್ ನಡೆಸಲಿದ್ದಾರೆ ಎಂದು ಸಿನಿತಂಡ ಹೇಳಿರುತ್ತದೆ. ಇನ್ನು ದೇಶದಾದ್ಯಂತ “ಕಬ್ಜ” ಹವಾ ಜೋರಾಗಿರುತ್ತದೆ. ಹೀಗಾಗಿ “ಕಬ್ಜ” ತೆಲುಗು ವರ್ಷನ್‌ ಬಿಡುಗಡೆಗೆ ಭರ್ಜರಿ ತಯಾರಿ ನಡೆಸಿದ್ದು, ಈ ಸಿನಿಮಾ ಬಿಡುಗಡೆಗೂ ಮೊದಲು ಯುಎಸ್‌ಎನಲ್ಲಿ ಪ್ರೀಮಿಯರ್ ಶೋಗೆ ಅರೇಂಜ್ ಮಾಡಲಾಗಿದೆ. ಈ ಎಲ್ಲಾ ಕಾರಣದಿಂದ ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ “ಕಬ್ಜ” ಅದ್ದೂರಿ ಸ್ವಾಗತವನ್ನು ಕಾಣಲಿದೆ. ಈ ಸಿನಿಮಾವನ್ನು ತೆಲುಗಿನ ಫೇಮಸ್ ವಿತರಕರಾದ ಸುಧಾಕರ್ ರೆಡ್ಡಿ ಹಾಗೂ ಬಾಂಬೆ ರಮೇಶ್ ‘ಕಬ್ಜ’ವನ್ನು ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ರಿಲೀಸ್ ಮಾಡಲಿದ್ದಾರೆ.

ಕೇರಳದಾದ್ಯಂತ ‘ಕಬ್ಜ’ ಸಿನಿಮಾವನ್ನು ಎಲ್‌ಜಿಎಫ್ ಸ್ಟುಡಿಯೋ ರಿಲೀಸ್ ಮಾಡುವುದಕ್ಕೆ ಮುಂದಾಗಿದೆ. ವಿತರಕ ರಮೇಶ್ ವ್ಯಾಸ್ ಎಂಬುವವರು ಈ ಸಿನಿಮಾವನ್ನು ಗ್ರ್ಯಾಂಡ್ ಆಗಿ ರಿಲೀಸ್ ಮಾಡುತ್ತಿದ್ದಾರೆ. ಕೇರಳದಲ್ಲಿ ಎಷ್ಟು ಸಿನಿಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ ಅನ್ನೋ ಮಾಹಿತಿ ಇನ್ನೂ ಹೊರಬೀಳಬೇಕಿದೆ. ಆನಂದ್ ಪಂಡಿತ್-ಲೈಕಾ ಪ್ರೊಡಕ್ಷನ್ ಇನ್ನು ಹಿಂದಿ ಬೆಲ್ಟ್‌ನಿಂದ ಭಾರತದಲ್ಲಿ ಅತೀ ಹೆಚ್ಚು ಕಲೆಕ್ಷನ್ ಆಗುತ್ತದೆ. ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಹಿಂದಿ ಸಿನಿಮಾಗಳನ್ನು ಹೆಚ್ಚಾಗಿ ನೋಡುತ್ತಾರೆ.

ಇದನ್ನೂ ಓದಿ : ಕೆಜಿಎಫ್‌ ರಾಣಿ ನಟಿ ಶ್ರೀನಿಧಿ ಶೆಟ್ಟಿಯ ಪ್ರೀತಿಯ ಸಾಲುಗಳು ಸಖತ್‌ ವೈರಲ್‌

ಇದನ್ನೂ ಓದಿ : ನಟ ದರ್ಶನ್ ತೂಗುದೀಪ್ ನಟನೆಯ ಕಾಟೇರ ಸಿನಿಮಾದಲ್ಲಿ ವಿಜಯ್ ಸೇತುಪತಿ !

ಇದನ್ನೂ ಓದಿ : ನಟ ರಕ್ಷಿತ್‌ ಶೆಟ್ಟಿ, ಸಿಂಪಲ್‌ ಸುನಿ ಕಾಂಬಿನೇಷನ್‌ ಸಿನಿಮಾ ಸಿಂಪಲ್ ಆಗಿ ಒಂದ್ ಲವ್ ಸ್ಟೋರಿಗೆ ದಶಕದ ಸಂಭ್ರಮ

ಈ ಕಾರಣಕ್ಕೆ ಇಲ್ಲಿನ ಬಾಕ್ಸಾಫೀಸ್ ಮೇಲೆ ಎಲ್ಲರ ಕಣ್ಣು ಇರುವುದು ಸಾಮಾನ್ಯ. ಸದ್ಯ ಹಿಂದಿ ಸಿನಿಮಾ ವಿತರಕರಲ್ಲಿ ಆನಂದ್ ಪಂಡಿತ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡುತ್ತಿದ್ದಾರೆ. ಹಾಗಾಗಿ ಈಗಾಗಲೇ ಭರ್ಜರಿ ತಯಾರಿ ಶುರುವಾಗಿದೆ. ತಮಿಳುನಾಡಿನಲ್ಲಿ ಬೇರೆ ಭಾಷೆಯ ಸಿನಿಮಾಗಳನ್ನು ಜನರು ನೋಡುವುದು ಕಡಿಮೆಯಾಗಿದೆ. ಆದರಲ್ಲೂ ಕನ್ನಡ ಸಿನಿಮಾಗಳು ರಿಲೀಸ್‌ ಆಗಿದ್ದೇ ವಿರಳ ಎನ್ನಬಹುದು. ಇಂತಹ ಸಂದರ್ಭದಲ್ಲಿಯೂ ‘ಕೆಜಿಎಫ್ 2’,’ಕಾಂತಾರ’ದಂತಹ ಸಿನಿಮಾಗಳು ಬಾಕ್ಸಾಫೀಸ್‌ ಅದ್ಭುತ ಕಲೆಕ್ಷನ್ ಮಾಡಿದೆ. ಹೀಗಾಗಿ ‘ಕಬ್ಜ’ ಸಿನಿಮಾವನ್ನು ತಮಿಳಿನ ಹೆಸರಾಂತ ನಿರ್ಮಾಣ ಸಂಸ್ಥೆ ಲೈಕಾ ವಿತರಣೆ ಮಾಡುತ್ತಿದೆ. ಈ ಕಾರಣಕ್ಕೆ ದೊಡ್ಡ ಮಟ್ಟದ ಬಾಕ್ಸಾಫೀಸ್ ಕಲೆಕ್ಷನ್ ಅನ್ನು ನಿರೀಕ್ಷೆ ಮಾಡಲಾಗಿದೆ.

Kabzaa movie release: Overseas distributors are all set for the release of the movie “Kabzaa”.

Comments are closed.