World Arthritis Day 2022 : ಸಂಧಿವಾತ ದೂರಮಾಡುವ 5 ಬೆಸ್ಟ್‌ ಟಿಪ್ಸ್‌ : ಮೂಳೆಗಳ ಆರೋಗ್ಯ ಹೀಗೆ ಕಾಪಾಡಿಕೊಳ್ಳಿ

ಪ್ರತಿ ವರ್ಷ ಅಕ್ಟೋಬರ್‌ 12 ರಂದು ವಿಶ್ವ ಸಂಧಿವಾತ ದಿನ (World Arthritis Day 2022) ಎಂದು ಆಚರಿಸಲಾಗುತ್ತದೆ. ಸಂಧಿವಾತದ ಬಗ್ಗೆ ಜಾಗೃತಿ ಮೂಡಿಸುವುದೇ ಇದರ ಉದ್ದೇಶವಾಗಿದೆ. ವಯಸ್ಸು ಹೆಚ್ಚಾದಂತೆ ಸಂಧಿಗಳಲ್ಲಿ ಹೆಚ್ಚಾಗಿ ಮೊಣಕಾಲುಗಳಲ್ಲಿ ನೋವು (Joint Pain) ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ. ಇದು ದಿನನಿತ್ಯದ ಕೆಲಸಗಳನ್ನು ನಿಭಾಯಿಸಲು ಸಹ ಅಡ್ಡಿಪಡಿಸುತ್ತದೆ. ಮೂಳೆಗಳು ಬಲಿಷ್ಠವಾಗಿರದೇ ಇರುವುದೇ ಸಂಧಿವಾತಕ್ಕೆ ಮುಖ್ಯ ಕಾರಣ. ಆರ್ಥ್ರೈಟಿಸ್‌ ಆಂಡ್‌ ರ್‍ಯುಮೆಟಿಸಮ್‌ ಇಂಟರ್‌ನ್ಯಾಷನಲ್‌ (ARI) 1996 ರಲ್ಲಿ ಈ ದಿನವನ್ನು ಸ್ಥಾಪಿಸಿತು. ಇದು ಸಂಧಿವಾತದ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ಚಿಕಿತ್ಸೆಗಾಗಿ ಕೆಲಸ ಮಾಡುವ ಅತಿದೊಡ್ಡ ಸಂಸ್ಥೆಯಾಗಿದೆ. ಸಂಧಿವಾತ ಮತ್ತು ಮಸ್ಕ್ಯುಲೋಸ್ಕೆಲಿಟಲ್ ಡಿಸೀಸ್‌ಗಳ ತಡೆಗಟ್ಟುವಿಕೆಯ ಬಗ್ಗೆ ವಿಶ್ವದಾದ್ಯಂತ ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಗುರಿಯಾಗಿದೆ. ಆರಂಭಿಕ ರೋಗನಿರ್ಣಯ ಮತ್ತು ಚಿಕಿತ್ಸೆಯಿಂದ ಹೇಗೆ ರೋಗವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು ಎಂಬುದರ ಕುರಿತು ಜನರಿಗೆ ತಿಳಿಹೇಳುವುದಾಗಿದೆ.

ಸಂಧಿವಾತಕ್ಕೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಆನುವಂಶೀಯತೆ, ತೂಕ, ಪೋಷಕಾಂಶಗಳ ಕೊರತೆ ಮತ್ತು ವಯಸ್ಸು ಪ್ರಮುಖ ಕಾರಣಗಳು. ಕೀಲುಗಳಲ್ಲಿ ಊತ, ಸ್ನಾಯು ಸೆಳೆ, ಕಾಲು ಮತ್ತು ತೋಳುಗಳಲ್ಲಿ ಅತಿಯಾದ ಬಿಗಿತ, ಸಂಧೀಗಳಲ್ಲಿ ಸದಾ ನೋವು, ನಡೆದಾಡಲು ಕಷ್ಟಪಡುವುದು ಮುಂತಾದವುಗಳು ರೋಗದ ಲಕ್ಷಣವಾಗಿದೆ. ಸಂಧಿವಾತದಿಂದ ದೂರವಿರಲು ಈ ಕೆಳಗಿನ ಟಿಪ್ಸ್‌ ಅನುಸರಿಸಿ. ಸಂಧಿವಾತದಿಂದ ದೂರವಿರಲು ಸಹಾಯಮಾಡುವ ಟಿಪ್‌ಗಳು. ಇದರಿಂದ ಮೂಳಗಳ ಆರೋಗ್ಯವೂ ಸುಧಾರಿಸುತ್ತದೆ.

ಇದನ್ನೂ ಓದಿ : Tips for Better Sleep : ಸರಿಯಾದ ನಿದ್ದೆಯಿಲ್ಲದೆ ದಿನಪೂರ್ತಿ ಆಲಸ್ಯವೇ? ಉತ್ತಮ ನಿದ್ದೆಗೆ ಹೀಗೆ ಮಾಡಿ

ಮಧುಮೇಹದ ಬಗ್ಗೆ ಕಾಳಜಿವಹಿಸಿ :
ರಕ್ತದಲ್ಲಿನ ಸಕ್ಕರೆಯ ಮಟ್ಟವು ಕೀಲುಗಳಲ್ಲಿನ ಸಂಯೋಜಕ ಅಂಗಾಂಶವನ್ನು ಬಿಗಿಗೊಳಿಸುತ್ತದೆ. ಇದರಿಂದ ಸಂಧುಗಳಲ್ಲಿ ಒತ್ತಡ ಹೆಚ್ಚಾಗಿ ದುರ್ಬಲಗೊಳ್ಳುತ್ತವೆ. ಅದಕ್ಕಾಗಿ ಮಧುಮೇಹದ ಮಗ್ಗೆ ಕಾಳಜಿವಹಿಸುವುದು ಅವಶ್ಯಕವಾಗಿದೆ.

ದೇಹದ ತೂಕ ಕಾಪಾಡಿಕೊಳ್ಳಿ :
ತೂಕ ಹೆಚ್ಚಾಗುವುದರಿಂದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸೊಂಟ ಮತ್ತು ಮೊಣಕಾಲುಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ಇದು ಅಸ್ಥಿಸಂಧಿ ವಾತದ (ಓಸ್ಟಿಯೊಆರ್ಥ್ರೈಟಿಸ್‌) ಪಾಯವನ್ನು ಹೆಚ್ಚಿಸುತ್ತದೆ. ದೇಹದ ತೂಕ ಕಾಪಾಡಿಕೊಳ್ಳುವುದರಿಂದ ಸಂಧೀವಾತದಿಂದ ದೂರವಿರಬಹುದು.

ಪೋಷಕಾಂಶಯುಕ್ತ ಆಹಾರ ಸೇವಿಸಿ :
ಒಮೆಗಾ–3 ಫ್ಯಾಟಿ ಆಸಿಡ್‌ ಹಲವಾರು ಆರೋಗ್ಯ ಪ್ರಯೋಜನಗಳನ್ನು ಒದಗಿಸುತ್ತವೆ. ಇದು ಕೀಲುಗಳಲ್ಲಿ ಉರಿಯೂತವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ವಾಲ್ನಟ್‌, ಅಗಸೆ ಬೀಜ, ಚಿಯಾ ಬೀಜಗಳು, ಅವಕಾಡೊ ಮತ್ತು ಕೆಲವು ಮೀನುಗಳಲ್ಲಿ ಒಮೆಗಾ– 3 ಸಮೃದ್ಧವಾಗಿದ್ದು ಅವುಗಳನ್ನು ನಿತ್ಯದ ಡಯಟ್‌ನಲ್ಲಿ ಸೇರಿಸಿಕೊಳ್ಳುವುದು ಅವಶ್ಯಕವಾಗಿದೆ.

ನಿಯಮಿತವಾಗಿ ವ್ಯಾಯಾಮ ಮಾಡಿ:
ಪ್ರತಿನಿತ್ಯ ವ್ಯಾಯಾಮ ಮಾಡುವುದು ಅತಿ ಅವಶ್ಯಕ. 30 ನಿಮಿಷಗಳ ವ್ಯಾಯಾಮವು ಮೊಣಕಾಲುಗಳು ಮತ್ತು ಸೊಂಟದ ಕೀಲುಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ. ವಾಕಿಂಗ್‌, ಸೈಕ್ಲಿಂಗ್‌ ಅಥವಾ ಈಜು ಮುಂತಾದವುಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಇದರ ಜೊತೆಗೆ ಸ್ಟ್ರಚಿಂಗ್‌ ವ್ಯಾಯಮಗಳು ಸಹ ಕೀಲುಗಳನ್ನು ಗಟ್ಟಿಯಾಗಿರಿಸಬಲ್ಲದು.

ಧೂಮಪಾನದಿಂದ ದೂರವಿರಿ :
ಧೂಮಪಾನವು ಕೀಲುಗಳನ್ನು ರಕ್ಷಿಸುವ ಅಂಗಾಂಶಗಳ ಮೇಲೆ ಒತ್ತಡವನ್ನು ಉಂಟುಮಾಡಿ ಸಂಧೀವಾತಕ್ಕೆ ಕಾರಣವಾಗಬಹುದು. ರುಮುಟಾಯ್ಡ್‌ ಸಂಧಿವಾತಕ್ಕೆ ದೂಮಪಾನವು ಪ್ರಮುಖ ಅಪಾಯಕಾರಿ ಅಂಶಗಳಲ್ಲಿ ಒಂದಾಗಿದೆ ಎಂದ ಹಲವಾರು ಅಧ್ಯಯನಗಳಿಂದ ತಳಿದುಬಂದಿದೆ.

ಇದನ್ನೂ ಓದಿ : Relief From Joint Pain: ಚಳಿಗಾಲದಲ್ಲಿ ಗಂಟುನೋವೇ? ಇಲ್ಲಿದೆ ಪರಿಹಾರೋಪಾಯ

(World Arthritis Day 2022 5 tips to reduce joint pain effectively)

Comments are closed.