ಕೆಡಿ‌‌ ಸಿನಿಮಾ‌‌ ಶೂಟಿಂಗ್ ವೇಳೆ ದುರಂತ : ನಟ ಸಂಜಯ್ ದತ್ ಆಸ್ಪತ್ರೆಗೆ ದಾಖಲು

ಸ್ಯಾಂಡಲ್‌ವುಡ್‌ ಜೋಗಿ ಸಿನಿಮಾ ಖ್ಯಾತಿಯ ಪ್ರೇಮ್‌ ನಿರ್ದೇಶನದ ಕೆಡಿ ಸಿನಿಮಾದ (KD movie – Sanjay Datt) ಶೂಟಿಂಗ್‌ ವೇಳೆ ಅವಘಡ ಸಂಭವಿಸಿದೆ. ನಟ ಸಂಜಯ್‌ ದತ್‌ ಈ ಸಿನಿಮಾದ ಬಾಂಬ್ ಬ್ಲಾಸ್ಟ್ ದೃಶ್ಯದ ಶೂಟಿಂಗ್‌ ವೇಳೆ ಗಾಯಗೊಂಡಿದ್ದಾರೆ.

ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆದುಕೊಂಡ ಸಂಜಯ್ ದತ್ ಮುಂಬೈಗೆ ವಾಪಸ್ ಆಗಿದ್ದಾರೆ. ಸಂಜಯ್‌ ದತ್ ಅವರ ಮುಖ, ಮೊಣಕೈಗೆ ಗಾಯಗಳಾಗಿವೆ. ಆತಂಕ ಪಡುವ ಅಗತ್ಯವೇನೂ ಇಲ್ಲ. ಹೀಗಾಗಿ ಗಾಯ ಸೀರಿಯಸ್ ಆಗಿಲ್ಲ. ಆದರೆ ತಾತ್ಕಾಲಿಕವಾಗಿ ಶೂಟಿಂಗ್‌ಗೆ ಬ್ರೇಕ್ ಬಿದ್ದಿದೆ. ಮಾಗಡಿ ರೋಡ್‍ನಲ್ಲಿ ಹಾಕಿರುವ ಸೆಟ್‍ನಲ್ಲಿ ಸಾಹಸ ನಿರ್ದೇಶಕ ರವಿವರ್ಮ ಸೆಟ್ ಹಾಕಿ ಶೂಟಿಂಗ್‌ ಮಾಡುತ್ತಿದ್ದರು. ಈ ವೇಳೆ ಬಾಂಬ್ ಸ್ಫೋಟದ ದೃಶ್ಯ ಶೂಟಿಂಗ್ ವೇಳೆ ಈ ಅಪಘಾತ ಸಂಭವಿಸಿದೆ. 1970ರ ಕಾಲಘಟ್ಟದ ಕಥೆಯಲ್ಲಿ ಸಂಜಯ್ ದತ್ ಪ್ರಮುಖ ವಿಲನ್ ರೋಲ್ ಮಾಡುತ್ತಿದ್ದಾರೆ.

ಘಟನೆಯ ಬಗ್ಗೆ ಸಂಜಯ್ ದತ್ ನಾನು ಗಾಯಗೊಂಡಿದ್ದೇವೆ ಎಂಬ ಸುದ್ದಿ ಹರದಾಡುತ್ತಿದೆ. ಆ ಸುದ್ದಿಗಳು ಸಂಪೂರ್ಣವಾಗಿ ಆಧಾರರಹಿತ, ನನಗೆ ಏನೂ ಆಗಿಲ್ಲ ದೇವರ ದಯೆಯಿಂದ ನಾನು ಆರೋಗ್ಯವಾಗಿದ್ದೇನೆ. ನಾನು ಕೆಡಿ ಸಿನಿಮಾದ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದೇನೆ, ನನ್ನ ದೃಶ್ಯಗಳನ್ನು ಚಿತ್ರೀಕರಿಸುವಾಗ ಸಿನಿತಂಡವು ಹೆಚ್ಚಿನ ಎಚ್ಚರಿಕೆ ವಹಿಸುತ್ತಿದೆ. ನನ್ನ ಆರೋಗ್ಯದ ಬಗ್ಗೆ ಕಾಳಜಿವಹಿಸಿ ವಿಚಾರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಡಾ. ರಾಜ್‌ಕುಮಾರ್‌ 17ನೇ ವರ್ಷದ ಪುಣ್ಯತಿಥಿ : ಭಾವನ್ಮಾಕವಾಗಿ ನಮನ ಸಲ್ಲಿಸಿದ ಸಿಎಂ ಬೊಮ್ಮಾಯಿ

ಇದನ್ನೂ ಓದಿ : ಇಂದು ಡಾ. ರಾಜ್‌ಕುಮಾರ್‌ 17ನೇ ವರ್ಷದ ಪುಣ್ಯತಿಥಿ : ಸ್ಮಾರಕ ಬಳಿ ಸೇರಿದ ಜನಸ್ತೋಮ

ಕೆಡಿ ಸಿನಿಮಾದ ಸಹ ನಿರ್ಮಾಪಕ ಸುಪ್ರೀತ್, “ಕಾರಿನಲ್ಲಿ ಬಾಂಬ್ ಬ್ಲಾಸ್ಟ್ ನ ದೃಶ್ಯದ ಶೂಟಿಂಗ್‌ ಮಾಡುವಾಗ ಸಂಜಯ್ ದತ್ ಅವರ ಕಣ್ಣಿಗೆ ಗ್ಲಾಸ್ ಸಿಡಿದಿದು ರಕ್ತ ಬಂದಿದೆ. ಕೂಡಲೇ ಪ್ರಥಮ ಚಿಕಿತ್ಸೆ ನೀಡಿ ಸಂಜಯ್ ದತ್ ಶೀಘ್ರವೇ ಮುಂಬೈಗೆ ಸ್ಥಳಾಂತರಿಸಲಾಗಿದ್ದು, ಸಂಜಯ್ ದತ್ ಸದ್ಯಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ. ಅವಘಡದ ಬಳಿಕ ಶೂಟಿಂಗ್ ಅನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ” ಎಂದು ಹೇಳಿದರು. ಜೋಗಿ ಪ್ರೇಮ್ ನಿರ್ದೇಶನದ ಕೆಡಿ ಸಿನಿಮಾದಲ್ಲಿ ಸಂಜಯ್ ದತ್, ರವಿಚಂದ್ರನ್, ಶಿಲ್ಪಾ ಶೆಟ್ಟಿ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ನಟಿಸುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್‍ನವರ ಕೆಡಿ ಮುಂದಿನ ವರ್ಷ ತೆರೆಗೆ ಬರುವ ನಿರೀಕ್ಷೆ ಇದೆ.

KD movie – Sanjay Datt Tragedy during shooting of KD movie: Actor Sanjay Dutt admitted to hospitalSanjay Datt admitted to hospital

Comments are closed.