Tax exemption Gandhadagudi : ಅಪ್ಪು ಅಭಿಮಾನಿಗಳಿಗೆ ಸರ್ಕಾರದ ಗಿಫ್ಟ್ : ಗಂಧದಗುಡಿಗೆ ತೆರಿಗೆ ವಿನಾಯ್ತಿ

Tax exemption Gandhadagudi : ಸದ್ಯ ಕರ್ನಾಟಕದಲ್ಲಿ ಗಂಧದಗುಡಿ ಹವಾ ಜೋರಾಗಿದೆ. ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ (Puneeth Rajkumar) ಹಾಗೂ ಕರುನಾಡಿನ ರಾಜಕುಮಾರ್ ಪುನೀತ್ ನಿರ್ಮಿಸಿದ ಕೊನೆಯ ಸಾಕ್ಷ್ಯಚಿತ್ರವಾಗಿರೋ ಗಂಧದಗುಡಿ ರಿಲೀಸ್ ಗೆ ದಿನಗಣನೆ ನಡೆದಿದೆ. ಈಗ ಸಿನಿಮಾ ಪ್ರೀ ರಿಲೀಸ್ ಇವೆಂಟ್ ಹೊತ್ತಿನಲ್ಲೇ ಸರ್ಕಾರ ಪುನೀತ್ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡೋ ಸಿದ್ದತೆಯಲ್ಲಿದೆ. ಅದು‌ಮತ್ತೆನಲ್ಲ ಪುನೀತ್ ಸಿನಿಮಾಗೆ ಇಂದೇ ತೆರಿಗೆ ವಿನಾಯ್ತಿ ಘೋಷಣೆಯಾಗೋ ಸಾಧ್ಯತೆ ಇದೆ.

ಕರ್ನಾಟಕದ ಶ್ರೀಮಂತ ಅರಣ್ಯ ಸಂಪತ್ತು,ಸಂಸ್ಕೃತಿ,ಕಲಾಲೋಕವನ್ನು ಬಣ್ಣಿಸುವ ಗಂಧದಗುಡಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನಸಿನ ಪ್ರಾಜೆಕ್ಟ್. ಸಾಕ್ಷ್ಯಚಿತ್ರವನ್ನು ನಿರ್ಮಿಸಿ ಕರ್ನಾಟಕಕ್ಕೆ ಅರ್ಪಿಸುವ ಸಿದ್ಧತೆಯಲ್ಲಿದ್ದ ಪುನೀತ್ ಅಕಾಲಿಕವಾಗಿ ಸಾವನ್ನಪ್ಪಿದ್ದರು. ಇದಾದ ಬಳಿಕ ಅಭಿಮಾನಿಗಳಿಗೆ ನಿರಾಸೆಯಾಗಬಾರದೆಂಬ ಕಾರಣಕ್ಕೆ ಪುನೀತ್ ಪತ್ನಿ ಅಶ್ವಿನಿ ಪುನೀತ್ ಈ ಪ್ರಾಜೆಕ್ಟ್ ಕೈಗೆತ್ತಿಕೊಂಡರು. ಮಾತ್ರವಲ್ಲ ತಾವೇ ಸ್ವತಃ ಡಬ್ಬಿಂಗ್ ಕೂಡ ಮಾಡಿ ಈ ಪ್ರಾಜೆಕ್ಟ್ ಪೂರ್ತಿಗೊಳಿಸಿದರು. ಅಷ್ಟೇ ಅಲ್ಲ ಇದನ್ನು ಸಿನಿಮಾದ ರೀತಿಯಲ್ಲಿ ಪ್ರಸೆಂಟ್ ಮಾಡಲು ಹೊರಟಿರೋ ಅಶ್ವಿನಿ ಪುನೀತ್ ರಾಜ್ ಕುಮಾರ್ ಇದಕ್ಕಾಗಿ ಪುನೀತ್ ಪರ್ವ ಎಂಬ ಹೆಸರಿನಲ್ಲಿ ಅದ್ದೂರಿ ಫ್ರೀ ರಿಲೀಸ್ ಇವೆಂಟ್ ಕೂಡ ಹಮ್ಮಿಕೊಂಡಿದ್ದಾರೆ.

ಈ ಮಧ್ಯೆ ಪುನೀತ್ ಸಿದ್ಧಪಡಿಸಿದ ಕೊನೆಯ ಸಿನಿಮಾವಾಗಿರೋ ಗಂಧಗಗುಡಿಗೆ ರಾಜ್ಯ ಸರ್ಕಾರ ತೆರಿಗೆ ವಿನಾಯ್ತಿ ನೀಡಬೇಕೆಂಬ ಆಗ್ರಹ ವ್ಯಕ್ತವಾಗಿತ್ತು. ಈ ಕುರಿತು ಸ್ವತಃ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮಾ.ಹರೀಶ್ ಕೂಡ ಸರ್ಕಾರಕ್ಕೆ ಪತ್ರ ಬರೆದು ಮನವಿ ಮಾಡಿದ್ದರು. ಈಗ ಗಂಧದಗುಡಿ ಸಿನಿಮಾಗೆ ತೆರಿಗೆ ವಿನಾಯ್ತಿ ಮಾಡಲು ಸರ್ಕಾರಕ್ಕೆ ಒತ್ತಡ ಹೆಚ್ಚಿದೆ ಎನ್ನಲಾಗ್ತಿದೆ. ಚಲನಚಿತ್ರ ವಾಣಿಜ್ಯ ಮಂಡಳಿಯಿಂದಲೂ ವಿನಾಯ್ತಿಗೆ ಸರ್ಕಾರಕ್ಕೆ ಮನವಿ ಸಲ್ಲಿಕೆಯಾದ ಬೆನ್ನಲ್ಲೇ, ಸಿಎಂ ಬೊಮ್ಮಾಯಿಗೆ ಆಪ್ತ ಸಚಿವರು ಮನವಿ ಮಾಡಿದ್ದಾರಂತೆ. ಪುನೀತ್ ರಾಜಕುಮಾರ್ ನಟಿಸಿರೋ ಕಟ್ಟ ಕಡೆಯ ಚಿತ್ರ ಗಂಧದಗುಡಿ.

ಪುನೀತ್ ಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನೂ ಸರ್ಕಾರ ನೀಡುತ್ತಿದೆ. ಇದೇ ಸಂದರ್ಭದಲ್ಲಿ ಗಂಧದಗುಡಿಗೆ ತೆರಿಗೆ ವಿನಾಯ್ತಿ ನೀಡಿದರೆ ಅಪ್ಪು ಅಭಿಮಾನಿಗಳಿಗೂ ಸಂತೋಷವಾಗಲಿದೆ. ಅಲ್ಲದೇ ಪುನೀತ್ ಕೊನೆಯ ಚಿತ್ರ ಕ್ಕೆ ಸರ್ಕಾರದ ಗೌರವ ನೀಡಿದಂತಾಗುತ್ತದೆಯೆಂದು ಸಿಎಂಗೆ ಶಾಸಕರು ಸಲಹೆ ನೀಡಿದ್ದಾರಂತೆ. ಈ ಮಧ್ಯೆ ಹಲವೆಡೆಯಿಂದ ಗಂಧದಗುಡಿ ಸಿನಿಮಾಗೆ ತೆರಿಗೆ ವಿನಾಯ್ತಿ ಒತ್ತಡ ಬರ್ತಿರೋ ಹಿನ್ನೆಲೆಯಲ್ಲಿ ಗಂಧದಗುಡಿ ಸಿನಿಮಾಗೆ ತೆರಿಗೆ ವಿನಾಯತಿಗೆ ಬಗ್ಗೆ ಸಿಎಂ ಗಂಭೀರ ಚಿಂತನೆ ನಡೆಸಿದ್ದಾರಂತೆ. ಸಂಜೆ ಅರಮನೆ ಮೈದಾನದಲ್ಲಿ ನಡೆಯುವ ಪುನೀತ ಪರ್ವ ಕಾರ್ಯಕ್ರಮದಲ್ಲಿ ಭಾಗಿಯಾಗಲಿರೋ ಸಿಎಂ ಇದೇ ವೇದಿಕೆಯಲ್ಲಿ ಗಂಧದಗುಡಿಗೆ ತೆರಿಗೆ ವಿನಾಯಿತಿ ಬಗ್ಗೆ ಸಿಎಂ ಅಧಿಕೃತ ಘೋಷಣೆ ಮಾಡೋ ಸಾಧ್ಯತೆ ಕೂಡ ಇದೆ.

ಇದನ್ನೂ ಓದಿ : Dhruva Sarja KD Movie : ಕೇಡಿ ಅವತಾರದಲ್ಲಿ ಆಕ್ಷ್ಯನ್ ಪ್ರಿನ್ಸ್ : ಧ್ರುವ ಸರ್ಜಾ ಸಿನಿಮಾ ಟೈಟಲ್ ಲಾಂಚ್

ಇದನ್ನೂ ಓದಿ : Puneeth Rajkumar dream project Gandhada Gudi : ಪುನೀತ್ ರಾಜ್ ಕುಮಾರ್ ಕನಸು : ಗಂಧದಗುಡಿ ಟೀಸರ್ ತೆರೆಗೆ

Karnataka Government gift to Appu fans: Tax exemption for Puneeth Rajkumar Gandhadagudi

Comments are closed.