KCC Tournament Ticket : ಕೆಸಿಸಿ ಟೂರ್ನಮೆಂಟ್ ಟಿಕೆಟ್ ಬುಕಿಂಗ್ ಆರಂಭ : ಬುಕ್‌ ಮಾಡುವುದು ಹೇಗೆ ಗೊತ್ತಾ ?

ಕನ್ನಡ ಸಿನಿ ರಸಿಕರು ಹಾಗೂ ಕ್ರೀಡಾ ಪ್ರೇಮಿಗಳ ನೆಚ್ಚಿನ ಕ್ರಿಕೆಟ್ ಟೂರ್ನಿ ಕನ್ನಡ ಚಲನಚಿತ್ರ ಕಪ್ ( ಕೆಸಿಸಿ ) (KCC Tournament Ticket )ಆರಂಭಕ್ಕೆ ದಿನಗಣನೆ ಶುರುವಾಗಿದೆ. 2018 ಹಾಗೂ 2019ರಲ್ಲಿ ನಡೆದಿದ್ದ ಕನ್ನಡ ಚಲನಚಿತ್ರ ಕಪ್‌ನ ಮೂರನೇ ಆವೃತ್ತಿ ಈ ಬಾರಿ ನಡೆಯುತ್ತಿದ್ದು, ಬಹಳ ವರ್ಷಗಳ ಬಳಿಕ ತಮ್ಮ ನೆಚ್ಚಿನ ನಟರು ಕ್ರಿಕೆಟ್ ಆಡುವುದನ್ನು ಸಿನಿ ರಸಿಕರು ಕಾಣಬಹುದಾಗಿದೆ. ಇನ್ನು ಈಗಾಗಲೇ ಟೂರ್ನಿಯ ದಿನಾಂಕಗಳು, ತಂಡಗಳು ಹಾಗೂ ಪಂದ್ಯಗಳ ಮಾಹಿತಿ ಹೊರಬಿದ್ದಿದ್ದು, ಟೂರ್ನಿಯಲ್ಲಿ ಕಣಕ್ಕಿಳಿಯುವ ಕಲಾವಿದರು ಮೈದಾನಕ್ಕಿಳಿದು ಅಭ್ಯಾಸವನ್ನೂ ಸಹ ಆರಂಭಿಸಿದ್ದಾರೆ. ಇನ್ನು ಈ ಬಾರಿಯ ಕೆಸಿಸಿ ಟೂರ್ನಮೆಂಟ್ ಆಯೋಜನೆಯ ಜವಾಬ್ದಾರಿಯನ್ನು ಕಿಚ್ಚ ಸುದೀಪ್ ಹಾಗೂ ನಿರ್ಮಾಪಕ ಕೆಪಿ ಶ್ರೀಕಾಂತ್ ವಹಿಸಿಕೊಂಡಿದ್ದು, ಇತ್ತೀಚೆಗೆ ನಡೆದ ಪ್ರೆಸ್‌ಮೀಟ್‌ನಲ್ಲಿ ಸಿನಿ ರಸಿಕರನ್ನು ಹಾಗೂ ಕ್ರಿಕೆಟ್ ಪ್ರೇಮಿಗಳನ್ನು ಪಂದ್ಯಾವಳಿ ವೀಕ್ಷಿಸಲು ಆಹ್ವಾನಿಸಿದ್ದಾರೆ.

ಈ ಬಾರಿಯ ಕೆಸಿಸಿ ಟೂರ್ನಮೆಂಟ್ ಫೆಬ್ರವರಿ 24 ಹಾಗೂ 25ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಒಟ್ಟು ಆರು ತಂಡಗಳು ಭಾಗವಹಿಸಲಿವೆ. ಇನ್ನು ಈ ಟೂರ್ನಿಯನ್ನು ನೋಡಲು ಇಚ್ಛಿಸುವವರಲ್ಲಿ ಟಿಕೆಟ್ ಹೇಗೆ ಖರೀದಿಸಬೇಕು, ಟಿಕೆಟ್ ದರ ಎಷ್ಟಿರಲಿದೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದ್ದು ಮಾಹಿತಿ ಸಂಪೂರ್ಣ ಮಾಹಿತಿ ಇಲ್ಲಿದೆ. ಕನ್ನಡ ಚಲನಚಿತ್ರ ಕಪ್‌ನ ಟಿಕೆಟ್‌ಗಳು ಟಿಕೆಟ್ ಜೀನಿ ಡಾಟ್ ಇನ್ ( ticketgenie.in ) ವೆಬ್ ತಾಣದಲ್ಲಿ ಲಭ್ಯವಿದೆ.

ಟಿಕೆಟ್ ದರ 150ರಿಂದ 5000ರವರೆಗೂ ಇದ್ದು, ಟಿಕೆಟ್ ಜೀನಿ ಮಾತ್ರವಲ್ಲದೇ ಬುಕ್ ಮೈ ಶೋ ಹಾಗೂ ಪೇಟಿಎಮ್ ಅಪ್ಲಿಕೇಶನ್‌ಗಳಲ್ಲಿಯೂ ಸಹ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ. ಟಿಕೆಟ್‌ಗಳು 150, 250, 750, 1000, 1500, 3000 ಹಾಗೂ 5000 ರೂಪಾಯಿಗಳಿಗೆ ಲಭ್ಯವಿದೆ. ಈ ಬಾರಿಯ ಕೆಸಿಸಿಯಲ್ಲಿ ಆರು ತಂಡಗಳು ಕಣಕ್ಕಿಳಿಯಲಿದ್ದು, ಗಂಗಾ ವಾರಿಯರ್ಸ್ ತಂಡವನ್ನು ಧನಂಜಯ್ ಮುನ್ನಡೆಸಲಿದ್ದರೆ, ಕದಂಬ ಲಯನ್ಸ್ ತಂಡವನ್ನು ಗಣೇಶ್, ಒಡೆಯರ್ ಚಾರ್ಜರ್ಸ್ ತಂಡವನ್ನು ಶಿವ ರಾಜ್‌ಕುಮಾರ್, ಹೊಯ್ಸಳ ಈಗಲ್ಸ್ ತಂಡವನ್ನು ಕಿಚ್ಚ ಸುದೀಪ್, ವಿಜಯನಗರ ಪೇಟ್ರಿಯಾಟ್ಸ್ ತಂಡವನ್ನು ಉಪೇಂದ್ರ ಹಾಗೂ ರಾಷ್ಟ್ರಕೂಟ ಪ್ಯಾಂಥರ್ಸ್ ತಂಡವನ್ನು ಧ್ರುವ ಸರ್ಜಾ ಮುನ್ನಡೆಸಲಿದ್ದಾರೆ.

ಎರಡು ದಿನಗಳ ಕಾಲ ನಡೆಯಲಿರುವ ಈ ಬಾರಿಯ ಕನ್ನಡ ಚಲನಚಿತ್ರ ಕಪ್ ಟೂರ್ನಮೆಂಟ್‌ನ ಮೊದಲನೇ ದಿನ ಮೂರು ಪಂದ್ಯಗಳು ನಡೆಯಲಿವೆ. ಗಂಗಾ ವಾರಿಯರ್ಸ್ ಹಾಗೂ ಹೊಯ್ಸಳ ಈಗಲ್ಸ್ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದ್ದು, ಎರಡನೇ ಪಂದ್ಯದಲ್ಲಿ ಹೊಯ್ಸಳ ಈಗಲ್ಸ್ ಹಾಗೂ ಒಡೆಯರ್ ಚಾರ್ಜರ್ಸ್ ತಂಡಗಳು ಮುಖಾಮುಖಿಯಾಗಲಿವೆ ಮತ್ತು ಮೂರನೇ ಪಂದ್ಯದಲ್ಲಿ ಕದಂಬ ಲಯನ್ಸ್ ಹಾಗೂ ರಾಷ್ಟ್ರಕೂಟ ಪ್ಯಾಂಥರ್ಸ್ ಸೆಣಸಾಡಲಿವೆ.

ಇದನ್ನೂ ಓದಿ : Aero India  : ಪ್ರಧಾನಿ ಮೋದಿ ಔತಣಕೂಟದಲ್ಲಿ ಯಶ್, ರಿಷಬ್ ಶೆಟ್ಟಿ : ಆಯ್ತು ವೈರಲ್ ಫೋಟೊ

ಇದನ್ನೂ ಓದಿ : Jani Master : ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಜಾನಿ ಮಾಸ್ಟರ್‌ ಭೇಟಿ ವೈರಲ್‌ ಆಯ್ತು ಪೋಸ್ಟ್

ಇದನ್ನೂ ಓದಿ : ಸಿದ್ದಾರ್ಥ್- ಕಿಯಾರಾ ಅದ್ಧೂರಿ ರಿಸೆಪ್ಷನ್ ಪಾರ್ಟಿ: ಭಾಗಿಯಾದ ಬಾಲಿವುಡ್ ತಾರಾಲೋಕ

ಇನ್ನು ಎರಡನೇ ದಿನದ ಮೊದಲ ಪಂದ್ಯದಲ್ಲಿ ವಿಜಯನಗರ ಪೇಟ್ರಿಯಾಟ್ಸ್ ಹಾಗೂ ಕದಂಬ ಲಯನ್ಸ್ ಮುಖಾಮುಖಿಯಾಗಲಿದ್ದು, ಎರಡನೇ ಪಂದ್ಯದಲ್ಲಿ ಗಂಗಾ ವಾರಿಯರ್ಸ್ ಹಾಗೂ ಒಡೆಯರ್ ಚಾರ್ಜರ್ಸ್ ಸೆಣಸಾಡಲಿವೆ ಮತ್ತು ಅಂತಿಮ ಪಂದ್ಯದಲ್ಲಿ ರಾಷ್ಟ್ರಕೂಟ ಪ್ಯಾಂಥರ್ಸ್ ಹಾಗೂ ಜಯನಗರ ಪೇಟ್ರಿಯಾಟ್ಸ್ ಕಣಕ್ಕಿಳಿಯಲಿವೆ. ಈ ಮೂಲಕ ಒಂದು ತಂಡ ಒಟ್ಟು ಎರಡು ಪಂದ್ಯಗಳನ್ನು ಆಡಲಿದೆ.

KCC Tournament Ticket Booking Start: Do you know how to book?

Comments are closed.