Kareena Kapoors : ಮೂರನೇ ಬಾರಿಗೆ ತಾಯಿಯಾಗ್ತಿದ್ದಾರಾ ಕರೀನಾ ಕಪೂರ್​ ಖಾನ್​ : ಹೀಗಿತ್ತು ನಟಿಯ ಉತ್ತರ

Kareena Kapoors : ಬಾಲಿವುಡ್​ ನಟಿ ಕರೀನಾ ಕಪೂರ್​​​ ಹಾಗೂ ಸೈಫ್​ ಅಲಿ ಖಾನ್ ದಂಪತಿ ಒಂದಿಲ್ಲೊಂದು ಕಾರಣದಿಂದ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇರ್ತಾರೆ. ಎರಡು ಗಂಡು ಮಕ್ಕಳ ತಾಯಿಯಾಗಿರುವ ನಟಿ ಕರೀನಾ ಕಪೂರ್ ಮೂರನೇ ಬಾರಿಗೆ ಗರ್ಭಧರಿಸಿದ್ದಾರಾ ಎಂಬ ವದಂತಿಯು ಬಿ ಟೌನ್​ನಲ್ಲಿ ಹರಿದಾಡ್ತಿದೆ. ಈ ವಿಚಾರವಾಗಿ ಇನ್​ಸ್ಟಾಗ್ರಾಂನಲ್ಲಿ ಸಖತ್ ಫನ್ನಿಯಾಗಿ ಸ್ಪಷ್ಟನೆ ನೀಡಿರುವ ನಟಿ ಕರೀನಾ ಕಪೂರ್​ ಸೈಫ್​ ಅಲಿ ಖಾನ್​ ಈಗಾಗಲೇ ದೇಶದ ಜನಸಂಖ್ಯೆಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಪತಿ ಹಾಗೂ ತನ್ನಿಬ್ಬರು ಮಕ್ಕಳೊಂದಿಗೆ ವೆಕೇಷನ್​​ನಲ್ಲಿರುವ ನಟಿ ಕರೀನಾ ಕಪೂರ್​ರ ಫೋಟೋವೊಂದು ವೈರಲ್​ ಆದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಕರೀನಾ ಗರ್ಭಿಣಿಯಾಗಿದ್ದಾರಾ ಎಂಬ ಚರ್ಚೆಯೊಂದು ಆರಂಭವಾಗಿತ್ತು. ಕರೀನಾ ಹೊಟ್ಟೆ ದೊಡ್ಡದಾಗಿ ಕಾಣುತ್ತಿದ್ದರಿಂದ ಇಂತಹದ್ದೊಂದು ಅನುಮಾನ ಎಲ್ಲರಲ್ಲೂ ಮೂಡಿತ್ತು. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ನಟಿ ಕರೀನಾ ಕಪೂರ್​ ವೆಕೇಷನ್​​ನಲ್ಲಿ ತಾನು ತಿಂದ ಎಲ್ಲಾ ಪಾಸ್ತಾ ಹಾಗೂ ವೈನ್​​ನಿಂದಾಗಿ ಈ ರೀತಿ ಹೊಟ್ಟೆ ಬಂದಿದೆ ಎಂದು ಹೇಳಿದ್ದಾರೆ.

ಇದು ಪಾಸ್ತಾ ಹಾಗೂ ವೈನ್​ ಗೆಳೆಯರೇ.. ಶಾಂತರಾಗಿ..ನಾನು ಗರ್ಭಿಣಿಯಲ್ಲ. ಸೈಫ್​​ ಈಗಾಗಲೇ ದೇಶದ ಜನಸಂಖ್ಯೆಗೆ ಹೆಚ್ಚಿನ ಕೊಡುಗೆಯನ್ನೇ ನೀಡಿದ್ದಾರೆ. ಎಂಜಾಯ್​ ಎಂದು ಕರೀನಾ ಕಪೂರ್​ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಈ ಹಿಂದೆ ಸಂದರ್ಶನವೊಂದರಲ್ಲಿ ಕರೀನಾ ಸೈಫ್​ ಅಲಿ ಖಾನ್​ ಪ್ರತಿ ದಶಕದಲ್ಲಿ ಒಂದೊಂದು ಮಗುವಿಗೆ ತಂದೆಯಾಗಿದ್ದಾರೆ ಎಂದು ತಮಾಷೆ ಮಾಡಿದ್ದರು. ಇಪತ್ತು, ಮೂವತ್ತು, ನಲವತ್ತು ಹಾಗೂ ಈಗ ಐವತ್ತರ ವಯಸ್ಸಿನಲ್ಲಿಯೂ ಅವರು ತಂದೆಯಾಗಿದ್ದಾರೆ. ಹೀಗಾಗಿ ಅರವತ್ತನೇ ದಶಕದಲ್ಲಿ ಇದು ಸಾಧ್ಯವಿಲ್ಲ ಎಂದು ನಾನು ಈಗಾಗಲೇ ಸೈಫ್​ಗೆ ಹೇಳಿದ್ದೇನೆ ಎಂದು ಗೇಲಿ ಮಾಡಿದ್ದರು.

ತಮ್ಮ ಪುತ್ರರಾದ ತೈಮೂರ್​ ಹಾಗೂ ಜೇಹ್​ ಜೊತೆಯಲ್ಲಿ ಸಧ್ಯ ಕರೀನಾ ಕಪೂರ್ ಖಾನ್​ ಹಾಗೂ ಸೈಫ್​ ಅಲಿ ಖಾನ್​ ದಂಪತಿ ಯುರೋಪ್​ನಲ್ಲಿ ವೆಕೇಷನ್​ ಎಂಜಾಯ್​ ಮಾಡ್ತಿದ್ದಾರೆ. ಯುರೋಪ್​ಗೂ ಮುನ್ನ ಅವರು ಲಂಡನ್​ನಲ್ಲಿ ಜಾಲಿ ಮಾಡಿದ್ದರು. ತಮ್ಮ ವೆಕೇಷನ್​ ಬಗ್ಗೆ ಕರೀನಾ ಕಪೂರ್​ ಸೋಶಿಯಲ್​ ಮೀಡಿಯಾದಲ್ಲಿ ಅಪ್​ಡೇಟ್ಸ್​ ನೀಡುತ್ತಲೇ ಇದ್ದಾರೆ.

ವೃತ್ತಿ ಜೀವನದ ವಿಚಾರವಾಗಿ ಮಾತನಾಡುವುದಾದರೆ ಕರೀನಾ ಕಪೂರ್​ ಲಾಲ್​ ಸಿಂಗ್​ ಚಡ್ಡಾ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಇದು ಫಾರಸ್ಟ್​​​ ಗಂಪ್​ ಸಿನಿಮಾದ ರಿ ಮೇಕ್ ಆಗಿದೆ.

ಇದನ್ನು ಓದಿ : Sunil Shetty Praises Hardik Pandya : ಕಂಬ್ಯಾಕ್ ಸ್ಟಾರ್ ಹಾರ್ದಿಕ್ ಪಾಂಡ್ಯನನ್ನು ಹೊಗಳಿದ ಕೆ.ಎಲ್ ರಾಹುಲ್ ಭಾವೀ ಮಾವ

ಇದನ್ನೂ ಓದಿ : kambala srinivasa gowda : ಕಂಬಳದ ಉಸೇನ್​ ಬೋಲ್ಟ್​ ಖ್ಯಾತಿಯ ಶ್ರೀನಿವಾಸ ಗೌಡ ವಿರುದ್ಧ ಕ್ರಿಮಿನಲ್​ ದೂರು

Kareena Kapoors hilarious clap back at pregnancy rumors

Comments are closed.