ತುಳು‌ಭಾಷೆಯಲ್ಲಿ ಮತ್ತೊಮ್ಮೆ ಅಬ್ಬರಿಸಲಿದೆ ಕಾಂತಾರ ಸಿನಿಮಾ

ಸ್ಯಾಂಡಲ್‌ವುಡ್‌ ಡಿವೈನ್‌ಸ್ಟಾರ್‌ ರಿಷಬ್‌ ಶೆಟ್ಟಿ ಅಭಿನಯದ “ಕಾಂತಾರ” ಸಿನಿಮಾ ಕಳೆದ ವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ತೆರೆ ಕಂಡಿದ್ದು, ಜಗತಿನಾದ್ಯಂತ ಜನ ಮನ್ನಣೆಯನ್ನು ಗಳಿಸಿದೆ. ಕರಾವಳಿ ಸೊಗಡಿನಲ್ಲಿ ಮೂಡಿ ಬಂದ ಭೂತಕೋಲ ಕಥೆಯನ್ನು ಒಳಗೊಂಡ ಕಾಂತಾರ ಸಿನಿಪ್ರೇಕ್ಷಕರ ಮನದಲ್ಲಿ ಕಾಡುಬೆಟ್ಟಿ ಶಿವನ ಪಾತ್ರ ಅಚ್ಚಳಿಯದೇ ಉಳಿದಿದೆ. ಇನ್ನು ಏಪ್ರಿಲ್‌ 15ರಂದು ಕಿರುತೆರೆ ಸುವರ್ಣ ವಾಹಿನಿಯಲ್ಲಿ ಜಗಮೆಚ್ಚಿದ ಕಾಂತಾರ ಸಿನಿಮಾ ತುಳು (Kantara movie in Tulu language) ಭಾಷೆಯಲ್ಲಿ ಪ್ರಸಾರವಾಗಲಿದೆ.

ಹೌದು ಸಾಮಾಜಿಕ ಜಾಲತಾಣದಲ್ಲಿ, “ತುಳುವರ ಹೊಸ ವರ್ಷದ ದಿನದಂದು ‘ತುಳು’ ಭಾಷೆಯಲ್ಲಿ ಬರ್ತಿದೆ ಜಗ ಮೆಚ್ಚಿದ ಸಿನಿಮಾ “ಕಾಂತಾರ” ಏಪ್ರಿಲ್ 15 ರಂದು ಮಧ್ಯಾಹ್ನ 1 ಗಂಟೆಗೆ ” ಸುವರ್ಣವಾಹಿನಿಯಲ್ಲಿ ಪ್ರಸಾರವಾಲಿದೆ ಎಂದು ಸಾಮಾಜಿಕ ಜಾಲತಾಣದ ಮೂಲಕ ತಿಳಿದು ಬಂದಿದೆ. ತುಳುನಾಡಿನ ಜನರು ಹೊಸವರ್ಷದಂದು ತಮ್ಮ ನಾಡಿನ ಸೊಗಡನ್ನು ಆಧಾರಿಸಿದ ಕಾಂತಾರ ಸಿನಿಮಾವನ್ನು ಮನೆ ಮಂದಿಯೆಲ್ಲಾ ಇನ್ನೊಮ್ಮೆ ಕಣ್ತುಂಬಿಸಿಕೊಳ್ಳಬಹುದು.

ಕಾಂತಾರ” ಸಿನಿಮಾ ಸೆಪ್ಟೆಂಬರ್‌ 30ರಂದು ಬಿಡುಗಡೆ ಆಗಿದ್ದು, ರೂ.400 ಕೋಟಿ ಕಲೆಕ್ಷನ್‌ ಮಾಡುವ ಮೂಲಕ ಬಾಕ್ಸ್‌ಆಫೀಸ್‌ ಕಲೆಕ್ಷನ್‌ನಲ್ಲಿ ಧೂಳೆಬ್ಬಿಸಿದೆ. ಬಿಡುಗಡೆಯಾದ ಎರಡು ವಾರಗಳ ನಂತರ ಬೇರೆ ಭಾಷೆಗಳಿಗೂ ಡಬ್‌ ಆಗಿ ಸಿನಿಮಾ ಸೂಪರ್‌ ಹಿಟ್‌ ಆಗಿತ್ತು. ಈ ಸಿನಿಮಾ ಹಿಂದಿಗೆ ಡಬ್‌ ಆಗಿ ಅದ್ಭುತ ಯಶಸ್ಸನ್ನು ಕಂಡಿತ್ತು. “ಕಾಂತಾರ” ಬಾಲಿವುಡ್‌ನಲ್ಲಿ 50 ದಿನ ಪೂರೈಸಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇದೀಗ ಈ ಸಿನಿಮಾವನ್ನು ವಿಶ್ವದಾದ್ಯಂತ ಕಾಣುವಂತೆ ಮಾಡುವ ಪ್ರಯತ್ನ ಶುರುವಾಗಿದೆ.

“ಕಾಂತಾರ” ಸಿನಿಮಾ ಹಿಂದಿಗ ಡಬ್‌ ಆಗಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಬಿಟೌನ್‌ ಸೂಪರ್‌ ಸ್ಟಾರ್‌ಗಳ ಸಿನಿಮಾಗಳಿಗೂ ಪೈಪೋಟಿ ನೀಡಿ ಸಿನಿಮಾ ಬಾಕ್ಸ್‌ ಆಫೀಸ್‌ ಶೇಕ್‌ ಮಾಡಿತ್ತು. ಸಿನಿಮಾ ನೋಡಿದ ಪ್ರತಿಯೊಬ್ಬರು ಸಿನಿತಂಡದ ಶ್ರಮಕ್ಕೆ ಬಹುಪರಾಕ್‌ ಹೇಳಿದ್ದಾರೆ. ಈಗಾಗಲೇ “ಕಾಂತಾರ” ನಾಲ್ಕು ಭಾಷೆಗಳಲ್ಲಿ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ ಆಗಿರುತ್ತದೆ. ಆದರೆ ಹಿಂದಿಯಲ್ಲಿ ಡಿಸೆಂಬರ್‌ 9ಕ್ಕೆ ನೆಟ್‌ಫ್ಲಿಕ್ಸ್‌ಗೆ ಸ್ಟ್ರೀಮಿಂಗ್‌ ಆಗಲಿದೆ.

ಹಿಂದಿಗೆ ಡಬ್‌ ಆಗಿ ನೆಟ್‌ಫ್ಲಿಕ್ಸ್‌ ಲಗ್ಗೆ ಕೊಡುತ್ತಿರುವ ಮೊದಲ ಕನ್ನಡ ಸಿನಿಮಾ ಎನ್ನುವ ಹೆಗ್ಗಳಿಕೆಗೆ “ಕಾಂತಾರ” ಸಿನಿಮಾ ಪಾತ್ರವಾಗಿದೆ. ನೆಟ್‌ಫ್ಲಿಕ್ಸ್‌ ಮೂಲಕ ಪ್ರಪಂಚದ ಮೂಲೆ ಮೂಲೆಗೆ ಕರಾವಳಿ ಸೊಗಡು ತಲುಪಲಿದೆ. ಆದರೂ ಕೂಡ ಸಿನಿಮಾ ಮಂದಿರಗಳಲ್ಲಿ ಕಾಡಬೆಟ್ಟು ಶಿವನ ಆರ್ಭಟ ಮುಂದುವರೆದು, “ಕಾಂತಾರ” ಇತ್ತೀಚೆಗೆಷ್ಟೇ ಮಾರ್ಚ್ 19ರಂದು ವಿಶ್ವ ಟಿವಿಯಲ್ಲಿ ಕೂಡ ಪ್ರಸಾರವಾಗಿ ಜಗಮನ್ನಣೆಯನ್ನು ಗಳಿಸಿದೆ.

ಇದನ್ನೂ ಓದಿ : ನಂದಿನಿ – ಅಮುಲ್‌ ವಿವಾದ : ಬಿಜೆಪಿ ವಿರೋಧ ಮತ್ತೊಂದು ವಿವಾದತ್ಮಾಕ ಹೇಳಿಕೆ ನೀಡಿದ ನಟ ಚೇತನ್‌ ಕುಮಾರ್‌

ಇದನ್ನೂ ಓದಿ : ಯುವ ಶೂಟಿಂಗ್ ಆರಂಭ : ಕ್ಯ್ಲಾಪ್ ಮಾಡಿದ ನಿರ್ದೇಶಕ ಸಂತೋಷ್ ಆನಂದ್ ರಾಮ್

ರಿಷಬ್ ಶೆಟ್ಟಿ, ಕಿಶೋರ್ ಮತ್ತು ಸಪ್ತಮಿ ಗೌಡ ಅಭಿನಯದ ಕಾಂತಾರ, ಕರ್ನಾಟಕ ಮತ್ತು ಜಗತ್ತಿನಾದ್ಯಂತ ಹಲವಾರು ದಾಖಲೆಗಳನ್ನು ಮುರಿದಿದ್ದಾರೆ. ಈ ಸಿನಿಮಾವು ಮನುಷ್ಯ ಮತ್ತು ಪ್ರಕೃತಿ ಸಂಘರ್ಷದ ಕುರಿತಾಗಿದೆ. ಮಾಧ್ಯಮದೊಂದಿಗೆ ನೀಡಿದ ಸಂದರ್ಶನದಲ್ಲಿ, ರಿಷಬ್ ಶೆಟ್ಟಿ ಹೀಗೆ ಹೇಳಿದ್ದರು. “ಮನುಷ್ಯ ಮತ್ತು ಪ್ರಕೃತಿ ಸಂಘರ್ಷ ಶಾಶ್ವತವಾಗಿ ಅಸ್ತಿತ್ವದಲ್ಲಿದೆ. ಅದೇ ಕಥೆಯನ್ನು ಜನಪದ ಕಥೆಯ ಮೂಲಕ ಹೇಳುವ ಪ್ರಯತ್ನ ಮಾಡಿದ್ದೇನೆ.

Kantara movie in Tulu language: Kantara movie is going to be a hit again in Tulu language

Comments are closed.