Hassan accident : ಹಾಸನ ಭೀಕರ ಅಪಘಾತ : ಟ್ಯಾಂಕರ್ ಚಾಲಕ ಅರೆಸ್ಟ್, ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ಎಂದ ಸಿಎಂ

ಹಾಸನ : (Hassan accident Tanker driver arrested ) ಟೆಂಪೋ ಟ್ರಾವೆಲರ್, ಕೆಎಸ್ಆರ್ ಟಿಸಿ ಬಸ್ ಹಾಗೂ ಹಾಲಿನ ಟ್ಯಾಂಕರ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಒಟ್ಟು 9 ಮಂದಿಯ ಸಾವಿಗೆ ಕಾರಣನಾಗಿದ್ದ ಹಾಲಿನ ಟ್ಯಾಂಕರ್ ಚಾಲಕನನ್ನು ಬಂಧಿಸುವಲ್ಲಿ ಬಾಣಾವರ ಪೊಲೀಸರು ಯಶಸ್ವಿಯಾಗಿದ್ದಾರೆ.

ಧರ್ಮಸ್ಥಳ – ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದ ಕುಟುಂಬ ದೇವರ ದರ್ಶನ ಮುಗಿಸಿಕೊಂಡು ವಾಪಾಸಾಗುತ್ತಿತ್ತು.ಈ ವೇಳೆಯಲ್ಲಿ ಟೆಂಪೋ ಟ್ರಾವೆಲರ್ ಗೆ ರಾಂಗ್ ಸೈಡ್ ನಿಂದ ಬಂದ ಹಾಲಿನ ಟ್ಯಾಂಕರ್ ಢಿಕ್ಕಿ ಹೊಡೆದಿತ್ತು. ಅಲ್ಲದೇ ಬೆಂಗಳೂರಿನಿಂದ ಶಿವಮೊಗ್ಗದ ಕಡೆಗೆ ಸಾಗುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಗೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದು, ಐದು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ದುರಂತ ಸಂಭವಿಸುತ್ತಲೇ ಹಾಲಿನ ಟ್ಯಾಂಕರ್ ಚಾಲಕ ನವೀನ್ ಪರಾರಿಯಾಗಿದ್ದ. ಆದ್ರೀಗ ಬಾಣಾವರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಶಿವಮೊಗ್ಗದಿಂದ ಹಾಲು ತುಂಬಿಸಿಕೊಂಡು ಚೆನ್ನರಾಯಪಟ್ಟಣಕ್ಕೆ ತೆರಳುತ್ತಿತ್ತು. ಈ ವೇಳೆಯಲ್ಲಿ ಚಾಲಕನ ನಿರ್ಲಕ್ಷ್ಯದಿಂದಾಗಿ ದುರಂತ ಸಂಭವಿಸಿತ್ತು. ಗಾಯಾಳುಗಳನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮೃತರ ಅಂತ್ಯಕ್ರೀಯೆಯನ್ನು ನಡೆಸಲಾಗಿದೆ. ಸ್ಥಳದಲ್ಲಿ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿದೆ.

Hassan accident driver arrested : ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ : ಸಿಎಂ ಬೊಮ್ಮಾಯಿ

ಹಾಸನ ಜಿಲ್ಲೆಯಲ್ಲಿ ನಡೆದಿರುವ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಮೃತರ ಆತ್ಮಗಳಿಗೆ ಶಾಂತಿಯನ್ನು ಕೋರುತ್ತೇನೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದಿದ್ದಾರೆ.

https://www.youtube.com/watch?v=ZRYMohQkxrY

ಭೀಕರ ಸರಣಿ ಅಪಘಾತದಲ್ಲಿ ದೊಡ್ಡಯ್ಯ (60ವರ್ಷ), ಭಾರತಿ (50 ವರ್ಷ), ಲೀಲಾವತಿ (50 ವರ್ಷ), ಚೈತ್ರಾ (33 ವರ್ಷ), ಸಮರ್ಥ (10 ವರ್ಷ), ಡಿಂಪಿ (12 ವರ್ಷ ), ತನ್ಮಯ್ (10ವರ್ಷ ), ಧ್ರುವ (2 ವರ್ಷ), ವಂದನಾ (20 ವರ್ಷ) ಮೃತಟಪಟ್ಟಿದ್ದರು.

ಇದನ್ನೂ ಓದಿ : Hassan accident : ಹಾಸನ ಬಳಿ ಭೀಕರ ಅಪಘಾತ : 9 ಮಂದಿ ಸಾವು

ಇದನ್ನೂ ಓದಿ : Gold Coins Fraud : ಚಿನ್ನದ ಕಾಯಿನ್ ನೀಡುವುದಾಗಿ ವಂಚನೆ : ಚಿಕ್ಕಮಗಳೂರಲ್ಲಿ ಖತರ್ನಾಕ್ ಗ್ಯಾಂಗ್ ಅರೆಸ್ಟ್

Hassan accident Tanker driver arrested suitable compensation for deceased family says CM

Comments are closed.