Kacha Badam Singer : ‘ಕಚ್ಚಾ ಬದಾಮ್’ ಗಾಯಕ ಭುವನ್‌ ಬಡ್ಯಾಕರ್‌ಗೆ ಕಾರು ಅಪಘಾತ, ಆಸ್ಪತ್ರೆಗೆ ದಾಖಲು

ಕೋಲ್ಕತ್ತಾ: ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೆಂಡಿಂಗ್‌ ಕ್ರಿಯೇಟ್‌ ಮಾಡಿರುವುದು ‘ಕಚ್ಚಾ ಬದಾಮ್’ (Kacha Badam) ಹಾಡು. ಪಶ್ಚಿಮ ಬಂಗಾಲದ ಕಡಲೆಕಾಯಿ ಮಾರಾಟಗಾರ ಗಾಯಕ ಭುವನ್ ಬಡ್ಯಾಕರ್ ಹಾಡಿಗೆ ಜನರು ಪುಲ್‌ ಫಿದಾ ಆಗಿದ್ದಾರೆ. ಆದ್ರೆ ಪಶ್ಚಿಮ ಬಂಗಾಲದಲ್ಲಿ ನಡೆದ ಕಾರು ಅಫಘಾತದಲ್ಲಿ ಭುವನ್ ಬಡ್ಯಾಕರ್ ಅಪಘಾತವಾಗಿದ್ದು, ಅವರನ್ನು ಸೂರಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸದ್ಯ ಭುವನ್‌ ಬಡ್ಯಾಕರ್‌ಗೆ ಆಸ್ಪತ್ರೆಯ ವೈದ್ಯರು ಚಿಕಿತ್ಸೆಯನ್ನು ನೀಡುತ್ತಿದ್ದಾರೆ. ತೀವ್ರ ತೆರನಾದ ಪೆಟ್ಟು ಬಿದ್ದಿಲ್ಲ ಎಂದು ತಿಳಿದು ಬಂದಿದೆ. ಆದರೆ ಆಸ್ಪತ್ರೆಯಿಂದ ಈ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಭುವನ್‌ ಬಡ್ಯಾಕರ್‌ ಅವರು ಡ್ರೈವಿಂಗ್‌ ತರಬೇತಿ ಪಡೆಯುತ್ತಿದ್ದ ವೇಳೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಕಡಲೆ ಕಾಯಿ ವ್ಯಾಪಾಯಿಯ ಹಾಡಿಗೆ (Kacha Badam) ಜನರು ಪುಲ್‌ ಫಿದಾ

ಬೀದಿ ಬೀದಿಯಲ್ಲಿ ಕಡಲೆಕಾಯಿ ಮಾರಾಟ ಮಾಡಿಕೊಂಡು ಭುವನ್ ಬಡ್ಯಾಕರ್ ಅವರು ಹಾಡುತ್ತಿದ್ದ ಕಚಾ ಬದಮ್ ಹಾಡು ರಾತ್ರೋ ರಾತ್ರಿ ವೈರಲ್ ಆಗಿತ್ತು. ಮಕ್ಕಳು, ಯುವಕರು ವೃದ್ದರಿಂದ ಹಿಡಿದು ಸೆಲೆಬ್ರಿಟಿಗಳು ಕೂಡ ಈ ಹಾಡಿಗೆ ಸ್ಟೆಪ್‌ ಹಾಕಿದ್ದಾರೆ. ಬದ್ಯಕರ್ ಅವರು ಬೀರ್ಭುಮ್ ಜಿಲ್ಲೆಯ ವಿವಿಧ ಹಳ್ಳಿಗಳಿಗೆ ಕಡಲೆಕಾಯಿ ಮಾರಾಟ ಮಾಡುವಾಗ ಖರೀದಿದಾರರನ್ನು ಆಕರ್ಷಿಸಲು ಹಾಡನ್ನು ರಚಿಸಿದರು. ಅವರ ಹಾಡನ್ನು ನಂತರ ರೀಮಿಕ್ಸ್ ಮಾಡಲಾಯಿತು ಮತ್ತು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಯಿತು ಅದು 50 ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ.

ಕಳೆದ ವಾರ ಕೋಲ್ಕತ್ತಾದ ಪಾರ್ಕ್ ಸ್ಟ್ರೀಟ್‌ನಲ್ಲಿರುವ ಸಮ್‌ಪ್ಲೇಸ್ ಎಲ್ಸ್ ಪಬ್‌ನಲ್ಲಿ ಭುವನ್ (Bhuban Badyakar) ಲೈವ್ ಪ್ರದರ್ಶನ ನೀಡುತ್ತಿದ್ದರು. ಹೊಳೆಯುವ ಜಾಕೆಟ್ ಮತ್ತು ಹೊಸ ರಾಕ್‌ಸ್ಟಾರ್ ಅವತಾರವನ್ನು ಧರಿಸಿ, ಬಡ್ಯಾಕರ್ ತಮ್ಮ ಸಾಮಾನ್ಯ ಸ್ವಭಾವಕ್ಕಿಂತ ಭಿನ್ನವಾಗಿ ಕಾಣಿಸಿಕೊಂಡಿದ್ದರು. ನಟ ನೀಲ್ ಭಟ್ಟಾಚಾರ್ಯ ಅಪ್‌ಲೋಡ್ ಮಾಡಿದ ಇನ್‌ಸ್ಟಾಗ್ರಾಮ್ ರೀಲ್‌ನಲ್ಲಿ ಅವರು ತಮ್ಮದೇ ಆದ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿ, ಭುವನ್ ಬಡ್ಯಾಕರ್ ಅವರು ಪ್ರಸಿದ್ಧ ಹುಕ್ ಸ್ಟೆಪ್‌ಗಳನ್ನು ಮಾಡುತ್ತಿರುವ ಗುಂಪಿನೊಂದಿಗೆ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ. ಅಲ್ಲದೇ ಇತ್ತೀಚೆಗೆ ಪಶ್ಚಿಮ ಬಂಗಾಳ ಪೊಲೀಸರು ಭುವನ್ ಬಡ್ಯಾಕರ್ ಅವರನ್ನು ಸನ್ಮಾನಿಸಿದರು.

https://www.youtube.com/watch?v=uiqrngFTX5k

‌ಇದನ್ನೂ ಓದಿ : ನೀರ ನಡುವೆ ಹೂವು ಉಯ್ಯಾಲೆಯಲ್ಲಿ ಚಿತ್ತಾರದ ಬೆಡಗಿ : ಮನಸೆಳೆದ ಅಮೂಲ್ಯ ಬೇಬಿ ಬಂಪ್ ಪೋಟೋಶೂಟ್

ಇದನ್ನೂ ಓದಿ : ಪುನೀತ್ ಹೆಸರಿನಲ್ಲಿ ಉಡಾವಣೆಯಾಗಲಿದೆ ಉಪಗ್ರಹ

Kacha Badam singer Bhuban Badyakar meets with a car accident, admited hospital in West Bengal

Comments are closed.