Bomb Threat Call : ಗೂಗಲ್‌ನ ಮುಂಬೈ ಕಚೇರಿಗೆ ಬಾಂಬ್ ಬೆದರಿಕೆ : ಕರೆ ಮಾಡಿದವರ ಬಂಧನ

ಮುಂಬೈ: ಟೆಕ್ ದೈತ್ಯ ಕಂಪೆನಿಯಲ್ಲಿ ಒಂದಾದ ಗೂಗಲ್‌ ಕಛೇರಿ ಮುಂಬೈಯಲ್ಲಿ ಬಾಂಬ್‌ ಬೆದರಿಕೆ ಕರೆ (Bomb Threat Call) ಬಂದಿದೆ ಎಂದು ವರದಿ ಆಗಿದೆ. ಈಗಾಗಲೇ ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಗುರುತಿಸಿ ಬಂಧಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು (ಫೆಬ್ರವರಿ 13)ಸೋಮವಾರದಂದು ಪುಣೆಯ ಕಚೇರಿಯಲ್ಲಿ ಬಾಂಬ್ ಇರಿಸಲಾಗಿದೆ ಎಂದು ಗೂಗಲ್‌ನ ಮುಂಬೈ ಕಚೇರಿಗೆ ಬೆದರಿಕೆ ಕರೆ ಬಂದಿದೆ. ಕರೆ ಮಾಡಿದವರನ್ನು ಹೈದರಾಬಾದ್ ಮೂಲದ ಪನಯಂ ಶಿವಾನಂದ್ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಚ್ಚರಿಕೆಯ ನಂತರ, ಪುಣೆ ಪೊಲೀಸರು ಮತ್ತು ಬಾಂಬ್ ಪತ್ತೆ ಮತ್ತು ವಿಲೇವಾರಿ ದಳವು ಸ್ಥಳಕ್ಕೆ ತಲುಪಿ ವ್ಯಾಪಕ ಶೋಧ ನಡೆಸಿತು ಎಂದು ಪುಣೆ ಉಪ ಪೊಲೀಸ್ ಆಯುಕ್ತ (ವಲಯ V) ವಿಕ್ರಾಂತ್ ದೇಶಮುಖ್ ತಿಳಿಸಿದ್ದಾರೆ. ತನಿಖೆ ವೇಳೆ ಶಿವಾನಂದ್ ಕುಡಿದ ಮತ್ತಿನಲ್ಲಿ ಕರೆ ಮಾಡಿರುವುದು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ : ಟರ್ಕಿಯಲ್ಲಿ ಭೂಕಂಪನ : ಸಿರಿಯಾದಲ್ಲಿ 34,000ಕ್ಕೇರಿದ ಸಾವಿನ ಸಂಖ್ಯೆ

ಇದನ್ನೂ ಓದಿ : ಲಿಫ್ಟ್‌ ಶಾಫ್ಟ್‌ ಗೆ ಜಾರಿಬಿದ್ದು 15 ವರ್ಷದ ಬಾಲಕ ಸಾವು

ಇದನ್ನೂ ಓದಿ : Young man committed suicide: ಅಕ್ಕನ ಮನೆಗೆ ದತ್ತು ಹೋಗಿದ್ದ ತಮ್ಮ ಆತ್ಮಹತ್ಯೆ: ಸಾವಿನಲ್ಲೂ ಶಾಲೆಯ ಬಗ್ಗೆ ಪ್ರೀತಿ ತೋರಿದ ಯುವಕ

ಪುಣೆಯ ಗೂಗಲ್ ಕಚೇರಿಯಲ್ಲಿ ಬಾಂಬ್ ಇಡುವುದಾಗಿ ಕರೆ ಮಾಡಿದವರು ಮುಂಬೈನ ಬಿಕೆಸಿ ಕಚೇರಿಗೆ ಬೆದರಿಕೆ ಹಾಕಿದ್ದಾರೆ. ಕರೆ ಮಾಡಿದವರು ತನ್ನ ಹೆಸರು ಪನಯಂ ಶಿವಾನಂದ್ ಮತ್ತು ಹೈದರಾಬಾದ್ ಮೂಲದವರು ಎಂದು ಹೇಳಿದರು. ತನಿಖೆಯಲ್ಲಿ ಅನುಮಾನಾಸ್ಪದವಾದ ಏನೂ ಪತ್ತೆಯಾಗಿಲ್ಲ. ಕರೆ ಮಾಡಿದವರನ್ನು ಬಂಧಿಸಲಾಗಿದೆ ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ” ಎಂದು ಮುಂಬೈ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : Kambala racer committed suicide: ಕೆಲಸ ಕಳೆದುಕೊಂಡಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ಕಂಬಳ ಓಟಗಾರ

ಇದನ್ನೂ ಓದಿ : Doctor was shot dead: ಹಾಡಹಗಲೇ ವೈದ್ಯನನ್ನು ಗುಂಡಿಕ್ಕಿ ಹತ್ಯೆ

Bomb Threat Call: Bomb threat to Google’s Mumbai office: Caller arrested

Comments are closed.