ಕರ್ಣ-ನಿಧಿಯ ಲವ್ ಸ್ಟೋರಿ ಮತ್ತೆ ಶುರು, ಪ್ರೇಕ್ಷಕರು ಬಯಸಿದ್ದು ಇದೇನಾ?
ಜೀ ಕನ್ನಡದಲ್ಲಿ ರಾತ್ರಿ 8 ಗಂಟೆಗೆ ಪ್ರಸಾರವಾಗುವ ಕರ್ಣ ಧಾರಾವಾಹಿ ಅಂದ್ರೆ ಜನರಿಗೆ ತುಂಬಾ ಇಷ್ಟ. ಎಲ್ಲರೂ ಈ ಧಾರಾವಾಹಿಯನ್ನು ಇಷ್ಟ ಪಟ್ಟು ನೋಡ್ತಾರೆ. ಅದರಲ್ಲೂ ಕಿರಣ್ ರಾಜ್ ಅಂದ್ರೆ ಕರ್ಣ ಅವರ ನಟನೆ ತುಂಬಾ ಜನರ ಮನಸ್ಸು ಗೆದ್ದಿದೆ. ಅದೇ ರೀತಿ ನಿಧಿ ಮತ್ತೆ ನಿತ್ಯಾ ಪಾತ್ರವೂ ಜನರಿಗೆ ಇಷ್ಟ ಆಗಿದೆ. ಈಹ ಮತ್ತೆ ಕರ್ಣ-ನಿಧಿಯ ಲವ್ ಸ್ಟೋರಿ ಸ್ಟಾರ್ಟ್ ಆಗಿದೆ.
ದೂರವಾಗಿದ್ದ ನಿಧಿ-ಕರ್ಣ
ನಿಧಿಗೆ ಕರ್ಣ ಇನ್ನೇನು ಪ್ರಮೋಸ್ ಮಾಡಿ ತನ್ನ ಪ್ರೀತಿ ಹೇಳಿಕೊಳ್ಳಬೇಕು ಎಂದುಕೊಂಡಿರುತ್ತಾನೆ. ಅಷ್ಟರಲ್ಲಿ ನಿತ್ಯಾಳಾನ್ನು ಮದುವೆಯಾಗಬೇಕಿದ್ದ ತೇಜಸ್ ಓಡಿ ಹೋಗ್ತಾರೆ. ವಿಧಿಯಿಲ್ಲದೇ ಕರ್ಣ ಮತ್ತು ನಿತ್ಯಾ ಮದುವೆಯಾಗಬೇಕಾಗುತ್ತೆ. ಅದನ್ನು ನೋಡಿ ನಿಧಿ ಕುಗ್ಗಿ ಹೋಗಿರುತ್ತಾಳೆ.
ಮತ್ತೆ ಪ್ರೀತಿ ಶುರು
ಕರ್ಣ ಮತ್ತು ನಿತ್ಯಾ ಮದುವೆ ನಾಟಕ ಆಡಿರುತ್ತಾರೆ. ಈಗ ಅದು ನಿಧಿಗೆ ಗೊತ್ತಾಗಿ ಸಂತೋಷವಾಗಿದ್ದಾಳೆ. ಮತ್ತೆ ಇಬ್ಬರು ಪ್ರೀತಿ ಮಾಡಲು ಶುರು ಮಾಡಿದ್ದಾರೆ. ಜಾಲಿ ರೌಂಡ್ ಹೋಗಿದ್ದಾರೆ.
ಪ್ರೇಕ್ಷಕರು ಬಯಸಿದ್ದು ಇದನ್ನೇ..
ಇನ್ನು ಪ್ರೇಕ್ಷಕರು ಸಹ ನಿಧಿ ಮತ್ತು ಕರ್ಣ ಸರ್ ಒಂದಾಗಬೇಕು ಎಂದು ಬಯಸಿದ್ದರು. ಅಂತೆಯೇ ಧಾರಾವಾಹಿ ತಿರುವು ಪಡೆದುಕೊಳ್ಳುತ್ತಿರುವುದು ಜನರಿಗೆ ಇಷ್ಟವಾಗಿದೆ.
ಇದನ್ನೂ ಓದಿ: https://kannada.newsnext.live/cinema/ravichandran-talks-about-his-first-love-story-in-the-bigg-boss-house/
ಕರ್ಣ ಧಾರಾವಾಹಿ
“ಕರ್ಣ” ಧಾರಾವಾಹಿ ಜುಲೈ 3ರಿಂದ ಜೀ ಕನ್ನಡದಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತಿದೆ. ಇದು ಕಿರಣ್ ರಾಜ್ ಅಭಿನಯದ ಧಾರಾವಾಹಿ, ಭವ್ಯಾ ಗೌಡ ಮತ್ತು ನಮ್ರತಾ ಗೌಡ ನಾಯಕಿಯರಾಗಿ ನಟಿಸಿದ್ದಾರೆ. ಕರ್ಣನ ಪಾತ್ರದಲ್ಲಿ ಕಿರಣ್ ರಾಜ್ ವೈದ್ಯನಾಗಿ ಕಾಣಿಸಿಕೊಳ್ಳಲಿದ್ದಾರೆ, ಮತ್ತು ಈ ಧಾರಾವಾಹಿಯು ಪ್ರೀತಿ, ತ್ಯಾಗ, ಮತ್ತು ಕುಟುಂಬದ ಕಥೆಯನ್ನು ಹೇಳುತ್ತದೆ.
ಕರ್ಣ ಒಬ್ಬ ತ್ಯಾಗಮಯ ವೈದ್ಯ. ಅವನ ಕುಟುಂಬ ಅವನನ್ನು ದೂರ ಮಾಡುತ್ತದೆ, ಆದರೆ ಅವನು ಅವರ ಅನ್ನದಾತ. ಅವನ ಜೀವನದಲ್ಲಿ ನಿಧಿ ಎಂಬ ಗೆಳತಿ ಪ್ರವೇಶಿಸುತ್ತಾಳೆ, ಮತ್ತು ಅವರಿಬ್ಬರ ನಡುವೆ ಪ್ರೀತಿಯ ಸುಳಿವುಗಳು ಮೂಡುತ್ತವೆ.



