Rohit Sharma: ಲೆಫ್ಟ್-ರೈಟ್ ಥ್ರೋಡೌನ್, ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಹಿಟ್ ಮ್ಯಾನ್ ಸ್ಪೆಷಲ್ ಪ್ರಾಕ್ಟೀಸ್

ಮೆಲ್ಬೋರ್ನ್: (Rohit Sharma IND vs PAK ) ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಟಿ20 ವಿಶ್ವಕಪ್ (T29 World Cup 2022) ಪಂದ್ಯಕ್ಕೆ ಭಾರತ ಸಜ್ಜಾಗುತ್ತಿದ್ದು, ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ಶುಕ್ರವಾರ ಕಠಿಣ ಅಭ್ಯಾಸ ನಡೆಸಿದೆ. ಗುರುವಾರ ಬ್ರಿಸ್ಬೇನ್’ನಿಂದ ಮೆಲ್ಬೋರ್ನ್’ಗೆ ಬಂದಿಳಿಸಿದ ಟೀಮ್ ಇಂಡಿಯಾ ಆಟಗಾರರು ಶುಕ್ರವಾರ ಬೆಳಗ್ಗೆ ತಾಲೀಮು ನಡೆಸಿದರು. ಈ ವೇಳೆ ಕ್ಯಾಪ್ಟನ್ ರೋಹಿತ್ ಶರ್ಮಾ (Rohit Sharma) ಅವರ ಸ್ಪೆಷಲ್ ಪ್ರಾಕ್ಟೀಸ್ ಸೆಷನ್ ಗಮನ ಸೆಳೆಯಿತು.

ಭಾರತ ತಂಡದ ಥ್ರೋಡೌನ್ ಸ್ಪೆಷಲಿಸ್ಟ್, ಕನ್ನಡಿಗ ರಾಘವೇಂದ್ರ ಡ್ವಿಗಿ (Team India Throwdown Specialist Raghavendra DVGI) ಅವರ ಎಕ್ಸ್’ಪ್ರೆಸ್ ವೇಗದ ಎಸೆತಗಳ ಮುಂದೆ ರೋಹಿತ್ ಶರ್ಮಾ ಸುಮಾರು ಒಂದು ಗಂಟೆಯ ಕಾಲ ಬ್ಯಾಟ್ ಬೀಸಿದರು. ಮತ್ತೊಬ್ಬ ಎಡಗೈ ಥ್ರೋಡೌನ್ ಸ್ಪೆಷಲಿಸ್ಟ್ ವಿರುದ್ಧವೂ ರೋಹಿತ್ ಶರ್ಮಾ ಆಡಿದರು.

ಟೀಮ್ ಇಂಡಿಯಾದ ಬೌಲರ್’ಗಳು, ನೆಟ್ ಬೌಲರ್’ಗಳ ವಿರುದ್ಧ ಅಲ್ಲದೆ ಲೆಫ್ಟ್-ರೈಟ್ ಥ್ರೋಡೌನ್ ಸ್ಪೆಷಲಿಸ್ಟ್’ಗಳ ಮುಂದೆ ರೋಹಿತ್ ಶರ್ಮಾ ವಿಶೇಷವಾಗಿ ಅಭ್ಯಾಸ ನಡೆಸಿದ್ದಕ್ಕೂ ಒಂದು ಕಾರಣವಿದೆ. ಪಾಕಿಸ್ತಾನ ತಂಡದಲ್ಲಿ ಖತರ್ನಾಕ್ ಎಡಗೈ-ಬಲಗೈ ವೇಗಿಗಳಿದ್ದಾರೆ. ಮುಖ್ಯವಾಗಿ ಪಾಕಿಸ್ತಾನದ ಎಡಗೈ ವೇಗಿಗಳ ಮುಂದೆ ರೋಹಿತ್ ಶರ್ಮಾ ಸತತ ವೈಫಲ್ಯ ಎದುರಿಸುತ್ತಾ ಬಂದಿದ್ದಾರೆ.

2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್’ನಲ್ಲಿ ಪಾಕ್ ಎಡಗೈ ವೇಗಿ ಮೊಹಮ್ಮದ್ ಆಮೀರ್’ಗೆ ವಿಕೆಟ್ ಒಪ್ಪಿಸಿದ್ದ ರೋಹಿತ್, ಕಳೆದ ವರ್ಷ ನಡೆದ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿಪಾಕಿಸ್ತಾನದ ಮತ್ತೊಬ್ಬ ಎಡಗೈ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿಗೆ ವಿಕೆಟ್ ಒಪ್ಪಿಸಿದ್ದರು. ಹೀಗಾಗಿ ಈ ಬಾರಿ ವಿಶ್ವಕಪ್’ನಲ್ಲಿ ಶಾಹೀನ್ ಶಾ ಅಫ್ರಿದಿಯನ್ನು ಟ್ಯಾಕಲ್ ಮಾಡಲು ಎಡಗೈ ಥ್ರೋಡೌನ್’ಗಳ ವಿರುದ್ಧ ವಿಶೇಷವಾಗಿ ಅಭ್ಯಾಸ ನಡೆಸಿದ್ದಾರೆ.

ಪಾಕಿಸ್ತಾನ ತಂಡದಲ್ಲಿ ಬಲಗೈ ವೇಗಿ ಹ್ಯಾರಿಸ್ ರೌಫ್ ಕೂಡ ಖತರ್ನಾಕ್ ಬೌಲರ್, ವಿಕೆಟ್ ಟೇಕರ್. ಹೀಗಾಗಿ ಅವರನ್ನ ಟ್ಯಾಕಲ್ ಮಾಡಲು ಬಲಗೈ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ಅವರನ್ನು ನೆಟ್ಸ್’ನಲ್ಲಿ ರೋಹಿತ್ ಸರ್ಮಾ ಬಳಸಿಕೊಂಡಿದ್ದಾರೆ. ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯ (India Vs Pakistan) ಭಾನುವಾರ (ಅಕ್ಟೋಬರ್ 23) ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆಯಲಿದೆ. ಆದರೆ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದ್ದು, ಭಾನುವಾರ ಮೆಲ್ಬೋರ್ನ್’ನಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ : T20 World cup 2022 : ಟಿ20 ವಿಶ್ವಕಪ್ : ಭಾರತ ಪರ ಟಾಪ್ ಸ್ಕೋರರ್, ಬೆಸ್ಟ್ ಸ್ಟ್ರೈಕ್‌ರೇಟ್, ಟಾಪ್ ವಿಕೆಟ್ ಟೇಕರ್ ಯಾರು? ಇಲ್ಲಿದೆ ಕಂಪ್ಲೀಟ್ ಮಾಹಿತಿ

ಇದನ್ನೂ ಓದಿ : Rahul Dravid Roger Binny: ಒಬ್ಬ ಬೆಂಗಳೂರಿಗ ಟೀಮ್ ಇಂಡಿಯಾ ಕೋಚ್, ಮತ್ತೊಬ್ಬ ಬಿಸಿಸಿಐ ಬಾಸ್; ಸೂಪರ್ ಫೋಟೋ ಶೇರ್ ಮಾಡಿದ ಆರ್‌ಸಿಬಿ

Rohit Sharma Left-right throwdown, hit man special practice for match against Pakistan IND vs PAK

Comments are closed.